• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೇವೇಗೌಡರ 'ಹಳೆಯ ಆಟ' ನೆನಪಿಸಿ, ಮತ್ತೆ ಬೆಂಕಿಯುಗುಳಿದ ಸಿದ್ದರಾಮಯ್ಯ

|

ಬೆಂಗಳೂರು, ಆಗಸ್ಟ್ 23: "ದೇವೇಗೌಡರು ರಾಜಕೀಯವಾಗಿ ಮೇಲೆಬರಲು ಏನೆಲ್ಲ ಮಾಡಿದರು ಎಂಬ ಕುರಿತು, ಅವರ 'ಹಳೆಯ ಆಟ'ದ ಬಗ್ಗೆ ನನಗೆ ಗೊತ್ತು" ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ರಿಕಾಗೋಷ್ಠಿಯ ನಂತರ ಮತ್ತೆ ಟ್ವಿಟ್ಟರ್ ನಲ್ಲೂ ದೇವೇಗೌಡರ ವಿರುದ್ದ ಬೆಂಕಿಯುಗುಳಿದ್ದಾರೆ.

"ತಾವು ವಿರೋಧ ಪಕ್ಷದ ನಾಯಕರಾಗಬೇಕೆಂಬ ಕಾರಣಕ್ಕೆ ಸಿದ್ದರಾಮಯ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿದರು" ಎಂದಿದ್ದ ದೇವೇಗೌಡರ ಆರೋಪಕ್ಕೆ ಕೆಂಡಾಮಂಡಲವಾದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಇಂದು ಪತ್ರಿಕಾಗೋಷ್ಠಿ ಕರೆದು ದೇವೇಗೌಡರ ವಿರುದ್ಧ ಹರಿಹಾಯ್ದಿದ್ದರು.

   ದೇವೇಗೌಡ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ | Siddaramaiah | Oneindia Kannada

   ಸಿದ್ದರಾಮಯ್ಯ- ದೇವೇಗೌಡರ ಮಧ್ಯೆ ಹಸಿ ಹುಲ್ಲು ಹಾಕಿದರೂ ಧಗ್ಗೆನ್ನುವ 23 ವರ್ಷದ ಹಗೆತನ

   ಇದೀಗ ಸಾಲು ಸಾಲು ಟ್ವೀಟ್ ಗಳ ಮೂಲಕ ತಮ್ಮ ಹಳೆಯ ಗುರುಗಳ, 'ಹಳೆಯ ಆಟ'ಗಳ ಗುಟ್ಟು ಬಿಚ್ಚಿಟ್ಟಿದ್ದಾರೆ! ಅವರ ಸಾಲು ಸಾಲು ಟ್ವೀಟ್ ಗಳ ಯಥಾವತ್ ಪ್ರತಿ ಇಲ್ಲಿದೆ. ಇದರಲ್ಲಿ ಕೆಲವು ಪತ್ರಿಕಾ ಗೋಷ್ಠಿಯನ್ನೇ ಪುನರುಚ್ಚರಿಸಿದಂತಿತ್ತು.

   ದೇವೇಗೌಡರ ಹಳೆಯ ಆಟ!

   ದೇವೇಗೌಡರ ಹಳೆಯ ಆಟ!

   "ತನ್ನನ್ನು ಪ್ರಧಾನಿ ಮಾಡಲು ಬೆಂಬಲಿಸಿದ ಪಕ್ಷಕ್ಕೆ ದ್ರೋಹ ಬಗೆದವರು ದೇವೇಗೌಡರು. ಆಗಿನ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸೀತಾರಾಮ್ ಕೇಸರಿಯವರ ವಿರುದ್ಧದ ಹಳೆ ಪ್ರಕರಣವನ್ನು ಹುಡುಕಿ ಅವರನ್ನೇ ಜೈಲಿಗೆ ಕಳುಹಿಸುವ ಸಂಚು ಮಾಡಿದವರು ದೇವೇಗೌಡರು. ಇವೆಲ್ಲ ದೇವೇಗೌಡರ ಹಳೆಯ ಆಟ."- ಸಿದ್ದರಾಮಯ್ಯ

   ಹೊಸ ನಾಟಕ ಶುರುಮಾಡಿರುವುದಕ್ಕೆ ಕಾರಣ?

