ಎಟಿಎಂ ಭದ್ರತೆ : ಮುಖ್ಯಮಂತ್ರಿಗೆ 7 ಐಡಿಯಾ

ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯ ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಎಟಿಎಂ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು. ಸರ್ಕಾರ ಎಟಿಎಂಗಳ ಭದ್ರತೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. (ಬೆಂಗಳೂರು : ಪೊಲೀಸ್ ವ್ಯವಸ್ಥೆಗೆ ಆಮ್ ಆದ್ಮಿ ಸಲಹೆ)
ಸರ್ಕಾರ ಪೊಲೀಸ್ ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡುತ್ತಿರುವುದರಿಂದ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರ್.ಅಶೋಕ್ ಆರೋಪಿಸಿದರು. ಎಟಿಎಂಗಳ ಭದ್ರತೆಯ ಜವಾಬ್ದಾರಿಯನ್ನು ಬ್ಯಾಂಕುಗಳು ನೋಡಿಕೊಳ್ಳಬೇಕು ಎನ್ನುವ ಸರ್ಕಾರದ ನಿಲುವನ್ನು ತೀವ್ರವಾಗಿ ಖಂಡಿಸಿದರು.
ಎಟಿಎಂಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಏಳು ಸಲಹೆಗಳನ್ನು ಪಕ್ಷದ ವತಿಯಿಂದ ನೀಡಲಾಗುತ್ತಿದೆ. ಇದನ್ನು ಅವರು ಪರಿಗಣಿಸುತ್ತಾರೆ ಎಂದು ಭಾವಿಸುತ್ತೇವೆ ಎಂದು ಸುರೇಶ್ ಕುಮಾರ್ ಹೇಳಿದರು.
ಬಿಜೆಪಿಯ ಸಲಹೆಗಳು
* ಎಟಿಎಂ ಕೇಂದ್ರದ ಬಾಗಿಲು ತೆರೆಯಲು ಕಾರ್ಡ್ ಉಪಯೋಗಿಸಬೇಕಾದ ಆಟೋಮ್ಯಾಟಿಕ್ ವ್ಯವಸ್ಥೆ ಜಾರಿಗೆ ತರಬೇಕು.
* ಒಂದು ಎಟಿಎಂ ಕೇಂದ್ರದಲ್ಲಿ 2-3 ಯಂತ್ರದ ಬದಲು, ಒಂದೇ ಯಂತ್ರ ಅಳವಡಿಸಬೇಕು.
* ಪ್ರತಿ ಎಟಿಎಂ ಬಾಗಿಲಿನ ಗಾಜು ಸಂಪೂರ್ಣ ಪಾರದರ್ಶಕವಾಗಿರಬೇಕು. ಕೂಲಿಂಗ್ ಪೇಪರ್ ಹಾಕುವುದಕ್ಕೆ ನಿಷೇಧ ಹೇರಬೇಕು.
* ಎಟಿಎಂ ಕೇಂದ್ರದಲ್ಲಿ ಸಧೃಢ ಭದ್ರತಾ ಸಿಬ್ಬಂದಿ ನೇಮಿಸಬೇಕು.
* ಎಟಿಎಂ ಕೇಂದ್ರದವೊಳಗೆ ತುರ್ತು ಎಚ್ಚರಿಕೆ ಗಂಟೆ ವ್ಯವಸ್ಥೆ ಆಳವಡಿಸಬೇಕು.
* ನಿರ್ಜನ ಪ್ರದೇಶದಲ್ಲಿ ಎಟಿಎಂ ಕೇಂದ್ರ ಆರಂಭಿಸಲು ಅನುಮತಿ ನೀಡಬಾರದು.
* ಎಟಿಎಂ ಕೇಂದ್ರದಲ್ಲಿನ ಸಿಸಿಟಿವಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪರಿಶೀಲನೆ ನಡೆಸಲು ಸೂಚನೆ ನೀಡಬೇಕು.
(ಎಟಿಎಂ ಹಲ್ಲೆ : ಆರೋಪಿ ಸುಳಿವಿಗೆ 1 ಲಕ್ಷ ಬಹುಮಾನ)












Click it and Unblock the Notifications