ಬಾ ಶೆಡ್‌ಗೆ.. ಕುಂಟೆಬಿಲ್ಲೆ ಆಡುವ ಬಾ.. ಬಸನ್ನಿ ಬಾ ಹಾಡಿನ ಶೈಲಿಯಲ್ಲಿ ಮತ್ತೊಂದು ರೀಲ್ಸ್‌ ವೈರಲ್‌

ಬೆಂಗಳೂರು, ಜುಲೈ, 06: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ನಟ ದರ್ಶನ್‌, ಪವಿತ್ರಾಗೌಡ & ಪಟಾಲಂ ಗ್ಯಾಂಗ್ ಜೈಲು ಸೇರಿದೆ. ಇನ್ನೂ ಇತ್ತೀಚೆಗಷ್ಟೇ ಪವಿತ್ರಾ ಗೌಡಳ ತಮ್ಮ ಜೈಲಿನ ಮುಂದೆ ಮಾಧ್ಯಮದವರ ಕ್ಯಾಮೆರಾ ಮ್ಯಾನ್‌ಗಳಿಗೆ ನಿಮ್ಗೆ ಮಾಡೋದಿಕ್ಕೇನು ಕೆಲಸವಿಲ್ವಾ? ಎಂದು ಪ್ರಶ್ನಿಸಿದ್ದರು. ಇದಕ್ಕೆ ನಿರೂಪಕರೊಬ್ಬರು.. ನಮ್ಗೆ ಕೆಲ್ಸ ಇಲ್ಲ.. ಬಾ ಶೆಡ್‌ಗೆ.. ಕುಂಟೆಬಿಲ್ಲೆ ಹಾಡುವ ಬಾ ಎಂದು ತಿರುಗೇಟು ನೀಡಿದ್ದರು. ಆಗಿನಿಂದಲೂ ಇದು ರೀಲ್ಸ್‌ಗಳಲ್ಲಿ ಇದು ಭಾರೀ ಸದ್ದು ಮಾಡುತ್ತಿದೆ.

ನಟ ದರ್ಶನ್‌ ನೋಡಲು ಸಂಬಂಧಿಕರು, ಆಪ್ತ ಬಳಗದವರು ಪರಪ್ಪನ ಅಗ್ರಹಾರ ಜೈಲಿಗೆ ಬರುತ್ತಲೇ ಇದ್ದಾರೆ. ಹಾಗೆಯೇ ಪವಿತ್ರಾ ಗೌಡಳನ್ನು ನೋಡಲು ಅವರ ತಾಯಿ ಇತ್ತೀಚೆಗಷ್ಟೇ ಬಂದಿದ್ದರು. ಅಲ್ಲದೆ, ಅವರ ತಮ್ಮ ಸುಮ್ನಿರಲಾರದೇ ಇರುವೆ ಬಿಟ್ಟುಕೊಂಡರು ಎನ್ನುವ ಹಾಗೆ ಜೈಲಿನ ಹೊರಗಡೆ ಮಾಧ್ಯಮದವರನ್ನು ನಿಮ್ಗೇನು ಮಾಡೋದಿಕ್ಕೆ ಕೆಲ್ಸ ಇಲ್ವಾ ಎಂದು ಪ್ರಶ್ನಿಸಿ ಪಜೀತಿಗೆ ಸಿಲುಕಿದ್ದಾನೆ.

Shed reels in Basanni Baa song style video viral

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ನಟ ದರ್ಶನ್‌ & ಗ್ಯಾಂಗ್‌ ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಭೀಕರವಾಗಿ ಹತ್ಯೆ ಮಾಡಿದ ಆರೋಪ ಎದುರಾಗಿದ್ದು, ಇದೀಗ ಅವರೆಲ್ಲರೂ ಜೈಲು ಪಾಲಾಗಿದ್ದಾರೆ.

ಇನ್ನು ಪವಿತ್ರಾಗೌಡ ತಮ್ಮ ಯಾವಾಗ ನಿಮ್ಗೇನು ಮಾಡೋದಿಕ್ಕೆ ಕೆಲ್ಸ ಇಲ್ವಾ ಎಂದು ಮಾಧ್ಯಮದವರಿಗೆ ಪ್ರಶ್ನಿಸಿದನೋ ಆಗಿನಿಂದ ಬಾ.. ಶೆಡ್‌ಗೆ.. ಕುಂಟೆಬಿಲ್ಲೆ ಹಾಡುವ ಬಾ ಎಂಬ ರೀಲ್ಸ್‌ಗಳು ಹುಟ್ಟಿಕೊಂಡವು. ಇದೀಗ ಈ ರೀಲ್ಸ್‌ ಅನ್ನು ಬಸನ್ನಿ ಬಾ ಹಾಡಿನ ರೀತಿಯಲ್ಲೇ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಬಾ ಶೆಡ್‌ಗೆ ಬಾ.. ಕುಂಟೆಬಿಲ್ಲೆ ಆಡಮು ಬಾ.. ಕೊಟ್ಟಿದ್ದ್‌ ಸಾಲ ವಾಪಸ್‌ ಕೊಟ್ಟಿಲ್‌ ಅಂದ್ರೆ ಶೆಡ್‌ಗೆ ಕರಿತೀನಿ.. ಬಾ.. ಬಾ..ಬಾ. ಶೆಡ್‌ ಒಳಗೆ ಕರ್ಕೊಂಡ್‌ ಹೋಗಿ ನಿಂಗೆ ಎಸ್‌ಎಂಎಸ್‌ ಮಾಡ್ತೀನಿ ಕಾಮಿಡಿ ವಿಡಿಯೋವನ್ನು ಕರ್ನಾಟಕ ನ್ಯಾಯ ಬೆಲೆ ಅಂಗಡಿ ಎನ್ನುವ ಪೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಇದೀಗ ಇದು ಭಾರೀ ವೈರಲ್‌ ಆಗುತ್ತಿದೆ.

ಇತ್ತೀಚೆಗಷ್ಟೇ ಬಿಗ್‌ಬಾಸ್‌ ಸ್ಪರ್ಧಿ ಕಿರಿಕ್‌ ಕೀರ್ತಿ ಅವರ ಇನ್ಸ್ಟಾ ಪೊಸ್ಟ್‌ ಕೂಡ ಭಾರೀ ಸದ್ದು ಮಾಡುತ್ತಿದೆ. "ಬಾ ಶೆಡ್ಡಿಗ್ ಹೋಗಣ ಬಾ... ಕುಂಟೆ ಬಿಲ್ಲೆ ಆಡು ಬಾ.. ಎಂದು ಹೇಳಿರುವ ಪೋಸ್ಟ್‌ ಹಂಚಿಕೊಂಡಿದ್ದರು, ಇದು ಭಾರೀ ವೈರಲ್‌ ಆಗುತ್ತಿದೆ.

ಶೆಡ್‌ ಅನ್ನೋ ವಿಚಾರ ಯಾಕೆ ಬಂತು?: ರೇಣುಕಾಸ್ವಾಮಿಯನ್ನು ನಟ ದರ್ಶನ್‌ & ಗ್ಯಾಂಗ್‌ ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಇದೆ. ಆಗಿನಿಂದಲೂ ಶೆಡ್‌ ಎಂಬ ಪದ ಸಾಮಾಜಿಕ ಜಾಲತಾಣದಲ್ಲಿ ದರ್ಶನ್‌ & ಗ್ಯಾಂಗ್‌ಗೆ ತಿರುಗೇಟು ಕೊಡುವ ರೀತಿಯಲ್ಲಿ ವೈರಲ್‌ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+