ಸೆಪ್ಟೆಂಬರ್ ತಿಂಗಳಲ್ಲಿ ಏನೆಲ್ಲ ಬದಲಾಗಲಿದೆ ನೋಡಿ...
ಪ್ರತಿ ತಿಂಗಳು ಸಹ ಒಂದನೇ ತಾರೀಕಿನಂದು ಕೆಲವು ಮಹತ್ವದ ಬೆಳವಣಿಗೆಗಳು ನಡೆಯುತ್ತವೆ. ಇದೀಗ ಇಂದಿನಿಂದ ಸೆಪ್ಟೆಂಬರ್ ತಿಂಗಳು ಪ್ರಾರಂಭವಾಗಿದ್ದು, ಈ ತಿಂಗಳು ಹಲವು ಮಹತ್ವದ ವಿಷಯಗಳಲ್ಲಿ ಬದಲಾವಣೆಗಳು ಆಗಲಿವೆ. ಇಂದಿನಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಳವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಮಾತ್ರ ಹೆಚ್ಚಳವಾಗಿದೆ. ಕ್ರೆಡಿಟ್ ಕಾರ್ಡ್, ರುಪೇ ಕಾರ್ಡ್‌ನಲ್ಲೂ ಬದಲಾವಣೆಗಳು ಆಗಲಿವೆ. ಸಂತೋಷದ ವಿಷಯವೆಂದರೆ ಕ್ರೆಡಿಟ್ ಕಾರ್ಡ್ ಕರೆ ಕಿರಿಕಿರಿ ತಪ್ಪಲಿದೆ.
ಸೆಪ್ಟೆಂಬರ್‌ನಲ್ಲಿ ಬ್ಯಾಂಕಿಂಗ್, ಕ್ರೆಡಿಟ್, ಡಿಬೆಟ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಹಲವು ಮಹತ್ವದ ಬದಲಾವಣೆಗಳು ಆಗಲಿವೆ. ಈ ರೀತಿ ಯಾವೆಲ್ಲ ಅಂಶಗಳು ಬದಲಾಗಲಿವೆ. ಇನ್ನು ಉಚಿತ ಆಧಾರ್ ಕಾರ್ಡ್ ಅಪ್ಡೇಟ್ಸ್‌ಗೆ ಕೇವಲ ಎರಡು ವಾರಗಳ ಅವಧಿ ಮಾತ್ರ ಬಾಕಿ ಉಳಿದಿದೆ. ಈ ಅವಧಿಯ ಒಳಗಾಗಿ ಆಧಾರ್ ಕಾರ್ಡ್ ಅಪ್ಡೇಟ್ಸ್ ಮಾಡಿಕೊಳ್ಳದೆ ಇದ್ದರೆ, ನಿಮಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದಕ್ಕೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಇದರೊಂದಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲೂ ಹಲವು ಮಹತ್ವದ ಬದಲಾವಣೆಗಳು ಆಗಲಿವೆ.

ರುಪೇ ಕ್ರೆಡಿಟ್ ಕಾರ್ಡ್ ಪಾಯಿಂಟ್ಸ್ ಕಡಿತವಿಲ್ಲ
ರುಪೇ ಕ್ರೆಡಿಟ್ ಕ್ರೆಡಿಟ್ ಕಾರ್ಡ್ ಮತ್ತು ಯುಪಿಐ ವಹಿವಾಟು ಶುಲ್ಕವನ್ನು ಯಾವುದೇ ರಿವಾರ್ಡ್ ಪಾಯಿಂಟ್ಸ್ ಅಥವಾ ಇತರ ಪ್ರಯೋಜನಗಳನ್ನು ಕಡಿತ ಮಾಡುವುದಿಲ್ಲ ಎಂದು ಹೇಳಲಾಗಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಹೊಸ ನಿಯಮದ ಅನುಸಾರ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 1ರಿಂದ ಅಂದರೆ ಇಂದಿನಿಂದ ಇದು ಜಾರಿಗೆ ಬರಲಿದೆ. ಹೊಸ ರಿವಾರ್ಡ್‌ಗಳು ಸಹ ಇಂದಿನಿಂದ ಸಿಗಲಿದೆ.
ಆಧಾರ್ ಕಾರ್ಡ್ ಅಪ್ಡೇಟ್‌ಗೆ ಇನ್ನೆಷ್ಟು ದಿನ ಬಾಕಿ ಇದೆ ?
ಆಧಾರ್ ಕಾರ್ಡ್ ಉಚಿತ ಅಪ್ಡೇಟ್‌ಗೆ ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ವು ಆಧಾರ್ ಕಾರ್ಡ್ ಉಚಿತ ಅಪ್ಡೇಟ್‌ಗೆ ಕೊನೆಯ ಗಡುವು ನೀಡಿದೆ. ಆಧಾರ್‌ನ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್ಡೇಟ್ ಮಾಡುವ ಗಡುವನ್ನು ಈಗಾಗಲೇ ಮೂರು ತಿಂಗಳ ಅವಧಿಗೆ ಮುಂದೂಡಲಾಗಿದ್ದು, ಈ ಗಡುವು ಇದೇ 14ರಂದು ಸೆಪ್ಟಂಬರ್ 14ಕ್ಕೆ ಮುಕ್ತಾಯವಾಗಲಿದೆ. ಈ ಅವಧಿಯ ನಂತರ ನೀವು ಆಧಾರ್ ಕಾರ್ಡ್ ಅಪ್ಡೇಟ್ಸ್ ಮಾಡಬೇಕು ಎಂದಾದರೆ, ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು
ಕ್ರೆಡಿಟ್ ಕಾರ್ಡ್‌ನಲ್ಲೂ ಈ ತಿಂಗಳು ಕೆಲವು ಮಹತ್ವದ ಬದಲಾವಣೆಗಳು ಆಗಲಿವೆ. ಯಾವುದೇ ಮಾದರಿಯ ವಿಶೇಷ ಕ್ರೆಡಿಟ್‌ಗಳನ್ನು ಬ್ಯಾಂಕ್‌ಗಳೇ ಮುಂದೆ ಬಂದು ಗ್ರಾಹಕರಿಗೆ ನೀಡುವುದು ಅಥವಾ ಒತ್ತಡದ ತಂತ್ರವನ್ನು ಅನುಸರಿಸುವಂತಿಲ್ಲ. ಗ್ರಾಹಕರಿಗೆ ಬೇಕಾದ ಕ್ರೆಡಿಟ್ ಕಾರ್ಡ್ ಆಯ್ಕೆಗಳನ್ನು ಗ್ರಾಹಕರೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ನಿಯಮವನ್ನು ಜಾರಿ ಮಾಡಿದೆ. ಇನ್ನು ಈ ನಿಯಮವು ಸೆಪ್ಟೆಂಬರ್ 6ರಿಂದ ಜಾರಿಗೆ ಬರಲಿದೆ. ಈ ಮೂಲಕ ಕ್ರೆಡಿಟ್ ಕಾರ್ಡ್ ಅವಶ್ಯಕತೆ ಇಲ್ಲದ ಗ್ರಾಹಕರು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಿ ಎನ್ನುವ ಕರೆಗಳು ಬರುವ ಸಾಧ್ಯತೆ ಕಡಿಮೆ ಆಗಲಿದೆ.

ಬ್ಯಾಂಕ್ ಲಾಯಲ್ಟಿ ನಿಯಮದಲ್ಲಿ ಬದಲಾವಣೆ
ಈ ತಿಂಗಳು ಕೆಲವು ಪ್ರಮುಖ ಬ್ಯಾಂಕ್‌ಗಳ ಲಾಯಲ್ಟಿಯಲ್ಲೂ ಕೆಲವು ನಿರ್ದಿಷ್ಟ ಬದಲಾವಣೆಗಳು ಆಗಲಿವೆ. ಅದರಲ್ಲಿ ಪ್ರಮುಖವಾಗಿ
ಸೆಪ್ಟೆಂಬರ್ 1ರಿಂದ ಅಂದರೆ, ಇಂದಿನಿಂದ ಕೆಲವು ಬದಲಾವಣೆ ಆಗಲಿದೆ. ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಕೆಲವು ನಿರ್ದಿಷ್ಟ ನಿಯಮಗಳನ್ನು ಎಚ್‌ಡಿಫ್‌ಸಿ ಬ್ಯಾಂಕ್ ಬದಲಾಯಿಸುತ್ತಿದೆ.
ಎಚ್‌ಡಿಎಫ್‌ಸಿಯು ಕೆಲವು ನಿರ್ದಿಷ್ಟ ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಲಾಯಲ್ಟಿ ಪ್ರೋಗ್ರಾಂ ನಿಯಮಗಳನ್ನು ಬದಲಾಯಿಸಿದೆ. ಕೆಲವು ಬಿಲ್ ಪಾವತಿ ವಹಿವಾಟುಗಳ ಮೇಲಿನ ರಿವಾರ್ಡ್ ಪಾಯಿಂಟ್‌ಗಳ ಮಿತಿ ವಿಧಿಸಿದೆ. ಈ ಬದಲಾವಣೆ ಸಹ ಇಂದಿನಿಂದಲೇ ಜಾರಿಗೆ ಬರಲಿದೆ ಎನ್ನಲಾಗಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications