ಹೊ. ಶ್ರೀನಿವಾಸಯ್ಯ ಇನ್ನಿಲ್ಲ, ಕಳಚಿದ ಇನ್ನೊಂದು ಗಾಂಧಿ ಕೊಂಡಿ
ಹಿರಿಯ ಗಾಂಧಿವಾದಿ ಡಾ. ಹೊ. ಶ್ರೀನಿವಾಸಯ್ಯ(93) ಅವರು ಇಂದು ಮುಂಜಾನೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ .
ಬೆಂಗಳೂರು, ಏಪ್ರಿಲ್ 6: ಹಿರಿಯ ಗಾಂಧಿವಾದಿ ಡಾ. ಹೊ. ಶ್ರೀನಿವಾಸಯ್ಯ(93) ಅವರು ಇಂದು ಮುಂಜಾನೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ
ಕೆಲವು ದಿನಗಳಿಂದ ಕಿಡ್ನಿ ವ್ಯಪಲ್ಯದಿಂದ ಬಳಲುತಿದ್ದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಾವಿರಾರು ಶಾಲೆ-ಕಾಲೇಜುಗಳಲ್ಲಿ ಗಾಂಧಿ ತತ್ವಗಳ ಪ್ರಚಾರ ಮಾಡಿ, ಯುವ ಪೀಳಿಗೆಗೆ ಮಹಾತ್ಮನ ವ್ಯಕ್ತಿತ್ವವನ್ನು ಪರಿಚಯಿಸಿದ್ದರು.[ಡಾ.ಹೊ.ಶ್ರೀನಿವಾಸಯ್ಯ ಅವರಿಗೆ ಗಾಂಧಿ ಸೇವಾ ಪುರಸ್ಕಾರ]

ಗಾಂಧೀಜಿಯವರ ಕುರಿತು ಹಲವು ಕೃತಿಗಳನ್ನು ರಚಿಸಿದ್ದ ಅವರು, ಸಹಕಾರ ತತ್ವದ ಆಧಾರದ ಮೇಲೆ ಬ್ಯಾಂಕ್ ಗಳನ್ನೂ ಪ್ರಾರಂಭಿಸಿದ್ದರು. ಅವರ ಪ್ರಸಿದ್ಧ ಪ್ರವಾಸೀ ಕಥನ "ನಾ ಕಂಡ ಜರ್ಮನಿ" ಸಾಹಿತ್ಯ ವಲಯದಲ್ಲಿ ಅಪಾರ ಮೆಚ್ಚುಗೆ ಪಡೆದಿತ್ತು.
ಸಾಹಿತಿ, ಗಾಂಧಿವಾದಿ, ಪತ್ರಕರ್ತ, ಸಮಾಜ ಸೇವಕ ಹೀಗೆ ನಾನಾ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಶ್ರೀನಿವಾಸಯ್ಯ ಅವರು ಓರ್ವ ಪುತ್ರಿ ಹಾಗೂ ಅಸಂಖ್ಯ ಅಭಿಮಾನಿಗಳನ್ನು ಅಗಲಿದ್ದಾರೆ. ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ 10:30 ರಿಂದ ಸಂಜೆಯವರೆಗೆ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಗಾಂಧಿ ಭವನದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗುವುದು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸೇರಿದಂತೆ ನಾಡಿನ ಹಲವು ಗಣ್ಯರು ಶ್ರೀನಿವಾಸಯ್ಯನವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications