ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಬೆಂಗಳೂರು ಪ್ರದಕ್ಷಿಣೆ ಮುಖ್ಯಾಂಶಗಳು

|
Google Oneindia Kannada News

ಬೆಂಗಳೂರು, ಮೇ 30 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಟ್ಟೇನಹಳ್ಳಿ ಕೆರೆ ನೋಡಲು ರಸ್ತೆಯಲ್ಲಿ ಹೋಗುತ್ತಿದ್ದಾಗ ಅವರನ್ನು ಕಂಡ ಪಾನ ಮತ್ತ ವ್ಯಕ್ತಿಯೊಬ್ಬ 'I Love You CM' ಎಂದು ಜೋರಾಗಿ ಕೂಗಿದ. ಇದನ್ನು ಕೇಳಿದ ಸಿದ್ದರಾಮಯ್ಯ ಮತ್ತು ಇತರ ಅಧಿಕಾರಿಗಳು ಜೋರಾಗಿ ನಕ್ಕರು.

ಹಿಂದಿನ ಸುದ್ದಿ : ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಪ್ರದಕ್ಷಿಣೆ ನಡೆಸುತ್ತಿದ್ದಾರೆ. ಪ್ರತಿ ಶನಿವಾರ ಅವರು ನಗರ ಪ್ರದಕ್ಷಿಣೆ ಕೈಗೊಳ್ಳಲಿದ್ದು, ಮೇ ತಿಂಗಳಿನಲ್ಲಿ ನಡೆಯುತ್ತಿರುವ 3ನೇ ಪ್ರದಕ್ಷಿಣೆ ಇದಾಗಿದೆ.

ಶನಿವಾರ ಬೆಳಗ್ಗೆ ಗೃಹಕಚೇರಿ ಕೃಷ್ಣಾದಿಂದ 10.30ಕ್ಕೆ ಹೊರಟ ಸಿದ್ದರಾಮಯ್ಯ ಅವರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ, ರೋಷನ್ ಬೇಗ್, ಶಾಸಕರಾದ ಮುನಿರತ್ನ, ಪ್ರಿಯಾಕೃಷ್ಣ ಸೇರಿದಂತೆ ಇತರರು ಸಾಥ್ ನೀಡಿದರು. ಮೂರು ಬಿಎಂಟಿಸಿ ವಜ್ರ ಬಸ್ಸುಗಳಲ್ಲಿ ಸಿಎಂ ಮತ್ತು ಅಧಿಕಾರಿಗಳು ನಗರ ಪ್ರದಕ್ಷಿಣೆ ಮಾಡುತ್ತಿದ್ದಾರೆ. [ಮೇ 15ರ ಬೆಂಗಳೂರು ಪ್ರದಕ್ಷಿಣೆಯಲ್ಲಿ ಏನಾಯ್ತು?]

siddaramaiah

ರಾಜಾ ಕಾಲುವೆ ಹೂಳು ತೆಗೆಯಿರಿ : ಯಲಹಂಕ ಬಳಿಯ ಯೋಗೇಶ್ ನಗರದ ರಾಜಕಾಲುವೆಯನ್ನು ಮೊದಲು ವೀಕ್ಷಿಸಿದ ಸಿದ್ದರಾಮಯ್ಯ ಅವರು ಮೊದಲು ಹೂಳು ತೆಗೆಯಿರಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಯೋಗೇಶ್ ನಗರದ ನಿವಾಸಿಗಳು ನಮಗೆ ರೇಷನ್ ಕಾರ್ಡ್ ಕೊಟ್ಟಿಲ್ಲ. ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ನಾವು ನಿಮಗೆ ಮತ ಹಾಕುವುದಿಲ್ಲ ಎಂದು ಹೇಳಿದರು.

ಹೆಬ್ಬಾಳ ಫ್ಲೈ ಓವರ್ ಬಳಿ ಪರಿಶೀಲನೆ : ಮುಖ್ಯಮಂತ್ರಿಗಳು ಹೆಬ್ಬಾಳ ಫ್ಲೈ ಓವರ್‌ ಬಳಿ ಪರಿಶೀಲನೆ ನಡೆಸಿದರು. ಆಗ ಸಚಿವ ಕೃಷ್ಣ ಭೈರೇಗೌಡ ಫ್ಲೈ ಓವರ್ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದರು. ನಂತರ ಮಾನ್ಯತಾ ಟೆಕ್ ಪಾರ್ಕ್ ಬಳಿ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

ಹಜ್‌ಘರ್ ವೀಕ್ಷಣೆ : ನಂತರ ಮುಖ್ಯಮಂತ್ರಿಗಳು ಆರ್.ಕೆ.ಹೆಗಡೆ ನಗರದ ಹಜ್ ಘರ್‌ಗೆ ಭೇಟಿ ನೀಡಿ ಹಜ್ ಘರ್ ನಿರ್ಮಾಣದ ಕಾಮಗಾರಿಯ ಮಾಹಿತಿಯನ್ನು ಪಡೆದುಕೊಂಡರು. ನಂತರ ಮುಖ್ಯಮಂತ್ರಿಗಳು ಶಾಸಕ ವಿಶ್ವನಾಥ ಕಾರಿನಲ್ಲಿ ಹಳೇ ಯಲಹಂಕದ ಕೆರೆಯನ್ನು ವೀಕ್ಷಣೆ ಮಾಡಿದರು.

English summary
Karnataka Chief Minister Siddaramaiah inspecting Bengaluru (Bangalore) city development works on Saturday, May 30 by Bengaluru rounds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X