ಅವಿರತದಿಂದ ಈ ವಾರಾಂತ್ಯ ಎರಡು ವಿಶೇಷ ಕಾರ್ಯಕ್ರಮ
ಬೆಂಗಳೂರು, ಜೂ. 05 : ಬಡಮಕ್ಕಳಿಗೆ ಪುಸ್ತಕ ವಿತರಣೆ, ಕವನ ವಾಚನ, ನಾಟಕ ಪ್ರದರ್ಶನ, ಪರಿಸರ ಜಾಗೃತಿ ಕುರಿತಂತೆ ಏನಾದರೊಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತ, ಅವಿರತವಾಗಿ ಸಮಾಜಸೇವೆಯಲ್ಲಿ ನಿರತವಾಗಿರುವ 'ಅವಿರತ' ಸಂಸ್ಥೆ ಈ ವಾರಾಂತ್ಯ ಮತ್ತೆರಡು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಕಾರ್ಯಕ್ರಮ 1 : ಜೂನ್ 6, ಶನಿವಾರದಂದು ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ವಿಜ್ಞಾನ ಪ್ರದರ್ಶಿಕೆಗಳ ಬಗ್ಗೆ ಅವಿರತ ಸದಸ್ಯರಿಗೆ ತರಬೇತಿ ಕಾರ್ಯಕ್ರಮವಿದೆ. ತರಬೇತಿ ಪಡೆದ ಸದಸ್ಯರು ಅವಿರತದೊಡನೆ ತೊಡಗಿಸಿಕೊಂಡರುವ ಅಥವಾ ಇತರೇ ಆಯ್ದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರದರ್ಶನಗಳನ್ನು ಆಯೋಜಿಸಬಹುದು.
ಈ ಮುಂಚೆ ಹೆಸರು ಕೊಟ್ಟು ನೋಂದಾಯಿಸಿಕೊಂಡಿರುವ ಸದಸ್ಯರು 10 ಗಂಟೆಗೆ ಸರಿಯಾಗಿ ತಾರಾಲಯ ತಲುಪತಕ್ಕದ್ದು. [ಜೂನ್ 5ರಂದು ಈವಯ್ಯ ಏನು ಮಾಡುತ್ತಿದ್ದ?]
ವಿವರಗಳು
ವಿಳಾಸ :
ಜವಾಹರಲಾಲ್ ನೆರಹೂ ತಾರಾಲಯ
ಬೆಂಗಲೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜ್ಯುಕೇಷನ್
ಟಿ ಚೌಡಯ್ಯ ರಸ್ತೆ, ಹೈ ಗ್ರೌಂಡ್ಸ್
ಬೆಂಗಳೂಹು - 560 001
ಗುರುತಿನ ಸ್ಥಳ : ಇಂದಿರಾ ಗಾಂಧಿ ಸಂಗೀತ ಕಾರಂಜಿ ಎದುರು, ರಾಜ ಭವನದ ಬಳಿ.
ಸಮಯ : ಬೆಳಗ್ಗೆ 10 ಗಂಟೆ

ಕಾರ್ಯಕ್ರಮ 2 : ಜೂನ್ 7, ಭಾನುವಾರದಂದು, ವಿಶ್ವ ಪರಿಸರ ದಿನ ನಿಮಿತ್ತ ಅವಿರತ-ಆರೇಕಲ್ ಸಂಸ್ಥೆಯ ಸಹಭಾಗಿತ್ವದಲ್ಲಿ, ಮಲ್ಲತ್ತಹಳ್ಳಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾನಿಲಯದ ಕಲಾಗ್ರಾಮದಲ್ಲಿ ವನ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ವಿವರಗಳು
ಸ್ಥಳ : ಕಲಾ ಗ್ರಾಮ, ಮಲ್ಲತ್ತಹಳ್ಳಿ ರಸ್ತೆ, ಕೆಂಗುಂಟೆ, ಜ್ಞಾನಭಾರತಿ, ಬೆಂಗಳೂರು - 560 072
ಸಮಯ : ಬೆಳಗ್ಗೆ 9
ಗೂಗಲ್ ಮ್ಯಾಪ್ | ಫೇಸ್ ಬುಕ್ ಪುಟ :
ನೀವೂ ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆ ತನ್ನಿ ಎಂದು ಅವಿರತ ಸಂಸ್ಥೆಯ ಸದಸ್ಯರು ಕೋರಿದ್ದಾರೆ.












Click it and Unblock the Notifications