• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಳ್ಳತನ ಬಯಲು ಮಾಡಿದ ಕಳ್ಳಿಯ ಸೆಲ್ಫಿ ಹುಚ್ಚು

By Vanitha
|

ಬೆಂಗಳೂರು, ಸೆಪ್ಟೆಂಬರ್, 28: ಸೆಲ್ಫಿ ಮಾನಸಿಕ ಖಿನ್ನತೆಯ ಪ್ರತಿರೂಪ ಎಂಬ ಮನಶ್ಯಾಸ್ತ್ರಜ್ಞರ ವಾದದ ಜೊತೆಗೆ, ಕಳ್ಳರನ್ನು ಹಿಡಿಯಲು ಅನುಕೂಲವಾಗುವ ಕ್ರಿಯಾಶೀಲ ಅಂಶ ಎಂಬ ಇನ್ನೊಂದು ವಾಕ್ಯವನ್ನು ಸೆಲ್ಫಿ ಮಟ್ಟಿಗೆ ಸೇರಿಸಬಹುದು. ಏಕೆಂದರೆ ನಗರದಲ್ಲಿ ಸೆಲ್ಫಿ ಫೋಟೋದಿಂದ ಒಬ್ಬ ಕಳ್ಳಿ ಪತ್ತೆಯಾಗಿದ್ದಾಳೆ.

ಹೌದು. ರಾಮನಗರ ಜಿಲ್ಲೆಯ ಅಕ್ಕೂರು ಗ್ರಾಮದ ನಂದಿನಿ ಅಲಿಯಾಸ್ ರಂಜಿತಾ (22) ಸೆಲ್ಫಿಯಿಂದ ಸಿಕ್ಕಿಬಿದ್ದ ಕಳ್ಳಿ. ಕೆಲಸ ಮಾಡುತ್ತಿದ್ದ ಮನೆಯಿಂದ ಒಡವೆ ದೋಚಿದ್ದ ಈಕೆ, ಅವುಗಳನ್ನು ಧರಿಸಿ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದಳು. ಮನೆ ಒಡೆಯರ ದೂರಿನ ಆಧಾರದ ಮೇಲೆ ವಿಚಾರಣೆ ಕೈಗೊಂಡ ವರ್ತೂರು ಪೊಲೀಸರು ಈಕೆಯ ಮೊಬೈಲ್ ಪರೀಕ್ಷಿಸಿದ್ದಾರೆ. ಆಗ ಒಡತಿಯ ಒಡವೆ ಹಾಕಿಕೊಂಡು ತೆಗೆದುಕೊಂಡ ಸೆಲ್ಪಿ ಫೋಟೋಗಳು ಪತ್ತೆಯಾಗಿವೆ.[]

ತೂಬರಹಳ್ಳಿಯ ಯುಕೆ ಎನ್ ಅಪಾರ್ಟ್ ಮೆಂಟ್ ನಲ್ಲಿ ನೆಲೆಸಿರುವ ಸಾಫ್ಟ್ ವೇರ್ ಇಂಜಿನಿಯರ್ ಮುಕುಂದ ಎಂಬುವರ ಮನೆಯಲ್ಲಿ ನಂದಿನಿ ಸುಮಾರು ದಿನಗಳಿಂದ ಕೆಲಸ ಮಾಡುತ್ತಿದ್ದಳು. ಮೊಬೈಲ್ ನಲ್ಲಿ ದೊರೆತ ಫೋಟೋಗಳ ಸಾಕ್ಷಿಯಿಂದ ಈಕೆಯನ್ನು ಬಂಧಿಸಿದ ಪೊಲೀಸರು ಆಕೆ ಕದ್ದ 250 ಗ್ರಾಂ ಬಂಗಾರ ಹಾಗೂ 300ಗ್ರಾಂ ಬೆಳ್ಳಿ ಸೇರಿದಂತೆ 6 ಲಕ್ಷದ ಮೌಲ್ಯದ ಒಡವೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಯಾಕೆ ಒಡವೆ ಕದ್ದಳು?

ನಂದಿನಿ ಗಂಡ ಕೆಲವು ದಿನಗಳ ಹಿಂದೆ ತನ್ನ ಕಚೇರಿಯ ಕೆಲಸ ತೊರೆದಿದ್ದನು. ಈಕೆಯ ದುಡಿಮೆಯಿಂದಲೇ ಮನೆ ನಿರ್ವಹಣೆ ಆಗಬೇಕಿತ್ತು. ಈಕೆಯೊಬ್ಬಳ ಸಂಬಳದಿಂದ ಮನೆ ನಿರ್ವಹಣೆ ಕಷ್ಟವಾದ ಪರಿಣಾಮ ಈಕೆ ಮನೆ ಒಡತಿ ಇಡುತ್ತಿದ್ದ ಅಲ್ಮೇರಾದಿಂದ ಒಂದೊಂದೇ ಒಡವೆಗಳನ್ನು ಅಪಹರಿಸುತ್ತಿದ್ದಳು. ಬಳಿಕ ಅದನ್ನು ಧರಿಸಿ ಒಂದು ಸೆಲ್ಫಿ ತೆಗೆದುಕೊಂಡು ಹತ್ತಿರವಿರುವ ಗಿರವಿ ಅಂಗಡಿಗಳಲ್ಲಿ ಇಟ್ಟು ಹಣ ಪಡೆದುಕೊಳ್ಳುತ್ತಿದ್ದಳು.[[ಎಟಿಎಂ ಕಳ್ಳತನ ತಡೆಯಲು ಹೊಸ ಮಾದರಿಯ ಯಂತ್ರ]

ಹೇಗೆ ಪತ್ತೆ ಹಚ್ಚಲಾಯಿತು?

ತೂಬರಹಳ್ಳಿಯ ಯುಕೆ ಎನ್ ಅಪಾರ್ಟ್ ಮೆಂಟ್ ನಲ್ಲಿ ಗುರುತಿನ ಚೀಟಿ ಇದ್ದವರಿಗೆ ಮಾತ್ರ ಪ್ರವೇಶ ಇತ್ತು. ಇದರಿಂದ ಸೆಕ್ಯೂರಿಟಿ ಹಾಗೂ ಮನೆಕೆಲಸದವರ ಕೈವಾಡವಿದೆ ಎಂದು ಅನುಮಾನಿಸಿದ ಮನೆ ಒಡೆಯರು ಪೊಲೀಸರಿಗೆ ದೂರು ನೀಡಿದ್ದರು. ಮನೆ ಕೆಲಸದವಳಾದ ನಂದಿನಿಯನ್ನು ಕೇಳಿದಾಗ ಈಕೆ ಅನುಮಾನ ಬಂದಂತೆ ವರ್ತಿಸಿದ್ದಾಳೆ. ಬಳಿಕ ಆಕೆ ಮೊಬೈಲ್ ನೋಡಿದಾಗ ಎಲ್ಲಾ ಸತ್ಯಾಂಶ ಬಯಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Selfie photo: Bengaluru police has identified one thief (Nandini) on Sunday and take 6lakh price (300gram silver, 250 gram gold) jewelleries from Nandini.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more