ಶಶಾಂಕ್ ಮೋರೆ: 55 ವರ್ಷದ ಇವರು ಕಾಣೆಯಾಗಿದ್ದಾರೆ: ಗುರುತು ಸಿಕ್ಕಲ್ಲಿ ದಯವಿಟ್ಟು ಸಂಪರ್ಕಿಸಿ
ಬೆಂಗಳೂರು, ಜುಲೈ 29: ರಾಜಧಾನಿ ಬೆಂಗಳೂರಿನ ಥಣಿಸಂದ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಶಶಾಂಕ್ ಶಿರೀಶ್ ಮೋರೆ ಅವರು ಕಾಣೆಯಾಗಿದ್ದಾರೆ. ಸಾರ್ವಜನಿಕರಲ್ಲಿ ಯಾರಿಗಾದರೂ ಇವರ ಗುರುತು ಪತ್ತೆ ಆದಲ್ಲಿ ದಯವಿಟ್ಟು ಸಹಾಯ ಮಾಡುವಂತೆ ಸ್ಥಳೀಯ ಕುಟುಂಬವೊಂದು ಸಾರ್ವಜನಿಕರ ಸಹಾಯ ಕೋರಿದೆ.
ತಮ್ಮ ತಂದೆ ಶಶಾಂಕ್ ಶಿರೀಶ್ ಮೋರೆ ಅವರು ಸರಿಸುಮಾರು 50 ವರ್ಷ ವಯಸ್ಸಿನವರು. ಶನಿವಾರ 2024 ಜುಲೈ 27ರಂದು ಸಂಜೆಯಿಂದ ಎಲ್ಲೂ ಕಾಣಿಸಿಕೊಂಡಿಲ್ಲ. ಅವರು ಕೊನೆಯದಾಗಿ ಬೆಂಗಳೂರಿನ ರೀಜೆನ್ಸಿ ಪಿನಾಕಲ್ ಹೈಟ್ಸ್‌ನಲ್ಲಿ ಸಂಜೆ 6:30ರ ಸುಮಾರಿಗೆ ಕಾಣಿಸಿಕೊಂಡಿದ್ದರು ಎಂದು ಕಾಣೆಯಾಗಿರುವ ಮೋರೆಯವರ ಪುತ್ರ ಸಾರ್ವಜನಿಕರಲ್ಲಿ ತಂದೆ ಕುರಿತಾದ ಸಣ್ಣ ಮಾಹಿತಿ ಸಿಕ್ಕರೂ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ನಾಪತ್ತೆ ಆಗುವ ಮುನ್ನ ಶಶಾಂಕ್ ಮೋರೆ ಅವರು ಕಡೆಯದಾಗಿ ಕಪ್ಪು ಟೀ ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿದ್ದರು. ಅವರು 5.5 ಅಡಿ ಎತ್ತರವಿತ್ತು, ಗೋಧಿ ಮೈಬಣ್ಣ ಮತ್ತು ಬೂದು ಕೂದಲು ಹೊಂದಿದ್ದಾರೆ.
ಮೋರೆಯವರಿಗೆ ಆರೋಗ್ಯ ಉಪಚಾರದ ಅಗತ್ಯತೆ ಇದೆ
ಮೋರೆ ಕೊನೆಯದಾಗಿ ತಣಿಸಂದ್ರ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಕುಟುಂಬ ಅವರ ಗುಣಲಕ್ಷಣ, ನಾಪತ್ತೆಯಾದ ಮಾಹಿತಿ ಎಲ್ಲವನ್ನು ಸಾರ್ವಜನಿಕವಾಗಿ ತೆರೆದಿಟ್ಟಿದೆ. ಗಮನಿಸಬೇಕಾದ ಅಂಶವೆಂದರೆ ಮೋರೆ ಅವರು ಮಧುಮೇಹಿ ಮತ್ತು ಇನ್ಸುಲಿನ್ ಅಗತ್ಯವಿದೆ. ಅವರ ವೈದ್ಯಕೀಯ ಸ್ಥಿತಿಯ ಕಾರಣದಿಂದಾಗಿ ಅವರ ಯೋಗಕ್ಷೇಮಕ್ಕಾಗಿ ಅವರು ತಮಗೆ ತುರ್ತು ಸಿಗಬೇಕಿದೆ.
ಆದ್ದರಿಂದ ದಯಮಾಡಿ ಅವರನ್ನು ಪತ್ತೆಹಚ್ಚಲು ಬೆಂಗಳೂರಿನ ಸಾರ್ವಜನಿಕರು ಸಹಾಯ ಮಾಡಬೇಕು ಎಂದು ಮೋರೆಯವರ ಕುಟುಂಬ ಸಂಕಷ್ಟ ತೋಡಿಕೊಂಡಿದೆ.
ಕಳೆದ ಎರಡು ದಿನಗಳಿಂದ ಮೋರೆಯವರ ಕುಟುಂಬ ಸದಸ್ಯರೆಲ್ಲರು ನಿರಂತರ ಹುಡುಕಾಟದಲ್ಲಿ ತೊಡಗಿದ್ದಾರೆ. ಇಡಿ ಕುಟುಂಬವು ದಣಿವರಿಯಿಲ್ಲದೆ ನಾನಾ ಪ್ರದೇಶವನ್ನು ಕ್ಯಾನ್ವಾಸ್ ಮಾಡುತ್ತಿದೆ. ಸದ್ಯದವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕ ಸಹಾಯ ತುರ್ತು ಅಗತ್ಯವಿದೆ.
ಸಂಪರ್ಕಿಸಬೇಕಾದ ದೂರವಾಣಿ
ಯಾರಾದರೂ ಮೋರೆ ಅವರನ್ನು ಕಂಡಲ್ಲಿ, ಗುರುತ ಸಿಕ್ಕಲ್ಲಿ ಅವರ ಕುರಿತಾದ ಸಣ್ಣ ಮಾಹಿತಿ ಇದ್ದರೂ, ವ್ಯಾಪಾರಿಗಳು, ವಾಹನ ಸವಾರರು ಸೇರಿದಂತೆ ಸಾರ್ವಜನಿರಕು ಕುಟುಂಬದೊಂದಿಗೆ ಮಾಹಿತಿ ಹಂಚಿಕೊಳ್ಳಬೇಕು ಎಂದು ಕುಟುಂಬಸ್ಥರು ಕೇಳಿ ಕೊಂಡಿದ್ದಾರೆ.
ಶಶಾಂಕ್ ಮೋರೆ ಅವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೂಡಲೇ- 080886 11229 ಗೆ ಸಂಪರ್ಕಿಸುವಂತೆ ಕೋರಲಾಗಿದೆ.












Click it and Unblock the Notifications