2016ರ ರಾಜ್ಯದ ಐಎಎಸ್ ಸಾಧಕರ ಹಿಂದಿನ ಗುಟ್ಟು- ಶಂಕರ್ ಅಕಾಡೆಮಿ
ಬೆಂಗಳೂರು, ಜೂನ್ 5: ಇತ್ತೀಚೆಗಷ್ಟೇ ಹೊರಬಿದ್ದ 2016 ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಐಎಎಸ್ ಪರೀಕ್ಷೆಯಲ್ಲಿ ರಾಜ್ಯದಿಂದ ಆಯ್ಕೆಯಾದ ಹಲವು ಅಭ್ಯರ್ಥಿಗಳ ಹಿಂದೆ ಶಂಕರ್ ಐಎಎಸ್ ಅಕಾಡೆಮಿಯ ಕಾಣಿಕೆಯಿದೆ. ಹೌದು, ದೇಶದ ಅತ್ಯುನ್ನತ ನಾಗರಿಕ ಸೇವೆಗಳಿಗೆ ಹಲವಾರು ಮಂದಿ ಪ್ರತಿಭಾನ್ವಿತರನ್ನು ನೀಡಿದ ಶಂಕರ್ ಐಎಎಸ್ ಅಕಾಡೆಮಿ ಮುಕುಟಕ್ಕೆ ಮತ್ತೊಂದು ಕಿರೀಟ ಬಂದಿದೆ.
2016 ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶಂಕರ್ ಐಎಎಸ್ ಅಕಾಡೆಮಿಯ ಒಟ್ಟು 102 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದರಲ್ಲಿ ವಿಶೇಷವಾಗಿ ಕರ್ನಾಟಕದವರೇ 27 ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಅಕಾಡೆಮಿ ಮತ್ತು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.[ಆಕೆಯ ಛಲದೆದುರು ಸೀಳುಬಿಟ್ಟ 16 ಮೂಳೆಗಳೂ ಗೌಣವಾದವು!]

ಇದಕ್ಕಿಂತ ಅತ್ಯಂತ ಮುಖ್ಯವಾದ ವಿಚಾರವೆಂದರೆ ರಾಜ್ಯದಿಂದ ಆಯ್ಕೆಯಾದ ಒಟ್ಟು 55 ಅಭ್ಯರ್ಥಿಗಳ ಪೈಕಿ, 27 ಅಭ್ಯರ್ಥಿಗಳು ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ಸ್ಟೇಶನ್ ಬಳಿ ಇರುವ ಶಂಕರ್ ಐಎಎಸ್ ಅಕಾಡೆಮಿಯವರು! ಈ ಮೂಲಕ ಅಕಾಡೆಮಿ ಹೊಸ ಮೈಲುಗಲ್ಲು ಸ್ಥಾಪಿಸಿ, ವಿಶ್ವಾಸಾರ್ಹತೆಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2004 ರಲ್ಲಿ ಚೆನ್ನೈನಲ್ಲಿ ಸ್ಥಾಪನೆಯಾದ ಅಕಾಡೆಮಿ ಇದುವರೆಗೆ ಸಾವಿರಾರು ಅಭ್ಯರ್ಥಿಗಳಿಗೆ ನಾಗರಿಕ ಸೇವೆಯ ತರಬೇತಿ ನೀಡಿ ಅದರಲ್ಲಿ 750 ಕ್ಕೂ ಹೆಚ್ಚು ಅಭ್ಯರ್ಥಿಗಳು ಕೇಂದ್ರ ನಾಗರಿಕ ಸೇವೆಯ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಮಾಡಿರುವುದು ಹೆಗ್ಗಳಿಕೆಯಾಗಿದೆ.[ಕನ್ನಡ ಮಾಧ್ಯಮದಲ್ಲಿ ಓದಿದ ಕೆಆರ್ ನಂದಿನಿ ಐಎಎಸ್ ಮುಕುಟ ಮಣಿ]
ಈ ಎಲ್ಲಾ ಅಂಶಗಳಿಗಿಂತ ಮಿಗಿಲಾಗಿ ಶಂಕರ್ ಐಎಎಸ್ ಅಕಾಡೆಮಿ ಬೆಂಗಳೂರಿನಲ್ಲಿ ಆರಂಭವಾದ ವರ್ಷದಲ್ಲಿಯೇ ಒಟ್ಟು 27 ಅಭ್ಯರ್ಥಿಗಳನ್ನು ಕೇಂದ್ರ ನಾಗರಿಕ ಸೇವೆಗೆ ಸೇರುವಂತೆ ಮಾಡಿರುವುದು ಅದರ ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ.
ಈ ಕೇಂದ್ರ ಸೇವೆಗೆ ಆಯ್ಕೆಯಾಗಿರುವ 27 ಅಭ್ಯರ್ಥಿಗಳ ಪೈಕಿ ಬರೋಬ್ಬರಿ 12 ಮಂದಿ ಮೊದಲ ನೂರರೊಳಗೆ ಸ್ಥಾನ ಪಡೆದಿರುವುದು ಮತ್ತೊಂದು ವಿಶೇಷ. ಇವರಲ್ಲಿ ಡಾ. ನವೀನ್ ಭಟ್ ಅವರು 37 ನೇ ಸ್ಥಾನ ಪಡೆದಿದ್ದರೆ, ಧ್ಯಾನ್ ಚಂದ್ ಎಚ್.ಎಂ. ಅವರು 47 ನೇ ಸ್ಥಾನ ಪಡೆದಿದ್ದಾರೆ.
ಈ ಸಾಧನೆಯ ಮೂಲಕ ಶಂಕರ್ ಐಎಎಸ್ ಅಕಾಡೆಮಿ ದಕ್ಷಿಣ ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ಅತ್ಯುತ್ತಮ ಅಭ್ಯರ್ಥಿಗಳನ್ನು ತಯಾರು ಮಾಡುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.












Click it and Unblock the Notifications