ಸಂಬಳಕ್ಕಾಗಿ ಸ್ಪೀಕರ್ ಕಚೇರಿ ಎದುರು ನೌಕರರ ಧರಣಿ

ಬೆಂಗಳೂರು, ಅಕ್ಟೋಬರ್ 26: ಕೆಬಿ ಕೋಳಿವಾಡ ವಿಧಾನಸಭೆ ಸ್ಪೀಕರ್ ಆಗಿದ್ದ ಅವಧಿಯಲ್ಲಿ ನೇಮಕಗೊಂಡಿರುವ ಸರಿಸುಮಾರು 100 ಜನ ನೌಕರರಿಗೆ ಈವರೆಗೂ ವೇತನ ನೀಡಿಲ್ಲ ಎಂದು ಆರೋಪಿಸಿ ಹಲವಾರು ನೌಕರರು ಶುಕ್ರವಾರ ಹಾಲಿ ಸ್ಪೀಕರ್ ರಮೇಶ್ ಕುಮಾರ್ ಕಚೇರಿ ಎದುರು ಹಠಾತ್ ಪ್ರತಿಭಟನೆ ನಡೆಸಿದರು.

2017-18ನೇ ಸಾಲಿನಲ್ಲಿ 100ಕ್ಕೂ ಹೆಚ್ಚು ನೌಕರರನ್ನು ವಿಧಾನಸಭೆ ಸಚಿವಾಲಯದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು, ವಿವಿಧ ಹಂತದ ಹುದ್ದೆಗಳ ನೇಮಕಾತಿ ವೇಳೆ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿತ್ತು.

ಅಲ್ಲದೆ ಅಂದಿನ ಸ್ಪೀಕರ್ ಕೆಬಿ ಕೋಳೀವಾಡ್ ಹಣಕಾಸು ಇಲಾಖೆಯ ಅನುಮತಿ ಇಲ್ಲದೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದ್ದಾರೆ ಹೀಗಾಗಿ ಹಣಕಾಸು ಇಲಾಖೆಯಿಂದ ವೇತನ ಬಟುವಾಡೆಗೆ ಅವಕಾಶವಿಲ್ಲ ಎಂಬ ಮಾಹಿತಿಯೂ ಹೊರಬಿದ್ದಿತ್ತು.

Secretariat employees seek salary before speaker

ಈ ನಡುವೆಯೇ ಈ ಕರ್ತವ್ಯಕ್ಕೆ ಹಾಜರಾಗಿರುವ 100ಕ್ಕೂ ಹೆಚ್ಚು ಜನರ ಪರಿಸ್ಥಿತಿ ಅತಂತ್ರವಾಗಿದೆ. ಈ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚು ನೌಕರರು ಶುಕ್ರವಾರ ಸ್ಪೀಕರ್ ಹಾಗೂ ರಮೇಶ್ ಕುಮಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿ, ಕಳೆದ ಎಂಟು ತಿಂಗಳಿಂದ ತಾವು ಯಾವುದೇ ವೇತನವಿಲ್ಲದೆ ದುಡಿಯುತ್ತಿದ್ದು ಆದಷ್ಟು ಬೇಗ ನ್ಯಾಯ ಒದಗಿಸಿಕೊಡಬೇಕೆಂದು ಕೋರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+