ಮುನ್ನೋಟದಿಂದ 'ಇಗೋ ವಿಜ್ಞಾನ' ಬರಹದ ಸ್ಪರ್ಧೆ
ಬೆಂಗಳೂರು, ಫೆಬ್ರವರಿ 10: ಮುನ್ನೋಟವು 'ಇಗೋ ವಿಜ್ಞಾನ' ಎಂಬ ಶೀರ್ಷಿಕೆಯಲ್ಲಿ ವಿಜ್ಞಾನ ಬರಹದ ಸ್ಪರ್ಧೆಯನ್ನು ಆಯೋಜಿಸಿದೆ.
ತಾಯ್ನುಡಿಯಲ್ಲಿ ಕಲಿಕೆಗೆ ಒತ್ತು ಕೊಡುತ್ತ ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಜ್ಞಾನ ಸೃಷ್ಟಿಯತ್ತ ಕೆಲಸ ಮಾಡುತ್ತಿರುವ ಮುನ್ನೋಟ ಟ್ರಸ್ಟ್ ಈ ಬಾರಿಯ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ "ಇಗೋ ವಿಜ್ಞಾನ" ಎನ್ನುವ ವಿಜ್ಞಾನ-ತಂತ್ರಜ್ಞಾನ ಬರಹದ ಸ್ಪರ್ಧೆಯನ್ನು ಏರ್ಪಡಿಸಿದೆ.
ಇದರ ಅನ್ವಯ ಪ್ರಪಂಚದ ಯಾವುದೇ ಮೂಲೆಯಲ್ಲಿರುವ, ಯಾವುದೇ ವಯಸ್ಸಿನ ಕನ್ನಡಿಗರಾದರೂ ಸರಿ ಈ ಹೊತ್ತಿನ ವಿಜ್ಞಾನ ಪ್ರಪಂಚದ ಎಂಟು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ದುಕೊಂಡು, ಅದರ ಮೇಲೆ ಸಾವಿರ ಪದಗಳ ಒಂದು ಬರಹವನ್ನು ಬರೆದು [email protected] ಮಿಂಚೆ ವಿಳಾಸಕ್ಕೆ ಕಳಿಸಬೇಕು.

ಆಯ್ಕೆಯಾದ ಮೊದಲೆರಡು ಬರಹಗಳಿಗೆ ಹತ್ತು ಸಾವಿರ ಹಾಗೂ ಐದು ಸಾವಿರ ರೂಪಾಯಿಗಳ ಬಹುಮಾನವಿದೆ.
ಬರಹ ಮಾಡಬೇಕಾದ ಎಂಟು ವಿಷಯಗಳು:
1- ಮೂಲ ವಿಜ್ಞಾನದ ಮುಂದಿನ ದಿನಗಳು ಹೇಗಿರಲಿವೆ?
2- ಸಾರಿಗೆ ವ್ಯವಸ್ಥೆಯಲ್ಲಿ ಆಗಲಿರುವ ಬದಲಾವಣೆಗಳೇನು?
3- ಅರಿವಿನ ಜಗತ್ತಿಗೆ ಗಣಿತದ ಹೊಸ ಕೊಡುಗೆಗಳು ಹೇಗಿರಲಿವೆ?
4- ವೈದ್ಯಕೀಯ ಕ್ಷೇತ್ರದಲ್ಲಿ ಆಗಲಿರುವ ಮುಂದಿನ ಬದಲಾವಣೆಗಳೇನು?
5-ಸಂಪರ್ಕ ವ್ಯವಸ್ಥೆ ಮುಂದೆ ಹೇಗೆ ಬದಲಾಗಲಿದೆ?
6-ಬೇಸಾಯದಲ್ಲಿ ಆಗಬೇಕಿರುವ ಸುಧಾರಣೆಗಳೇನು?
7- ಬಾನಂಗಳದ ಮುಂದಿನ ದಿನಗಳು ಹೇಗಿರಲಿವೆ?
8-ಯಾವ ತಂತ್ರಜ್ಞಾನಗಳು ಕ್ರಾಂತಿ ಹುಟ್ಟಿಸಲಿವೆ?. ಬರಹವನ್ನು ಕಳುಹಿಸಲು 22 ಫೆಬ್ರವರಿ 2020 ಕೊನೆಯ ದಿನಾಂಕವಾಗಿರಲಿದೆ.
-
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್












Click it and Unblock the Notifications