ಬೆಂಗಳೂರಿಗೆ ಮರಳಿದ ಸಿಎಂ, ಅಧಿವೇಶನಕ್ಕೆ ಗೈರು!
ಬೆಂಗಳೂರು, ಡಿ. 5 : ಚಳಿಗಾಲದ ಅಧಿವೇಶನದ ಎರಡು ದಿನ ಬಾಕಿ ಉಳಿದಿರುವಂತೆಯೇ ಸಿಎಂ ಸಿದ್ದರಾಮಯ್ಯ ಬೆಂಗಳೂರು ವಿಮಾನವೇರಿದ್ದಾರೆ. ಗುರುವಾರ ಮತ್ತು ಅಧಿವೇಶನದ ಕೊನೆಯ ದಿನವಾದ ಶುಕ್ರವಾರದ ಕಲಾಪದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಳ್ಳುತ್ತಿಲ್ಲ. ಗುರುವಾರ ರಾತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ.
ಬುಧವಾರದ ವಿಧಾನಸಭೆ ಕಲಾಪಗಳು ಅಂತ್ಯಗೊಳ್ಳುತ್ತಿದ್ದಂತೆಯೇ ಸಿಎಂ ಸಿದ್ದರಾಮುಯ್ಯ ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ವಿಮಾನ ಮೂಲಕ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಗುರುವಾರ ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ಉದ್ಘಾಟಿಸಿಲಿರುವ ಸಿಎಂ, ಶುಕ್ರವಾರ ದೆಹಲಿಗೆ ಭೇಟಿ ನೀಡಲಿದ್ದಾರೆ. (ಬುಧವಾರ ಸದನದಲ್ಲಿ ಏನಾಯ್ತ?)

ಸಿಎಂ ಬೆಂಗಳೂರಿಗೆ ವಾಪಸ್ ಆಗಿರುವುದರಿಂದ ಗುರುವಾರ ಮತ್ತು ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರದ ಕಲಾಪದಲ್ಲಿ ಪಾಲ್ಗೊಳ್ಳುತ್ತಿಲ್ಲ. ಶುಕ್ರವಾರ ನವದೆಹಲಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಯುವ ರಾಜ್ಯಗಳ ಸಿಎಂಗಳ ಸಭೆ ನಿಗದಿಯಾಗಿದ್ದು, ಅದರಲ್ಲಿ ಸಿದ್ದರಾಮಯ್ಯ ಭಾಗವಹಿಸುತ್ತಿದ್ದಾರೆ.
ನಿಗದಿತ ಕಾರ್ಯಕ್ರಮದಂತೆ ಗುರುವಾರ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಬೆಂಗಳೂರು ಇಂಡಿಯಾ ನ್ಯಾನೋ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಡಿಯಾಲಜಿ ಸೊಸೈಟಿಯ ಕಾರ್ಯಕ್ರಮ ಉದ್ಘಾಟಿಸಿ, ಗುರುವಾರ ಸಂಜೆ ಸಿಎಂ ದೆಹಲಿಗೆ ತೆರಳಲಿದ್ದಾರೆ. (ಸಕ್ಕರೆ ಕಾಯಿಲೆ ಶಮನಗೊಳಿಸಿದ ಸಿದ್ದರಾಮಯ್ಯ!)
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಗುರುವಾರ ಒಂಭತ್ತನೇ ದಿನಕ್ಕೆ ತಲುಲಿದೆ. ಶುಕ್ರವಾರ ಅಧಿವೇಶನದ ಕೊನೆಯ ದಿನವಾಗಿದೆ. ಆದರೆ, ಪ್ರಧಾನಿ ಜೊತೆಗೆ ಸಭೆ ನಿಗದಿ ಆಗಿರುವ ಕಾರಣ ಸಿಎಂ ಸಿದ್ದರಾಮುಯ್ಯ ಎರಡು ದಿನ ಕಲಾಪದಿಂದ ದೂರ ಉಳಿಯಲಿದ್ದಾರೆ.












Click it and Unblock the Notifications