ವೀರಶೈವರು ಈವರೆಗೆ ಬಿಬಿಎಂಪಿ ಮೇಯರ್ ಆಗಿಲ್ಲ: ಶಾಮನೂರು ಪಟ್ಟು

ಬೆಂಗಳೂರು, ಸೆಪ್ಟೆಂಬರ್ 6: ಈ ಬಾರಿ ಸಾಮಾನ್ಯ ಮಹಿಳೆಗೆ ಮೇಯರ್ ಸ್ಥಾನ ಮೀಸಲಾಗಿದ್ದು ಜಯನಗರ ವಾರ್ಡ್ ಸದಸ್ಯೆಯಾಗಿರುವ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರನ್ನು ಪರಿಗಣಿಸಬೇಕು ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದ್ದಾರೆ.

ಇಲ್ಲಿಯವರೆಗೆ ಬಿಬಿಎಂಪಿಯಲ್ಲಿ ವೀರಶೈವರು ಮೇಯರ್ ಆಗಿಲ್ಲ ಈ ಬಾರಿ ಕೇವಲ ಸಮುದಾಯ ಎಂದಲ್ಲ ಅವರಿಗೆ ಮೇಯರ್ ಆಗುವ ಎಲ್ಲಾ ಅರ್ಹತೆ ಇದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಹಾಗೂ ಇತರೆ ಕಾಂಗ್ರೆಸ್ ನಾಯಕರಿಗೆ ಪತ್ರ ಬರೆದಿದ್ದಾರೆ.

Shamnur urges party leaders for BBMP mayor post

ಗಂಗಾಂಬಿಕೆ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವಾರ್ಡ್ 153ರಲ್ಲಿ ಸತತ ಎರಡು ಬಾರಿ ಜಯಗಳಿಸಿದ್ದಾರೆ. ಅನೇಕ ವರ್ಷಗಳಿಂದ ಪಾಳು ಬಿದ್ದಿದ್ದ ಭೈರಸಂಧ್ರ ಕೆರೆಯ ಅಭಿವೃದ್ಧಿ, ಸೋಮೇಶ್ವರನಗರ ಕಲ್ಯಾಣಿ ಅಭಿವೃದ್ಧಿ ಹಾಗೂ ಉದ್ಯಾನಗಳ ಅಭಿವೃದ್ಧಿ, ಹಿರಿಯ ನಾಗರಿಕರಿಗೆ ಹೊರಾಂಗಣ ಜಿಮ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇವರ ಅನುಭವ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಉತ್ತಮ, ದಕ್ಷ ಆಡಳಿತ ನೀಡಲು ಸಹಕಾರಿಯಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+