ಧರ್ಮಸ್ಥಳದಲ್ಲಿ ಪೋಲೀಸ್ ಠಾಣೆ ಏಕಿಲ್ಲ?

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಈ ಪ್ರಕರಣದ ಬೆಳವಣಿಗೆಗಳಿಂದ ಈ ಭಾಗದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರತಿನಿತ್ಯ ಲಕ್ಷಾಂತರ ಮಂದಿ ಬಂದು-ಹೋಗುತ್ತಾರೆ. ಆದರೆ 20 ಕಿಮೀ ದೂರದಲ್ಲಿರುವ ಬೆಳ್ತಂಗಡಿಯಲ್ಲಿ ಪೊಲೀಸ್ ಠಾಣೆ ಇದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲೇ ಸರ್ಕಲ್ ಇನ್ಸ್ ಪೆಕ್ಟರ್ ಅವರನ್ನೊಳಗೊಂಡ (ಆರಕ್ಷಕ ವೃತ್ತ ನಿರೀಕ್ಷಕ) ಪೊಲೀಸ್ ಠಾಣೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಎಲ್ಲ ಪ್ರಕರಣಗಳೂ ಸಿಬಿಐ ತನಿಖೆಗೆ ಒಳಪಡಲಿ:
ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಸಹಜ ಸಾವು, ಆತ್ಮಹತ್ಯೆ, ಕೊಲೆ, ಕಳ್ಳತನ, ದರೋಡೆ ಸೇರಿದಂತೆ 462 ಪ್ರಕರಣಗಳು ಧರ್ಮಸ್ಥಳ ಮತ್ತು ಆಸುಪಾಸಿನಲ್ಲಿ ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿ ನ್ಯಾಯಸಮ್ಮತ ಕಾನೂನು ಕ್ರಮ ತೆಗೆದುಕೊಳ್ಳಲು ವಿಫಲರಾಗಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಪ್ರಭಾವದಿಂದ ತನಿಖೆ ನಡೆದಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಈ ಎಲ್ಲ ಕಾರಣಗಳಿಂದ ಉಂಟಾಗಿರುವ ಗೊಂದಲದ ಪರಿಸ್ಥಿತಿ ನಿವಾರಿಸಲು ಪೊಲೀಸ್ ಠಾಣೆ ನಿರ್ಮಿಸಬೇಕಾಗಿದೆ.
ಅಲ್ಲದೆ ಸೌಜನ್ಯ ಪ್ರಕರಣವನ್ನು ಸಿಬಿಐಗೆ ನೀಡಿರುವಂತೆ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿರುವ 462 ಪ್ರಕರಣಗಳನ್ನೂ ಸಿಬಿಐಗೆ ವಹಿಸಬೇಕು. ಭೂ ಸ್ವಾಧೀನ ಅವ್ಯವಹಾರಗಳು ನಡೆದಿರುವ ಬಗ್ಗೆ ಆರೋಪಗಳಿವೆ. ಶ್ರೀಕ್ಷೇತ್ರದ ಬಗ್ಗೆ ಇರುವ ಕಳಂಕ ತೊಡೆದುಹಾಕಲು ಎಲ್ಲ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂದೂ ಆಗ್ರಹಿಸಿದರು.












Click it and Unblock the Notifications