ಕೊಡಗಿನ ಶಾಂತಿ ಅಪ್ಪಣ್ಣ ಕಥಾಸಂಕಲನಕ್ಕೆ ಛಂದ ಬಹುಮಾನ
ಬೆಂಗಳೂರು, ಡಿಸೆಂಬರ್ 14 : 2015ನೇ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಶ್ರೀಮತಿ ಶಾಂತಿ ಕೆ ಅಪ್ಪಣ್ಣ ಅವರು ತಮ್ಮ ಕಥಾಸಂಕಲನದ ಹಸ್ತಪ್ರತಿಗೆ ಪಡೆದುಕೊಂಡಿದ್ದಾರೆ.
ಮೂಲತಃ ಕೊಡಗಿನವರಾದ ಶಾಂತಿ, ಸದ್ಯಕ್ಕೆ ಚೆನ್ನೈನಲ್ಲಿ ಉದ್ಯೋಗ ಮಾಡುತ್ತಿದ್ದು, ತಮ್ಮ ಪತಿ ಬಾಲಚಂದ್ರ ಅವರೊಂದಿಗೆ ನೆಲೆಸಿದ್ದಾರೆ. ಈ ಸಾಲಿನ ಬಹುಮಾನದ ನಿರ್ಣಯವನ್ನು ಹಿರಿಯ ವಿಮರ್ಶಕ ಎಚ್.ಎಸ್. ರಾಘವೇಂದ್ರ ರಾವ್ ಮಾಡಿದ್ದಾರೆ.
ನಾಡಿನ ಯುವಕತೆಗಾರರನ್ನು ಗುರುತಿಸುವ ಈ ಸ್ಪರ್ಧೆಗೆ ಸುಮಾರು 56 ಹಸ್ತಪ್ರತಿಗಳು ಪ್ರವೇಶ ಕೋರಿ ಬಂದಿದ್ದವು. ಅವುಗಳ ಮೊದಲ ಸುತ್ತಿನ ಆಯ್ಕೆಯನ್ನು ಸುಮಂಗಲಾ, ನಾಗರಾಜ ವಸ್ತಾರೆ, ಶ್ರೀಕಾಂತ ಉಡುಪ ಮತ್ತು ನಾನು (ವಸುಧೇಂದ್ರ) ಮಾಡಿದ್ದೆವು. ಭಾಗವಹಿಸಿದ ಎಲ್ಲರಿಗೂ ಛಂದಪುಸ್ತಕವು ಧನ್ಯವಾದಗಳನ್ನು ಅರ್ಪಿಸುತ್ತಿದೆ. [ವಿಶೇಷ ಕಥೆ : ಟಪ್ ಟಪ್ ಬುದ್ಧಿಸ್ಟ್ ಸೆಂಟರ್]

ಛಂದ ಪುಸ್ತಕವು ಈ ಪುಸ್ತಕವನ್ನು ಪ್ರಕಟಿಸಿ, ಕತೆಗಾರರಿಗೆ ಇಪ್ಪತ್ತು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುತ್ತದೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಹೆಚ್ಚಿನ ಮಾಹಿತಿ ಬೇಕಿದ್ದರೆ ಸಂಪರ್ಕಿಸಿ
ವಸುಧೇಂದ್ರ
(ಛಂದ ಪುಸ್ತಕ)
ಐ-004, ಮಂತ್ರಿ ಪ್ಯಾರಡೈಸ್
ಬನ್ನೇರುಘಟ್ಟ ರಸ್ತೆ
ಬೆಂಗಳೂರೂ - 560076
ದೂ. 98444 22782












Click it and Unblock the Notifications