ನಾನು 2023ಕ್ಕೆ ಸಿಎಂ ಆಗ್ಬೇಕು ಅಂದಿದ್ದು, ಉಲ್ಟಾ ಹೊಡೆದ ಸಿದ್ದರಾಮಯ್ಯ
Recommended Video

ಬೆಂಗಳೂರು, ಆಗಸ್ಟ್ 25: 'ನಾನು 2023ಕ್ಕೆ ಸಿಎಂ ಆಗ್ಬೇಕು' ಎಂದು ಹೇಳಿದ್ದು ಎಂದು ಮತ್ತೆ ಸಿಎಂ ಆಗುತ್ತೇನೆ ಎಂಬ ಹೇಳಿಕೆಗೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಹಾಸನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾ ರಾಜಕೀಯ ಎನ್ನುವುದು ಇಂದಿನ ದಿನಗಳಲ್ಲಿ ಹಣ, ಜಾತಿಯ ಆಧಾರದ ಮೇಲೆ ನಿಂತಿದೆ, ಇದು ರಾಜಕೀಯ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆ ಎನಿಸಿಕೊಳ್ಳುವುದಿಲ್ಲ, ಒಂದು ಹುದ್ದೆಯನ್ನು ಅಲಂಕರಿಸಿದ ಮೇಲೆ ಎಲ್ಲ ಜಾತಿ, ಧರ್ಮದ ಪರವಾಗಿಯೂ ಕೆಲಸ ಮಾಡಬೇಕಾಗುತ್ತದೆ.
ಆದರೆ ನನ್ನ ಐದು ವರ್ಷ ಆಡಳಿತದಲ್ಲಿ ಎಲ್ಲಾ ಜಾತಿಯ ಬಡ ವರ್ಗದವರಿಗೆ ಸಹಾಯ ಮಾಡಿದ್ದೇನೆ, ಜನರು ಮತ್ತೆ ನನಗೆ ಆಶೀರ್ವಾದ ಮಾಡುತ್ತಾರೆ, ನಾನು ಸಿಎಂ ಆಗೇ ಆಗುತ್ತೇನೆ ಎಂದು ವಿಶ್ವಾಸ ವ್ಯಪಡಿಸಿದ್ದರು. ರಾಜಕೀಯದಲ್ಲಿ ನಾನು ಯಾರಿಗೂ ಹೆದರುವುದಿಲ್ಲ, ಮುಂದೆಯೂ ಹೋರಾಡುತ್ತೇನೆ ಎಂದಿದ್ದರು.

ಈ ಕುರಿತು ಸ್ಪಷ್ಟನೆ ನೀಡಿರುವ ಅವರು 2023ಕ್ಕೆ ಸಿಎಂ ಆಗುತ್ತೇನೆ ಎಂದು ಹೇಳಿದ್ದೆ, ನನ್ನ ಹೇಳಿಕೆಗೆ ಏನೇನೋ ಅರ್ಥ ಕಲ್ಪಿಸುವುದು ಬೇಡ, ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ, ಆ ಸಂದರ್ಭದಲ್ಲಿ ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದರು.












Click it and Unblock the Notifications