ಜಪ್ತಿ ಮಾಡಿದ ವಾಹನಗಳನ್ನು ಠಾಣೆಗಳಲ್ಲಿಟ್ಟುಕೊಂಡು ಕೊಳೆಸುವಂತಿಲ್ಲ- ಹೈಕೋರ್ಟ್
ಬೆಂಗಳೂರು ನ.11: ಅಪರಾಧ ಪ್ರಕರಣಗಳಿಗೆ ಬಳಕೆಯಾದ ಕಾರಣಕ್ಕೆ ಪೊಲೀಸರು ಜಪ್ತಿ ಮಾಡಿದ ವಾಹನಗಳನ್ನು ಠಾಣೆಗಳಲ್ಲೇ ಇಟ್ಟುಕೊಂಡು ಕೊಳೆಸುವಂತಿಲ್ಲ ಎಂದು ಹೈಕೋರ್ಟ್ ಪೊಲೀಸರಿಗೆ ಆದೇಶ ನೀಡಿದೆ.
ಇದರಿಂದಾಗಿ ಅಪರಾಧ ಕೃತ್ಯಗಳಲ್ಲಿ ಬಳಕೆಯಾಗಿದೆ ಎಂಬ ಕಾರಣಕ್ಕೆ ಪೊಲೀಸರು ಜಪ್ತಿ ಮಾಡಿರುವ ವಾಹನಗಳನ್ನು ಹಾಗೆಯೇ ವರ್ಷಾನುಗಟ್ಟಲೆ ತುಕ್ಕು ಹಿಡಿಯುವವರೆಗೂ ಬಿಡುವಂತಿಲ್ಲ ಹಾಗೂ ಜಪ್ತಿ ಮಾಡಿದ ವಾಹನಗಳ ಮಾಲೀಕರು ವಾಹನ ಬಿಡುಗಡೆಗೆ ಕೋರಿದರೆ ಅವುಗಳನ್ನು ನೀಡಬೇಕಾಗುತ್ತದೆ.
ಅಲ್ಲದೆ, ಅಂತಹ ವಾಹನಗಳನ್ನು ಕೇವಲ ಗುರುತಿಸುವ ಉದ್ದೇಶಕ್ಕಾಗಿ ಬಿಡುಗಡೆ ಮಾಡದಿರುವುದು ಸೂಕ್ತವಲ್ಲ. ತನಿಖಾಧಿಕಾರಿಗಳು ಪಂಚನಾಮೆಯೊಂದಿಗೆ ನಾನಾ ಕೋನದಲ್ಲಿ ಪೋಟೋ ತೆಗೆದುಕೊಂಡು ವಾಹನ ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರ ಪೀಠ ಇಂತಹುದೊಂದು ಆದೇಶವನ್ನು ನೀಡಿದೆ.
ಕೋರ್ಟ್ ಆದೇಶವೇನು?: "ಅಪರಾಧ ಕೃತ್ಯಕ್ಕೆ ಬಳಕೆಯಾದ ವಾಹನಗಳನ್ನು ಪೊಲೀಸ್ ಠಾಣೆ ಮುಂದೆ ನಿಷ್ಕ್ರಿಯವಾಗಿಡುವಂತಿಲ್ಲ ಎಂದು ಸುಂದರ್‌ಬಾಯ್ ಅಂಬಲಾಲ್ ದೇಸಾಯಿ ಮತ್ತು ಗುಜರಾತ್ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂಕೊರ್ಟ್ ಆದೇಶಿಸಿದೆ. ಅದರಂತೆ ಜಪ್ತಿಯಾದ ವಾಹನಗಳ ಮಾಲೀಕರು ಅವುಗಳ ಬಿಡುಗಡೆಗೆ ಸಲ್ಲಿಸಿದ ಅರ್ಜಿಗಳನ್ನು ಕೆಲವೊಂದು ಷರತ್ತು ವಿಧಿಸುವ ಮೂಲಕ ಮ್ಯಾಜಿಸ್ಟ್ರೇಟ್ ಅಥವಾ ಕೋರ್ಟ್ ಇತ್ಯರ್ಥಪಡಿಸಬೇಕು" ಎಂದು ನ್ಯಾಯಪೀಠ ಸೂಚನೆ ನೀಡಿದೆ.

ವಾಹನ ಗುರುತಿಸುವ ಉದ್ದೇಶದಿಂದ ಅದರ ಬಿಡುಗಡೆಗೆ ಕೋರಿದ ಅರ್ಜಿ ತಿರಸ್ಕರಿಸುವುದು ಸರಿಯಾದ ಕ್ರಮವಲ್ಲ. ಪೊಲೀಸ್ ಠಾಣೆ ಮುಂದೆ ಇರಿಸಲು ಅವಕಾಶ ಕಲ್ಪಿಸಿದರೆ ವಾಹನಗಳು ಹಾಳಾಗಲಿವೆ.
