Benglauru-Mysuru Highway: ಸರ್ವೀಸ್ ರಸ್ತೆ ಸಮಸ್ಯೆ ಮುಕ್ತಿಗೆ NHAI ಹೊಸ ಪ್ಲಾನ್

ಬೆಂಗಳೂರು, ಡಿಸೆಂಬರ್ 25: ಬೆಂಗಳೂರು-ಮೈಸೂರು ಹೆದ್ದಾರಿಯು ವೇಗದ ಸಂಪರ್ಕ ಕಲ್ಪಿಸುವ ಜೊತೆಗೆ ಹೆದ್ದಾರಿ ಪಕ್ಕದ ಸರ್ವೀಸ್‌ ರಸ್ತೆಯಲ್ಲಿ ಬೈಕ್ ಸವಾರರು ಹಾಗೂ ಅಕ್ಕಪಕ್ಕದ ಊರಿನ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ. ಈ ಕಾರಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ರೈಲ್ವೆ ಓವರ್ ಬ್ರಿಡ್ಜ್ (ROB) ನಿರ್ಮಿಸಲು ಮುಂದಾಗಿದೆ. ಇದರಿಂದ ಸರ್ವೀಸ್ ರಸ್ತೆಯಲ್ಲಿನ ಸಂಚಾರ ಕಿರಿ ಕಿರಿ ತಪ್ಪಲಿದೆ.

ಹೆದ್ದಾರಿಯಿಂದ ಸರ್ವಿಸ್ ರಸ್ತೆ ಮಧ್ಯದ ಅಂತರದಿಂದ ಇಲ್ಲಿನ ಊರುಗಳಿಗೆ ತೆರಳುವವರಿಗೆ ತೊಂದರೆ ಉಂಟಾಗುತ್ತಿದೆ. ಕೆಲವು ಪಟ್ಟಣಗಳ ಬಳಿಕ ಈ ರೈಲ್ವೆ ಓವರ್ ಬ್ರಿಡ್ಜ್ ನಿರ್ಮಿಸುವ ಮಾರ್ಗದ ದೀರ್ಘ ಅಂತರವನ್ನು ಕಡಿಮೆ ಮಾಡುವ ಗುರಿ ಪ್ರಾಧಿಕಾರ ಹೊಂದಿದೆ. ಅದಕ್ಕಾಗಿ ಪ್ಲಾನ್ ಮಾಡಿಕೊಳ್ಳಲಾಗಿದೆ. 2023ರ ಮಾರ್ಚ್ ತಿಂಗಳಲ್ಲಿ ಹೆದ್ದಾರಿ ಆರಂಭವಾದಾಗಿನಿಂದ ಸೇವಾ ರಸ್ತೆಯ ಮಧ್ಯದ ಅಂತಗಳು ಅಂತರಗಳು ಪ್ರಯಾಣಿಕರನ್ನು ಇನ್ನಿಲ್ಲದಂತೆ ಹತಾಶಗೊಳಿಸಿದೆ.

Service Road Gap Traffic Issues along Bengaluru-Mysuru Expressway Clear Soon By NHAI

ಸರ್ವೀಸ್ ರಸ್ತೆ ಅಪೂರ್ಣ: ನಿತ್ಯ ಕಿರಿ ಕಿರಿ

ಇದೇ ಮಾರ್ಗದಲ್ಲಿ ನಿತ್ಯ ಓಡಾಡುವ ಬೆಂಗಳೂರಿನ ವಾಹನ ಸವಾರರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಹೆದ್ದಾರಿಗೂ ಹಾಗೂ ಸರ್ವೀಸ್ ರಸ್ತೆಯು ಸಮಾನಾಂತರವಾಗಿ ಸಾಗುತ್ತಿಲ್ಲ. ನಡುವೆ ಅಲ್ಲಲ್ಲಿ ಗ್ಯಾಪ್ ಇದೆ. ಈ ಸಮಸ್ಯೆ ಸಮಸ್ಯೆಯನ್ನು ಹೆದ್ದಾರಿ ಪ್ರಾಧಿಕಾರ ಬಗೆಹರಿಸಬೇಕಿದೆ. ಮದ್ದೂರು, ರಾಮನಗರದಲ್ಲಿ ಸರ್ವೀಸ್ ರಸ್ತೆ ಅಪೂರ್ಣವಾಗಿದೆ. ಇದರಿಂದ ಸರ್ವೀಸ್ ರಸ್ತೆಗಳಲ್ಲಿ ಓಡಾಡುವವರಿಗೆ ಕಿರಿ ಕಿರಿ ಆಗುತ್ತಿದೆ.

ಹೆದ್ದಾರಿಯಲ್ಲಿ ಬಿಟ್ಟು ಹೋದ ಕೆಲಸಗಳ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ರೈಲ್ವೆ ಓವರ್ ಬ್ರಿಡ್ಜ್ ನಿರ್ಮಿಸುವ ಮುಖೇನ ಅಪೂರ್ಣ ಸರ್ವೀಸ್ ರಸ್ತೆ ಕೆಲಸ ಆರಂಭಿಸಲಿದ್ದೇವೆ. ಈ ಸಂಬಂಧ ROB ನಿರ್ಮಿಸಲು ಮುಂದಾಗಿದ್ದೇವೆ. ನಿರಂತರವಾಗಿ ಕೇಳಿ ಬಂದ ದೂರುಗಳ ಆಧಾರದಲ್ಲಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಥಳೀಯರಿಗೂ ಸಂಚಾರ ಸಮಸ್ಯೆಗೆ ಮುಕ್ತಿ

ಈ ROB ನಿರ್ಮಾಣದಿಂದ ಇಲ್ಲಿ ಸಂಚಾರವು ಮತ್ತಷ್ಟು ಸುಗಮವಾಗುತ್ತದೆ. ದೂರದ ಪ್ರಯಾಣಿಕರಿಗೆ ಸರಾಗ ಸಂಚಾರ ವ್ಯವಸ್ಥೆ ಜೊತೆಗೆ ಅಲ್ಲಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಗೂ ಕಡಿವಾಣ ಹಾಕಲಾಗುತ್ತದೆ. ಸಮಸ್ಯೆ ಎದುರಿಸುತ್ತಿರುವ ಸ್ಥಳೀಯ ನಿವಾಸಿಗಳಿಗೆ ಪ್ರಯೋಜನ ಒದಗಿಸಲಿದೆ. ಈಗಾಗಲೇ ಟೆಂಡರ್ ನೀಡಲಾಗಿದೆ. ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಅಧಿಕಾರಿಗಳು ಮೂಲಗಳು ಮಾಹಿತಿ ನೀಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+