Rain Alert: ಮಳೆ.. ಮಳೆ.. ಬೆಂಗಳೂರಲ್ಲಿ ಭರ್ಜರಿ ಮಳೆ!
ಮಳೆ ಇಲ್ಲದೆ ನರಳಾಡುತ್ತಿದ್ದ ಬೆಂಗಳೂರಿನ ಜನರಿಗೆ ಇಂದು ಭರ್ಜರಿ ಸುದ್ದಿ ಸಿಕ್ಕಿದೆ. ಹೀಗೆ ಮಳೆಯೇ ಇಲ್ಲದೆ ಪರದಾಡುತ್ತಿದ್ದ ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ಇಂದು ಭರ್ಜರಿ ಮಳೆ ಬಂದಿದೆ ಹಾಗಾದ್ರೆ ಬೆಂಗಳೂರಿನ ಯಾವ ಯಾವ ಭಾಗದಲ್ಲಿ ಮಳೆರಾಯ ಅಬ್ಬರಿಸಿದ್ದಾನೆ? ಮಳೆಯ ಆರ್ಭಟ ಹೇಗಿತ್ತು? ಮಳೆಯ ವಿಡಿಯೋಗಳನ್ನು ನೋಡಲು ಮುಂದೆ ಓದಿ.
ಬೆಂಗಳೂರಿನಲ್ಲಿ ಕಳೆದ 4 ತಿಂಗಳಿಂದ ಕುಡಿಯುವ ನೀರಿಗೂ ಕಷ್ಟವಾಗಿದೆ. ಯಾಕಂದ್ರೆ ಈ ನಮ್ಮ ಮಹಾನಗರಿ ಬೆಂಗಳೂರಿಗೆ ನೀರು ಪೂರೈಸುವ ಜಲಾಶಯಗಳು ಒಣಗುತ್ತಿವೆ. ಹಾಗೇ ಅಂತರ್ಜಲ ಕೂಡ ಕುಸಿದು ಹೋಗಿದೆ. ಹೀಗಾಗಿ ಬೇಸಿಗೆ ಆರಂಭ ಆಗುತ್ತಿದ್ದಂತೆ ಜನಕ್ಕೆ ನೀರು ಸಿಗದೆ 5000 ರೂಪಾಯಿ, 6000 ರೂಪಾಯಿ ಹಣ ಕೊಟ್ಟು ಟ್ಯಾಂಕರ್ ನೀರು ತರಿಸಿದ್ದರು ಬೆಂಗಳೂರಿಗರು. ಹೀಗಿದ್ದಾಗಲೇ ಮಳೆಗಾಗಿ ಪ್ರಾರ್ಥನೆ ಕೂಡ ಮಾಡುತ್ತಿದ್ದರು. ಈಗ ಭರ್ಜರಿ ಮಳೆ ಆರಂಭವಾಗಿದೆ. ಇಂದು ಸಂಜೆಯಿಂದ ಬೆಂಗಳೂರಿನ ಹಲವು ಕಡೆ ಭರ್ಜರಿ ಮಳೆಯ ಆಗಮನ ಆಗಿದೆ. ಮಳೆಯ ವಿಡಿಯೋ ನೋಡಲು ಮುಂದೆ ಓದಿ.

ರಾಜಧಾನಿ ಬೆಂಗಳೂರಿನ ಈ ಭಾಗಗಳಲ್ಲಿ ಮಳೆ!
ಬೆಂಗಳೂರಿನ ಹೊರವಲಯ ಮಾರತ್ ಹಳ್ಳಿ, ಹೊಸಕೋಟೆ, ಆನೇಕಲ್ ಸೇರಿದಂತೆ ಹಲವು ಪ್ರದೇಶದಲ್ಲಿ ಮಳೆ ತಂಪು ತಂದಿದೆ. ಹಾಗೇ ಬೆಂಗಳೂರಿಗೆ ಹೊಂದಿಕೊಂಡೇ ಇರುವ ಹಲವು ಪ್ರದೇಶದಲ್ಲಿ ಕೂಡ ಮಳೆ ಬಂದಿದೆ. ಇನ್ನು ಬೆಂಗಳೂರಿನ ಪಕ್ಕದ ಜಿಲ್ಲೆಯಾದ ಕೋಲಾರ & ಚಿಕ್ಕಬಳ್ಳಾಪುರ ಜಿಲ್ಲೆಯ ಹಲವು ತಾಲೂಕುಗಳಿಗೆ ಇಂದು ಮೊದಲ ಮಳೆಯ ಎಂಟ್ರಿ ಆಗಿದೆ. ಈ ಮೂಲಕ ಬೆಂಗಳೂರಿಗರು ಮಾತ್ರವಲ್ಲ, ರಾಜಧಾನಿ ಬೆಂಗಳೂರು ಅಕ್ಕಪಕ್ಕದ ಜನರಿಗೂ ಖುಷಿ ಸಿಕ್ಕಿದೆ. ಮಳೆಯ ವಿಡಿಯೋಗಳು ಇಲ್ಲಿವೆ, ನೋಡಲು ಮುಂದೆ ಓದಿ.
ಬೆಂಗಳೂರಿನಲ್ಲಿ ಮಳೆ ☔️🌧️#BengaluruRains #KarnatakaRains https://t.co/cJbRbrC7q8
— ರವಿ ಕೀರ್ತಿ ಗೌಡ (@ravikeerthi22) May 2, 2024
ಎಸಿ ಸಿಟಿ ಬೆಂಗಳೂರಲ್ಲಿ ನರಳಾಟ!
ಬೆಂಗಳೂರು ಅಂದ್ರೆ 20 ವರ್ಷಗಳ ಹಿಂದೆ ಎಸಿ ಸಿಟಿ ಎಂಬ ಹೆಸರು ಇತ್ತು. ಯಾಕಂದ್ರೆ ಈ ನಮ್ಮ ಬೆಂಗಳೂರು ಬೇಸಿಗೆ ಸಮಯದಲ್ಲೂ ಕೂಲ್ ಕೂಲ್ ಆಗಿ ಇರೋದು. ಆದರೆ ಏನ್ ಮಾಡೋದು, ಬೆಂಗಳೂರು ಈಗ ಕಾಂಕ್ರಿಟ್ ಕಾಡು ಆಗಿದೆ. ಬೆಂಗಳೂರಿನಲ್ಲಿ ಇದ್ದ ಗಿಡ & ಮರ ಎಲ್ಲಾ ನಾಶವಾಗಿ ಹೋಗುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ಅಂತರ್ಜಲ ಕೂಡ ಕುಸಿದು ಹೋಗಿ, ಕೋಟ್ಯಂತರ ಜನರು ನರಳುತ್ತಿದ್ದಾರೆ.
ಮೊದಲ ಮಳೆ ಚಿಂತಾಮಣಿ ಯಲ್ಲಿ pic.twitter.com/2WTytVgelu
— Gurumurthy (@Gurumur94343934) May 2, 2024
ಕಳೆದ 3-4 ವರ್ಷ ಕೊರೊನಾ ಅಪ್ಪಳಿಸಿದ್ದ ಕಾರಣಕ್ಕೆ, ಬೆಂಗಳೂರಿನಿಂದ ಲಕ್ಷಾಂತರ ಜನ ತಮ್ಮ ತಮ್ಮ ಊರಿಗೆ ಹೋಗಿದ್ದರು. ಹೀಗಾಗಿ ಬೆಂಗಳೂರಲ್ಲಿ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಈಗ ಎಲ್ಲರೂ ಬೆಂಗಳೂರಿಗೆ ಮತ್ತೆ ವಾಪಸ್ ಬರುತ್ತಿದ್ದಾರೆ. ಭೀಕರ ಬರಗಾಲ ಕೂಡ ಎದುರಾಗಿದ್ದು, 2023 ರಲ್ಲಿ ಸರಿಯಾಗಿ ಮಳೆ ಬಂದಿರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ, 2024 ರಲ್ಲಿ ಮಳೆಯೇ ಇಲ್ಲದೆ ಜನರು ನರಳಾಡಿ ಹೋಗಿದ್ದಾರೆ. ಹೀಗಿದ್ದಾಗಲೇ ಇಂದು ಈ ನಮ್ಮ ಬೆಂಗಳೂರಿಗೆ ಮಳೆಯ ಸಿಂಚನ ಒಂದಷ್ಟು ನೆಮ್ಮದಿ ತಂದಿದೆ.
ಮಳೆ ನೀರು ಸಂಗ್ರಹ ಮಾಡಿ
ಮನುಷ್ಯನ ಬದುಕಿಗೆ ಮೂಲ ಆಧಾರವೇ ನೀರು, ನೀರು ಇಲ್ಲದೆ ಮನುಷ್ಯನ ಜೀವನ ಊಹೆಗೂ ನಿಲುಕುವುದಿಲ್ಲ. ಹೀಗಾಗಿ ಜೀವಜಲ ಅಂತಾ ಕರೆಯುವ ನೀರನ್ನು ಮನುಷ್ಯ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳಬೇಕು. ಹೀಗಿದ್ರೂ ಮನುಷ್ಯರು ಮಾತ್ರ ನೀರಿನ ಸದ್ಬಳಕೆ ಮಾಡಿಕೊಳ್ತಿಲ್ಲ. ಇದೇ ಕಾರಣಕ್ಕೆ ಮನುಷ್ಯ ಈಗ ಹನಿ ಹನಿ ನೀರಿಗೂ ಪರದಾಡುತ್ತಿದ್ದಾನೆ. ಹೀಗಿದ್ದಾಗ ತಕ್ಷಣಕ್ಕೇ ಎಚ್ಚೆತ್ತುಕೊಂಡು, ಮಳೆ ನೀರು ಸಂಗ್ರಹ ಮಾಡಿಕೊಂಡರೆ ಮುಂದಕ್ಕೆ ಇಂತಹ ಸಮಸ್ಯೆ ಬರಲ್ಲ ಎಂಬ ಮಾತು ಕೇಳಿಬರುತ್ತಿದೆ. ಯಾಕಂದ್ರೆ ಮಳೆಗಾಲದ ಆರಂಭಕ್ಕೆ ಇನ್ನು ಕೇವಲ 1 ತಿಂಗಳು ಬಾಕಿ ಇದೆ. ಹೀಗಾಗಿ ಮಳೆ ನೀರು ಸಂಗ್ರಹಕ್ಕೆ ಈಗಲಾದರೂ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ.
ಮಳೆ.. ಮಳೆ.. ಮಳೆ!
ನಿನ್ನೆ ಕನ್ನಡಿಗರ ರಾಜಧಾನಿ ಬೆಂಗಳೂರಲ್ಲಿ ಬಂದ ಭಾರಿ ಮಳೆ ನೆಮ್ಮದಿ ನೀಡಿತ್ತು. ಅದರಲ್ಲೂ ಇಷ್ಟು ದಿನ ಮಳೆ ಇಲ್ಲದೆ ಪರದಾಡಿದ್ದ ನಮ್ಮ ಜನರಿಗೆ, ಭರ್ಜರಿ ಮಳೆಯ ರಸದೌತಣ ಸಿಕ್ಕಿತು. ನೋಡ ನೋಡುತ್ತಲೇ ಇಡೀ ಬೆಂಗಳೂರಿಗೆ ಮುತ್ತಿಗೆ ಹಾಕಿದ ಮಳೆ ಮೋಡಗಳು, ಗಂಟೆಗಟ್ಟಲೇ ಮಳೆ ಸುರಿಸಿದವು. ಈ ಮೂಲಕ ಭರ್ಜರಿ ಮಳೆ ಕಂಡು, ಜನರು ಕೂಡ ಕುಣಿದಾಡಿದರು. ಹಾಗೇ ಮಂಡ್ಯ & ಮೈಸೂರು ಭಾಗದಲ್ಲಿ ಕೂಡ ಭಾರಿ ಮಳೆ ತಂಪು ಹರಿಸಿದೆ. ಕಾವೇರಿಯ ಮಡಿಲಿನಲ್ಲಿ ಇದ್ದರೂ ನೀರು ಇಲ್ಲದೆ ನರಳಿದ್ದರು ಕನ್ನಡಿಗರು. ಅದ್ರಲ್ಲೂ ಹಳೇ ಮೈಸೂರು ಭಾಗದಲ್ಲಿ ಕೂಡ ಕಾವೇರಿ ನದಿ ಬತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿಯೇ, ಮಳೆ ಬರಲಿ ಅಂತಾ ಜನರು ಪ್ರಾರ್ಥನೆ ಮಾಡುತ್ತಿದ್ದರು.
