Breaking; ಜಮೀರ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ; ವಿಶೇಷ ಔತಣ!

ಬೆಂಗಳೂರು, ಆಗಸ್ಟ್ 15; ಪ್ರತಿಪಕ್ಷ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸಕ್ಕೆ ಭೇಟಿ ನೀಡಿದರು. ಕೆಲವು ದಿನಗಳ ಹಿಂದೆ ಜಮೀದ್ ನಿವಾಸದ ಮೇಲೆ ಇಡಿ ದಾಳಿ ನಡೆದಿತ್ತು.

ಭಾನುವಾರ ಸಿದ್ದರಾಮಯ್ಯ ಜಮೀರ್ ಅಹ್ಮದ್ ಖಾನ್ ನಿವಾಸಕ್ಕೆ ಭೇಟಿ ನೀಡಿದರು. ಸಿದ್ದರಾಮಯ್ಯ ಜಮೀರ್ ಮನೆಯಲ್ಲಿಯೇ ವಿಶೇಷ ಔತಣವನ್ನು ಸವಿದರು. ಇಡಿ ದಾಳಿ ಬಳಿಕ ಆಪ್ತನ ಮನೆಗೆ ಸಿದ್ದರಾಮಯ್ಯ ಮೊದಲ ಬಾರಿ ಭೇಟಿ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, "ಗೃಹ ಪ್ರವೇಶಕ್ಕೆ ಬರಲು ಆಗಿರಲಿಲ್ಲ. ನಿವಾಸಕ್ಕೆ ಬನ್ನಿ ಎಂದು ಜಮೀರ್ ಪದೇ ಪದೇ ಕರೆಯುತ್ತಿದ್ದರು. ನಿನ್ನೆ ಸಹ ಔತಣಕೂಟಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು" ಎಂದರು.

Siddaramaiah Visited Zameer Ahmed Khan House

"ಇದೊಂದು ಖಾಸಗಿ ಭೇಟಿ. ಯಾವುದೇ ರಾಜಕೀಯದ ವಿಚಾರ ಮಾತನಾಡಿಲ್ಲ. ಮನೆಗೆ ಬಂದು ಊಟ ಮಾಡಿದ್ದೇನೆ. ಜಾರಿ ನಿರ್ದೇಶನಾಲಯ ದಾಳಿ ಮಾಡಿದ ವಿಚಾರವನ್ನು ಜಮೀರ್ ಮತ್ತು ಅವರ ವಕೀಲರು ನೋಡಿಕೊಳ್ಳುತ್ತಾರೆ" ಎಂದು ಸಿದ್ದರಾಮಯ್ಯ ಸಷ್ಟಪಡಿಸಿದರು.

ಜಾರಿ ನಿರ್ದೇಶನಾಲಯದ ದಾಳಿ ಬಳಿಕ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಖಾನ್ ನಡುವೆ ಬಿರುಕು ಉಂಟಾಗಿದೆ ಎಂಬ ವರದಿಗಳು ಬಂದಿದ್ದವು. ಇಡಿ ದಾಳಿ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜಮೀರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು.

ಸಿದ್ದರಾಮಯ್ಯ ಜಮೀರ್ ನಿವಾಸಕ್ಕೆ ಆಗಮಿಸಿರಲಿಲ್ಲ. ಇಡಿ ದಾಳಿ ನಡೆದ ದಿನ ಟ್ವೀಟ್ ಮಾಡಿ ಇದು ರಾಜಕೀಯ ಪ್ರೇರಿತ ದಾಳಿ ಎಂದು ಖಂಡಿಸಿದ್ದರು. ಜಮೀರ್ ಸಹ ಸಿದ್ದರಾಮಯ್ಯ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ.

ಸಿದ್ದರಾಮಯ್ಯ 74ನೇ ಹುಟ್ಟು ಹಬ್ಬದ ದಿನ ಜಮೀರ್ ಅಹ್ಮದ್ ಖಾನ್ ಹೈದರಾಬಾದ್‌ನಲ್ಲಿದ್ದರು. ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸುವ ಸಂದರ್ಭದಲ್ಲಿಯೇ ಕರೆ ಮಾಡಿ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಿದ್ದರು.

ಭಾನುವಾರ ಸಿದ್ದರಾಮಯ್ಯ, ಹೆಬ್ಬಾಳ ಶಾಸಕ ಬೈರತಿ ಸುರೇಶ್ ಸೇರಿದಂತೆ ಹಲವು ನಾಯಕರು ಜಮೀರ್ ಅಹ್ಮದ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಜಮೀರ್ ಮನೆಯಲ್ಲಿಯೇ ಔತಣ ಸವಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+