ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾಜಿಕ ತಾಣದಲ್ಲಿ ಅತ್ಯಾಚಾರ ತಡೆ ಚಳವಳಿ

|
Google Oneindia Kannada News

ಬೆಂಗಳೂರು, ನ. 5: ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣ ತಡೆಗೆ ಜನ ಜಾಗೃತಿ ಮೂಡಿಸಲು ಯಲಹಂಕದ ಅದಿತಿ ಮಲ್ಯ ಶಾಲೆಯ ದ್ವೀತಿಯ ಪಿಯು ವಿದ್ಯಾರ್ಥಿನಿ ಲಾವಣ್ಯ ಕೃಷ್ಣ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಮಾದರಿಯಾಗಿದ್ದಾಳೆ.

ಫೇಸ್ ಬುಕ್ ನಲ್ಲಿ 'Innocence Interrupted' ಎಂಬ ಹೆಸರಿನಲ್ಲಿ ಪೇಜ್ ತೆರೆದಿದ್ದಾಳೆ ಅಲ್ಲದೇ #InnocenceInterrupted' ಹೆಸರಿನಲ್ಲಿ ಟ್ವಿಟ್ಟರ್ ಖಾತೆಯೂ ಇದೆ. ಪಾಲಕರು, ನಾಗರಿಕರು ಅತ್ಯಾಚಾರ ತಡೆಗೆ ತಮ್ಮ ಸಲಹೆ ಸೂಚನೆಗಳನ್ನು ನೀಡುತ್ತ ಸುಲಭವಾಗಿ ಸಂವಹನ ನಡೆಸಬಹುದಾಗಿದೆ.[ನಂದಿತಾ ಸಾವಿಗೆ ಕಂಬನಿ ಮಿಡಿದ ತೀರ್ಥಹಳ್ಳಿ]

ಮಕ್ಕಳು ಲೈಂಗಿಕ ದೌರ್ಜನ್ಯದಿಂದ ಹೇಗೆ ಬಚಾವಬಾಗಹುದು ಎಂಬುದರ ಕುರಿತು ಅಭಿಪ್ರಾಯ ಹಂಚಿಕೊಳ್ಳಬಹುದು. ಪಾಲಕರು ವಿವಿಧ ಸಂದರ್ಭ ಎದುರಾದ ಸಂಕಷ್ಟಗಳನ್ನು ಚರ್ಚಿಸಬಹುದು. ಅಲ್ಲದೇ ಟ್ವಿಟ್ಟರ್ ಖಾತೆ ಸಾರ್ವಜನಿಕ ಅಭಿಪ್ರಾಯ ರೂಪಿಸಲು ನೆರವಾಗುತ್ತದೆ ಎಂದು ಲಾವಣ್ಯ ಹೇಳಿದ್ದಾರೆ.

ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಂಬಂಧ ಸಹಿ ಅಭಿಯಾನವೊಂದನ್ನು ಹಮ್ಮಿಕೊಳ್ಳಲಿದ್ದೇನೆ. ಅಪರಿಚಿತರೊಂದಿಗೆ ವ್ಯವಹರಿಸಬೇಕಾದ ರೀತಿ, ಕೆಟ್ಟ ಸ್ಪರ್ಶ, ದೇಹದ ಖಾಸಗಿ ಅಂಗಗಳ ಬಗ್ಗೆ ಜ್ಞಾನ ಮತ್ತು ಅವುಗಳನ್ನು ಇತರರು ಮುಟ್ಟದಂತೆ ನೋಡಿಕೊಳ್ಳುವ ಬಗೆ ಹೇಗೆ? ಇದನ್ನು ಪಾಲಕರು ತಿಳಿಸಕೊಡಬೇಕಾದ ರೀತಿ? ಇನ್ನು ಮುಂತಾದ ವಿಚಾರಗಳನ್ನು ವಿವರವಾಗಿ ಚರ್ಚೆ ಮಾಡಲಾಗುವುದು ಎಂದು ಲಾವಣ್ಯ ತಿಳಿಸಿದ್ದಾರೆ.[ತೀರ್ಥಹಳ್ಳಿ ನಂದಿತಾ ಸಾವು : ಯಾರು ಏನು ಹೇಳಿದರು?]

twitter

ಸಪ್ಟೆಂಬರ್ 18 ರಂದು ತೆರೆದ ಪೇಸ್ ಬುಕ್ ಪೇಜ್ ಗೆ 200೦ ಕ್ಕಿಂತ ಹೆಚ್ಚು ಲೈಕ್ ದೊರೆತಿದೆ. ಮಕ್ಕಳು ಏನಾದರೂ ಹೇಳಲು ಬಯಸುತ್ತಿದ್ದರೆ ಅದನ್ನು ಮುಕ್ತವಾಗಿ ಕೇಳಿಸಿಕೊಳ್ಳಿ. ಕಿಶೋರಾವಸ್ಥೆಯಲ್ಲಿ ಮಕ್ಕಳಿಗೆ ಆರೈಕೆ, ಪ್ರೀತಿ ಮತ್ತು ಸೂಕ್ತ ಪ್ರೋತ್ಸಾಹದ ಅಗತ್ಯವಿರುತ್ತದೆ ಎಂದು ಲಾವಣ್ಯ ಹೇಳಿದ್ದಾರೆ.

ಮಕ್ಕಳ ಮೈ ಮೇಲೆ ರಕ್ತದ ಕಲೆಯಾಗಿದ್ದರೆ, ಗಾಯಗಳಾಗಿದ್ದರೆ ಆ ಬಗ್ಗೆ ಕೂಡಲೇ ಗಮನ ಹರಿಸಿ, ಮಕ್ಕಳ ವರ್ತನೆಯಲ್ಲಿ ಬದಲಾವಣೆ ಕಂಡುಬಂದರೂ ತಿರಸ್ಕಾರ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

ಫೇಸ್ ಬುಕ್ ಪೇಜ್ ಗೆ ಇಲ್ಲಿ ಕ್ಲಿಕ್ಕಿಸಿ

ಟ್ವಿಟ್ಟರ್ ಅಕೌಂಟ್ ಗೆ ಇಲ್ಲಿ ಕ್ಲಿಕ್ಕಿಸಿ

English summary
To safeguard children from all kinds of abuse, a class 12 student of Aditi Mallya school in Yelahanka, Lavanya Krishna, has launched an awareness campaign on Facebook and Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X