ತಂಪು.. ತಂಪು.. ಕೂಲ್.. ಕೂಲ್..!
ಮಳೆ.. ಮಳೆ.. ಭರ್ಜರಿ ಮಳೆ ಬಂದಿದ್ದು, ಭೂತಾಯಿ & ಮನಸ್ಸು ಎರಡೂ ತಂಪಾಗಿದೆ. ಎಲ್ಲೆಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕೆಲವೇ ಕೆಲವು ದಿನಗಳ ಹಿಂದೆ ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳ ಜನರು ಭಾರಿ ಬಿಸಿಲು & ಬಿಸಿಯಾದ ಗಾಳಿಗೆ ನಲುಗಿ ಹೋಗಿದ್ದರು. ಮನೆ ಮೇಲೆ ಇರುವ ನೀರಿನ ಟ್ಯಾಂಕರ್ ಕೂಡ ಕರಗಿ ಹೋಗುವಷ್ಟು, ಮನೆಯಲ್ಲಿ ಬರುವ ನಲ್ಲಿ ನೀರು ಕೂಡ ಕುದಿಯುವಷ್ಟು ಬಿಸಿಲು ಇತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ತಂಪು ತಂಪು ಕೂಲ್.. ಕೂಲ್.. ಆಗಿದೆ ನಮ್ಮ ಕರ್ನಾಟಕ. ಹಾಗಾದರೆ ಇನ್ನೂ ಎಷ್ಟು ದಿನಗಳ ಕಾಲ ವಾತಾವರಣ ಹೀಗೆ ಇರಲಿದೆ ಗೊತ್ತಾ?
ಮುಂಗಾರು ಮಳೆ ಅಬ್ಬರ ಶುರು!
ಮೇ 31ಕ್ಕೆ ಮುಂಗಾರು ಮಳೆಯ ಮಾರುತಗಳು ಕೇರಳ ರಾಜ್ಯಕ್ಕೆ ಎಂಟ್ರಿ ಕೊಡಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಡೀ ಭಾರತದ ಮಳೆಯ ಪಾಲಿನಲ್ಲಿ ಶೇ. 70 ರಷ್ಟು ಮಳೆಯನ್ನ ಮುಂಗಾರು ಮಳೆ ಒಂದೇ ಸುರಿಸುತ್ತದೆ. ಹೀಗಾಗಿ ಮುಂಗಾರು ಮಳೆ ಕರ್ನಾಟಕ ಸೇರಿ ಇಡೀ ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ. ಹೀಗಿದ್ದಾಗಲೇ 2023 ರಲ್ಲಿ ಮುಂಗಾರು ಮಳೆ ಕೈಕೊಟ್ಟು ಹೋಗಿತ್ತು. ಹೀಗಾಗಿ ಭೀಕರ ಬರ ಎದುರಾಗಿ ರೈತರು & ಜನ ನರಳಿದ್ದರು. ಆದ್ರೆ ಈಗ ಗುಡ್ ನ್ಯೂಸ್ ಸಿಗುತ್ತಿದ್ದು, ಮುಂಗಾರು ಮಳೆ ಅಬ್ಬರ ಗ್ಯಾರಂಟಿ ಆಗುತ್ತಿದೆ.












Click it and Unblock the Notifications