   ಹೊಸ ನಾಟಕ ಶುರುಮಾಡಿರುವುದಕ್ಕೆ ಕಾರಣ?

   "ಈಗ ದೇವೇಗೌಡರು ಇದ್ದಕ್ಕಿದ್ದ ಹಾಗೆ ಆರೋಪಗಳ ಸುರಿಮಳೆಗೈಯ್ಯಲು ಕಾರಣಗಳೇನು ಎನ್ನುವುದು ತಿಳಿಯದಷ್ಟು ನಾನು ದಡ್ಡನಲ್ಲ. ಇದರಲ್ಲಿ ಯಾರೆಲ್ಲ ಷಾಮೀಲಾಗಿದ್ದಾರೆ ಎನ್ನುವುದು ಮುಂದೆ ಹೇಳ್ತೇನೆ. ನಾನೇನಾದರೂ ವಿರೋಧಪಕ್ಷದ ನಾಯಕರಾಗಿಬಿಟ್ಟರೆ ಹೇಗೆ ಎಂಬ ಚಿಂತೆಯಿಂದ ಗೌಡರು ಈಗ ಹೊಸ ನಾಟಕ ಶುರು ಮಾಡಿದ್ದಾರೆ." - ಸಿದ್ದರಾಮಯ್ಯ

   ಮೈತ್ರಿ ಸರಕಾರ ಬೀಳಲು, ತಾವು- ತಮ್ಮ ಮೊಮ್ಮಗನ ಸೋಲಿಗೆ ಕಾರಣ ಹೊರಗಿಟ್ಟ ದೇವೇಗೌಡರು

   ಬಿಜೆಪಿಯನ್ನು ಮೆಚ್ಚಿಸುವ ಯತ್ನ?!

   ಬಿಜೆಪಿಯನ್ನು ಮೆಚ್ಚಿಸುವ ಯತ್ನ?!

   "ಲಿಂಗಾಯತ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ ಹೀಗೆ ನನ್ನನ್ನು ತಪ್ಪಾಗಿ ಬಿಂಬಿಸಿದ್ದೆ ಹೆಚ್ಚು. 5 ವರ್ಷದ ನನ್ನ ಕಾರ್ಯಕ್ರಮ ಎಲ್ಲ ಜಾತಿ, ಧರ್ಮಗಳನ್ನು ಮೀರಿ ವಿಸ್ತರಿಸಿದೆ. ನನಗೆ ಸರ್ಟಿಫಿಕೇಟ್ ಕೊಡುವುದು ಜನರೇ ಹೊರತು, ದೇವೇಗೌಡರಲ್ಲ. ಬಿಜೆಪಿಯನ್ನು ಮೆಚ್ಚಿಸಲು ದೇವೇಗೌಡರು ನನ್ನ ಮೇಲೆ ಸುಳ್ಳು ಆರೋಪ ಮಾಡಿರಬಹುದು." -ಸಿದ್ದರಾಮಯ್ಯ

   ಸೋಲಿಗೆ ತಾತ-ಮೊಮ್ಮಕ್ಕಳು ಕಾರಣ

   ಸೋಲಿಗೆ ತಾತ-ಮೊಮ್ಮಕ್ಕಳು ಕಾರಣ

   "ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಸೋಲಿಗೆ ತಾತ-ಮೊಮ್ಮಕ್ಕಳು ಕೂಡಿ ಸ್ಪರ್ಧಿಸಿದ್ದು ಕಾರಣ. ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ರಾಜ್ಯದ ಮತದಾರರು ಬೇಸತ್ತುಹೋಗಿದ್ದಾರೆ." -ಸಿದ್ದರಾಮಯ್ಯ

   English summary
   Former chief minister of Karnataka Siddaramaiah on twitter again attacks Former PM, JDS Supremo HD Deve Gowda.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X