ಇನ್ನೂ ಗುರುತಿಸುವ ಉದ್ದೇಶದಿಂದ ಪೊಲೀಸರು ವಾಹನಗಳನ್ನು ಕೋರ್ಟ್‌ಗೆ ತರಲು ಸಹ ಸಾಧ್ಯವಾಗುವುದಿಲ್ಲ. ಆದ್ದರಿಂದ ಸುಪ್ರಿಂಕೋರ್ಟ್ ರೂಪಿಸಿರುವ ಮಾರ್ಗಸೂಚಿಯಂತೆ ತನಿಖಾಧಿಕಾರಿ ಪಂಚನಾಮೆಯೊಂದಿಗೆ ವಾಹನದ ಪೋಟೋ ತೆಗೆದುಕೊಂಡು ಬಿಡುಗಡೆ ಮಾಡಬೇಕು ಎಂದು ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ.
ಅಲ್ಲದೆ, ಪ್ರಕರಣದಲ್ಲಿ ಅಧೀನ ನ್ಯಾಯಾಲಯ ಹೊರಡಿಸಿದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಅರ್ಜಿದಾರರು ಆರೋಪಿಗಳು ಅಲ್ಲ. ಕೇವಲ ವಾಹನಗಳ ಮಾಲೀಕರಾಗಿದ್ದಾರೆ. ಆದ ಕಾರಣ ಕಾರಿಗೆ ಮೂರು ಲಕ್ಷ, ಬೈಕಿಗೆ 30 ಸಾವಿರ ಮತ್ತು ಮತ್ತು ಆಟೋರಿಕ್ಷಾಗೆ 75 ಸಾವಿರ ರು. ಭದ್ರತಾ ಖಾತರಿ (ಇಂಡೆಮ್ನಿಟಿ ಬಾಂಡ್) ಪಡೆದು ಬಿಡುಗಡೆ ಮಾಡಬೇಕು.
ತನಿಖಾಧಿಕಾರಿ ಪಂಚನಾಮೆಯೊಂದಿಗೆ ವಿವಿಧ ಕೋನದಲ್ಲಿ ವಾಹನಗಳ ಪೋಟೋ ತೆಗೆಕೊಳ್ಳಬೇಕು. ಗುರುತಿಸುವ ಉದ್ದೇಶಕ್ಕಾಗಿ ಫೋಟೋಗಳನ್ನು ಅಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ಪ್ರಕರಣದ ವಿವರ: ಕೊಲೆಯತ್ನ, ಜೀವ ಬೆದರಿಕೆ ಮತ್ತು ವ್ಯಕ್ತಿಯನ್ನು ಅಕ್ರಮವಾಗಿ ಕೂಡಿಹಾಕಿದ ಅಪರಾಧಕ್ಕೆ ಬಳಕೆಯಾದ ಆರೋಪದ ಮೇಲೆ ಅರ್ಜಿದಾರರ ಒಡೆತನದ ಹೊಂಡಾ ಸಿಟಿ ಕಾರು ಮತ್ತು ಹೊಂಡ ಡಿಯೋ ಬೈಕ್ ಮತ್ತು ಬಜಾಜ್ ಆಟೋರಿಕ್ಷಾವನ್ನು 2021ರಲ್ಲಿ ರಾಜರಾಜೇಶ್ವರಿ ಠಾಣಾ ಪೊಲೀಸರು ಜಪ್ತಿ ಮಾಡಿದ್ದರು. ಈ ಅಪರಾಧ ಪ್ರಕರಣದ ವಿಚಾರಣೆಯು ಅಧೀನ ನ್ಯಾಯಾಲಯದ ಮುಂದೆ ಬಾಕಿಯಿದೆ.
ಈ ನಡುವೆ ತಮ್ಮ ವಾಹನ ಬಿಡುಗಡೆ ಮಾಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ವಾಹನ ಮಾಲೀಕರಾದ ಜವ್ವಾಜಿ ಧನತೇಜ, ಜಯಲಕ್ಷ್ಮೀ ಮತ್ತು ನಂದಿನಿ ಎಸ್. ಪ್ರಕಾಶ್ ಎಂಬುವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 451 ಮತ್ತು 457 ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅರ್ಜಿಯನ್ನು ವಜಾಗೊಳಿಸಿ ನಗರದ 54ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು 2022ರ ಏ.5ರಂದು ಆದೇಶ ಹೊರಡಿಸಿದ್ದರು. ಇದರಿಂದ ಹೈಕೋರ್ಟ್ ಮೊರೆ ಹೋಗಿದ್ದ ಅವರು, ವಾಹನ ಬಿಡುಗಡೆಗೆ ಆದೇಶಿಸಬೇಕೆಂದು ಕೋರಿದ್ದರು.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications