'ಬಿಜೆಪಿಯವರು ಮೊದಲು ಅವರನ್ನು ರಕ್ಷಣೆ ಮಾಡಿಕೊಳ್ಳಬೇಕು'
ಬೆಂಗಳೂರು, ಮಾರ್ಚ್ 02 : 'ಬೆಂಗಳೂರನ್ನು ಹಾಳು ಮಾಡಿದ್ದು ಬಿಜೆಪಿಯವರು. ಮೊದಲು ಅವರನ್ನು ಅವರು ರಕ್ಷಣೆ ಮಾಡಿಕೊಳ್ಳಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯ 'ಬೆಂಗಳೂರು ರಕ್ಷಿಸಿ' ಪಾದಯಾತ್ರೆಯನ್ನು ವ್ಯಂಗ್ಯವಾಡಿದರು.
ಶುಕ್ರವಾರ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, 'ಬೆಂಗಳೂರು ನಗರ ಗಾರ್ಡನ್ ಸಿಟಿಯಾಗಿತ್ತು ಅದನ್ನು ಹಾಳು ಮಾಡಿದವರು ಬಿಜೆಪಿ. ಕೆರೆಗಳನ್ನು ಹಾಳು ಮಾಡಿದವರು ಬಿಜೆಪಿಯವರೇ, ಬಿಬಿಎಂಪಿ ಆಸ್ತಿಗಳನ್ನು ಅಡಮಾಡ ಇಟ್ಟವರು ಅವರೇ. ಪಾದಯಾತ್ರೆಯಲ್ಲಿ ಇವೆಲ್ಲವನ್ನು ಅವರು ಜನರ ಮುಂದಿಡಬೇಕು' ಎಂದು ಹೇಳಿದರು.

'ಬಿಜೆಪಿಯವರು 5 ವರ್ಷ ಬಿಬಿಎಂಪಿಯಲ್ಲಿ ಆಡಳಿತ ನಡೆಸಿದರು. ಆಗ ಬಿಬಿಎಂಪಿ ಫೈಲ್ ಗಳನ್ನೆಲ್ಲ ಸುಟ್ಟು ಹಾಕಿದವರು ಯಾರು?. ನೈಟ್ ಟೆಂಡರ್ ಕರೆದವರು ಯಾರು?. ಎಷ್ಟೋ ಫೈಲ್ ಗಳನ್ನು ಹಾಗೇ ಉಳಿಸಿದವರು ಯಾರು?. ಪಾಲಿಕೆ ಆಸ್ತಿಗಳನ್ನು ಅಡ ಇಟ್ಟವರು ಯಾರು?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
In Pics : ರಾಜ್ಯ ಸರಕಾರದ ವಿರುದ್ಧ ಬೆಂಗಳೂರು ರಕ್ಷಿಸಿ ಪಾದಯಾತ್ರೆ
'ಬಿಬಿಎಂಪಿಗೆ ಬಿಜೆಪಿಯವರು 110 ಹಳ್ಳಿಗಳನ್ನು ಸೇರಿಸಿದರು. ಈ ಹಳ್ಳಿಗಳಿಗೆ ನೀರು ಕೊಟ್ಟರೇ?, ರಸ್ತೆ ಕೊಟ್ಟರೇ? ಇದನ್ನೆಲ್ಲ ಬಿಜೆಪಿಯವರು ಜನರಿಗೆ ಹೇಳಬೇಕು ಅಲ್ವಾ?. ಪಾದಯಾತ್ರೆ ಮಾಡೋರು ಜನರಿಗೆ ಸತ್ಯ ಹೇಳಬೇಕು. ಪಾದಯಾತ್ರೆಯಲ್ಲಿ ಸುಳ್ಳು ಪ್ರಚಾರ ಮಾಡುವುದಲ್ಲ' ಎಂದರು.












Click it and Unblock the Notifications