ಮಾಟ, ಮಂತ್ರದ ಆಕರ್ಷಣೆ; ಬೆಂಗಳೂರಿನ ಯುವತಿ 2 ತಿಂಗಳಿಂದ ನಾಪತ್ತೆ!

ಬೆಂಗಳೂರು, ಡಿಸೆಂಬರ್ 30; ಬೆಂಗಳೂರು ಮೂಲದ 17 ವರ್ಷದ ಯುವತಿಯೊಬ್ಬಳು ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದಾಳೆ. ಯುವತಿ ಮಾಟ ಮಂತ್ರದ ಆಕರ್ಷಣೆಗೆ ಒಳಗಾಗಿದ್ದಾಳೆ ಎಂದು ಕುಟುಂಬ ಮೂಲದವರು ಶಂಕಿಸಿದ್ದಾರೆ.

ಅನುಷ್ಕಾ (17) ಎರಡು ತಿಂಗಳಿನಿಂದ ನಾಪತ್ತೆಯಾಗಿದ್ದಾಳೆ. ಸಾಮಾಜಿಕ ಜಾಲತಾಣದ ಮೂಲಕ ಪುತ್ರಿಗಾಗಿ ಅಭಿಷೇಕ್ ಮತ್ತು ಅರ್ಚನಾ ದಂಪತಿ ಹುಡುಕಾಟ ನಡೆಸುತ್ತಿದ್ದಾರೆ.

Shamanism (ಆತ್ಮಗಳ ಜೊತೆ ಸಂಭಾಷಣೆ) ಮಾದರಿಯನ್ನು ಕಲಿಯಲು ಅನುಷ್ಕಾ ಬಯಸಿದ್ದಳು. ಆದರೆ ಪೋಷಕರು ಮನೆಯಲ್ಲಿಯೇ ಕಲಿಯುವಂತೆ ಹೇಳಿದ್ದರು. ಆದರೆ ಎರಡು ತಿಂಗಳಿನಿಂದ ಆಕೆ ನಾಪತ್ತೆಯಾಗಿದ್ದು ಇದರ ಹಿಂದೆ Shamanism ಆಕರ್ಷಣೆ ಇರಬಹುದು ಎಂದು ಶಂಕಿಸಲಾಗಿದೆ.

Shamanism Connection Bengaluru Minor Girl Missing

ಅನುಷ್ಕಾ ತಂದೆ ಅಭಿಷೇಕ್ ಈ ಕುರಿತು ಮಾತನಾಡಿದ್ದಾರೆ, "ಯಾರೋ ಆಕೆಯ ಮೇಲೆ ಪ್ರಭಾವ ಬೀರಿದ್ದಾರೆ. ಆಕೆ ಮನೆ ಬಿಟ್ಟು ಬೇರೆಲ್ಲೂ ಒಬ್ಬಳೇ ಹೋದವಳಲ್ಲ. ಸಾಮಾಜಿಕ ಜಾಲತಾಣದ ಮೂಲಕ ಆಕೆಯನ್ನು ಹುಡುಕಲು ಪ್ರಯತ್ನ ನಡೆಸುತ್ತಿದ್ದೇನೆ" ಎಂದು ಹೇಳಿದ್ದಾರೆ.

ಅಕ್ಟೋಬರ್ 31 ರಂದು ಮನೆಯಿಂದ ಎರಡು ಜೊತೆ ಬಟ್ಟೆ ಮತ್ತು 2,500 ರೂ.ಗಳ ಜೊತೆ ಅನುಷ್ಕಾ ಹೊರಟಿದ್ದಳು. ಎರಡು ತಿಂಗಳು ಕಳೆದರೂ ಆಕೆ ಪತ್ತೆಯಾಗಿಲ್ಲ. ಆನ್‌ಲೈನ್‌ ಮೂಲಕ ಓದುವಾಗ ಆಕೆ Shamanism ನತ್ತ ಆಕರ್ಷಿತಳಾಗಿದ್ದಳು.

ಸೆಪ್ಟೆಂಬರ್‌ನಲ್ಲಿಯೇ ಅನುಷ್ಕಾ ವರ್ತನೆಯಲ್ಲಿ ಬದಲಾವಣೆಗಳಾಗಿದ್ದವು. ಯಾರೊಂದಿಗೂ ಬೆರೆಯಲು ಇಷ್ಟಪಡದಿದ್ದ ಆಕೆ ಸದಾ ಏಕಾಂಗಿಯಾಗಿ ಇರುತ್ತಿದ್ದಳು. ಇದನ್ನು ಗಮನಿಸಿದ್ದ ತಂದೆ-ತಾಯಿ ಕೌನ್ಸಿಲಿಂಗ್ ಸಹ ಮಾಡಿಸಿದ್ದರು.

ಆನ್‌ಲೈನ್‌ನಲ್ಲಿ ಮಾಟ ಮಂತ್ರದ ಬಗ್ಗೆ ಹೆಚ್ಚಿನ ವಿಡಿಯೋ ನೋಡುತ್ತಿದ್ದಳು. ಇದರ ಕುರಿತು ಹಲವಾರು ವಿಚಾರಗಳನ್ನು ಓದುತ್ತಿದ್ದಳು. ಅಕ್ಟೋಬರ್ 31ರಂದು ಆಕೆ ಮನೆ ಬಿಟ್ಟು ಹೋಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿದೆ.

ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಅನುಷ್ಕಾ ಪತ್ತೆಗಾಗಿ ಹುಡುಕಾಟವನ್ನು ನಡೆಸುತ್ತಿದ್ದಾರೆ.

ಅನುಷ್ಕಾ ಪತ್ತೆಗೆ ಜನರು ಸಹ ಸಹಕಾರ ನೀಡಬೇಕು ಎಂದು ಪೋಷಕರು ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+