ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಾಡಿ, ಸಂಪಾಜೆ ಘಾಟ್‌ನಲ್ಲಿ ವಾಹನ ಓಡಾಟಕ್ಕೆ ಅಡ್ಡಿಯಿಲ್ಲ

|
Google Oneindia Kannada News

ಬೆಂಗಳೂರು, ಆಗಸ್ಟ್ 12: ಭಾರಿ ಮಳೆಯಿಂದಾಗಿ ರಸ್ತೆ ಸಂಪರ್ಕಗಳು ಕಡಿತಗೊಂಡಿವೆ. ಮುಖ್ಯವಾಗಿ ಬೇರೆ ಜಿಲ್ಲೆಗಳು ಹಾಗೂ ದಕ್ಷಿಣ ಕನ್ನಡ ನಡುವೆ ಸಂಪರ್ಕ ದುಸ್ತರವಾಗಿದೆ. ಈಗ ಮಳೆ ಕಡಿಮೆಯಾಗಿದ್ದು, ಭೂಕುಸಿತವಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಗಳು ನಡೆದಿರುವುದರಿಂದ ಮತ್ತೆ ಸಂಪರ್ಕ ಸಾಧ್ಯವಾಗುತ್ತಿದೆ.

In Pics: ಕರ್ನಾಟಕದಲ್ಲಿ ಮಹಾ ಮಳೆ

ಮುಖ್ಯವಾಗಿ ದಕ್ಷಿಣ ಕನ್ನಡ ಮತ್ತು ಕರಾವಳಿಯ ಇತರೆ ಭಾಗಗಳಿಗೆ ತೆರಳುವ ಮಾರ್ಗಗಳು ಘಾಟ್ ಪ್ರದೇಶಗಳಾಗಿರುವುದರಿಂದ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡು ಜನರು ಅತೀವ ಸಂಕಷ್ಟಕ್ಕೆ ಸಿಲುಕಿದ್ದರು. ದೈನಂದಿನ ಸಂಚಾರಕ್ಕೆ ಶಿರಾಡಿ ಮತ್ತು ಸಂಪಾಜೆ ಘಾಟ್‌ಗಳು ಮುಕ್ತಗೊಂಡಿವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಶಿರಾಡಿ ಘಾಟ್ ನಲ್ಲಿ ರಸ್ತೆಗೆ ಉರುಳಿದ ಮರಗಳು; ವಾಹನ ಸಂಚಾರ ಬಂದ್ಶಿರಾಡಿ ಘಾಟ್ ನಲ್ಲಿ ರಸ್ತೆಗೆ ಉರುಳಿದ ಮರಗಳು; ವಾಹನ ಸಂಚಾರ ಬಂದ್

ಸಂಪಾಜೆ ರಸ್ತೆಯ ಮೂಲಕ ಲಘು ವಾಹನಗಳು ಮತ್ತು ಪ್ರಯಾಣಿಕ ಸಾಗಣೆ ವಾಹನಗಳ ಸಂಚಾರ ನಡೆಸಬಹುದಾಗಿದೆ. ಶಿರಾಡಿ ಘಾಟ್‌ನಲ್ಲಿ ಕೂಡ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಹವಾನಿಯಂತ್ರಿತವಲ್ಲದ ದೊಡ್ಡ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ.

Shiradi And Sampaje Ghats Open For Vehicles

ಆದರೆ, ಚಾರ್ಮಾಡಿ ಘಾಟ್ ಪರಿಸ್ಥಿತಿ ಹೀನಾಯವಾಗಿದ್ದು, ಇಲ್ಲಿ ವಾಹನಗಳ ಸಂಚಾರ ಸಾಧ್ಯವಿಲ್ಲ. ಇಲ್ಲಿ ಕುಸಿದುಬಿದ್ದ ಮಣ್ಣು, ಕಲ್ಲುಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಲು ತಿಂಗಳುಗಳೇ ಬೇಕಾಗಬಹುದು ಎನ್ನಲಾಗಿದೆ. ಮಳೆ ಹಾನಿಯಿಂದ ಚಾರ್ಮಾಡಿಗೆ ತೀವ್ರ ಹಾನಿಯಾಗಿದೆ.

English summary
Shiradi Ghat and Sampaje Ghat which connects to Dakshina Kannada, Udupi distrcits are open for traffic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X