ದ್ವಿತೀಯ ದರ್ಜೆ ನೌಕರರ ಕನಿಷ್ಠ ವಿದ್ಯಾರ್ಹತೆ ಹೆಚ್ಚಳ

ದ್ವಿತೀಯ ದರ್ಜೆ ಹಾಗೂ ಡಿ ಗ್ರೂಪ್ ನೌಕರರ ನೇಮಕಾತಿಗೆ ಸಂಬಂಧಿಸಿದಂತೆ ಕನಿಷ್ಠ ವಿದ್ಯಾರ್ಹತೆಯಲ್ಲಿ ಬದಲಾವಣೆ ತರಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಿವಿಲ್ ಸೇವಾ ನಿಯಮ (ನೇಮಕಾತಿ) 1978 ಹಾಗೂ 1997ರ ಕಾಯ್ದೆಗೆ ತಿದ್ದುಪಡಿ ತಂದು ಪ್ರಸ್ತುತ ಇರುವ ಎಸ್‌ಎಸ್‌ಎಲ್‌ಸಿ ಹಾಗೂ ಏಳನೆ ತರಗತಿ ಉತ್ತೀರ್ಣವನ್ನು ಕೈ ಬಿಟ್ಟು ಹೆಚ್ಚಿನ ವ್ಯಾಸಂಗ ನಿಗದಿಪಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಇದೇ ವೇಳೆ ಪ್ರಮುಖವಾಗಿ ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ವಿವಿಧ ಸರ್ಕಾರಿ ನಿಗಮಗಳಿಗೆ ಬಂಡವಾಳ ಹೆಚ್ಚಿಸಲು ಹೊಸ ಬಂಡವಾಳ ಪ್ರೋತ್ಸಾಹ ನೀತಿ ಜಾರಿಗೆ ತರಲು ನಿರ್ಧರಿಸಲಾಗಿದೆ.
ಹೈಕೋರ್ಟಿನ ಹಾಲ್ ಗಳಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ ಕಲ್ಪಿಸಲು 8 ಕೋಟಿ ರೂ, ರಾಯಚೂರಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉಪಕರಣಗಳ ಖರೀದಿಗೆ ಮತ್ತು ಲ್ಯಾಬ್ ಗಳಿಗಾಗಿ ಒಟ್ಟು 11 ಕೋಟಿ ರೂ. ಗೂ ಹೆಚ್ಚು ಹಣವನ್ನು ನೀಡಲಾಗಿದೆ.
ಹಾಸನ, ಬೆಳಗಾವಿ, ಬೀದರಿನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಸಿಟಿ ಸ್ಕ್ಯಾನರ್ ಖರೀದಿಸಲು 7 ಕೋಟಿ 90 ಲಕ್ಷ ರೂ. ನೀಡಲಾಗಿದೆ. ಬೆಂಗಳೂರು ಉತ್ತರ ತಾಲೂಕು ಕಾಚರಕನಹಳ್ಳಿಯಲ್ಲಿ ಬಿಡಿಎ ಸ್ವಾಧೀನದಲ್ಲಿರುವ 57 ಎಕರೆ 26 ಗುಂಟೆ ಜಾಗದ ಮೇಲೆ ಮಾರುಕಟ್ಟೆ ದರವನ್ನು ಪರಿಷ್ಕರಣೆ ಮಾಡಲಾಗಿದೆ. ಬೆಂಗಳೂರಿನಲ್ಲಿರುವ ಇಂಟರ್ ನ್ಯಾಷನಲ್ ಹೈಯರ್ ಎಜುಕೇಷನ್ ಕೌನ್ಸಿಲ್ ಗೆ ಆನೇಕಲ್ ಬಳಿ ಲೀಸ್ ಆಧಾರದ ಮೇಲೆ ಭೂಮಿ ನೀಡಲು ಕೂಡ ಸಂಪುಟ ಒಪ್ಪಿಗೆ ನೀಡಿದೆ.












Click it and Unblock the Notifications