ಆರೋಪಗಳನ್ನು ಮೆಡಲ್ ಎಂದು ಪರಿಗಣಿಸುವ ಸಿದ್ದು ಸರ್ಕಾರ: ಅಮಿತ್
ಸಿದ್ದರಾಮಯ್ಯ ಸರ್ಕಾರ ಆರೋಪಗಳನ್ನು ಪದಕಗಳೆಂದು ಪರಿಗಣಿಸಿದೆ ಎಂದು ಲೇವಡಿ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ನೇರವಾಗಿ ಆರೋಪಿಸಿದ ಅಮಿತ್ ಶಾ.
ಬೆಂಗಳೂರು, ಆಗಸ್ಟ್ 14 : ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ತನ್ನ ವಿರುದ್ಧದ ಆರೋಪಗಳನ್ನು ಪದಕಗಳೆಂದು ಪರಿಗಣಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ನಗರದ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಸೋಮವಾರ ಮಧ್ಯಾಹ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಸಾಮಾನ್ಯವಾಗಿ ಯಾವುದೇ ಸರ್ಕಾರದ ವಿರುದ್ಧ ಆರೋಪಗಳು ಕೇಳಿಬಂದರೆ, ಆ ಸರ್ಕಾರ ತಲೆ ತಗ್ಗಿಸುತ್ತದೆ. ಆದರೆ, ಸಿದ್ದರಾಮಯ್ಯ ಸರ್ಕಾರ ಆರೋಪಗಳನ್ನು ಪದಕಗಳೆಂದು ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಪದಕಗಳನ್ನು ಪಡೆಯಲು ಹಪಹಪಿಸುತ್ತಿದೆ'' ಎಂದು ಅವರು ವ್ಯಂಗ್ಯವಾಡಿದರು.

ನಮ್ಮದು ಸ್ವಚ್ಛ ಸರ್ಕಾರ
ಸದಾ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಕಾಂಗ್ರೆಸ್ಸಿಗರು,ಕೇಂದ್ರ ಸರ್ಕಾರದ ಸ್ವಚ್ಛ ಆಡಳಿತವನ್ನು ಮನಗಾಣುತ್ತಿಲ್ಲ. ನಮ್ಮ ಸರ್ಕಾರ (ಬಿಜೆಪಿ) ಕೇಂದ್ರದಲ್ಲಿ ಉತ್ತಮ ಆಡಳಿತ ಕೊಡುತ್ತಿದೆ. ಜಿಎಸ್ ಟಿ, ಮುದ್ರಾ ಯೋಜನೆಯಂಥ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನಪರ ಆಡಳಿತ ನೀಡುತ್ತಿದೆ ಎಂದು ಅವರು ಹೇಳಿದರು.












Click it and Unblock the Notifications