Bengaluru Bandh: ಶಾಲಾ-ಕಾಲೇಜುಗಳಿಗೆ ರಜೆ ಇದೆಯಾ? ಇಲ್ವಾ?
ಕಾವೇರಿ ಕಿಚ್ಚಿನ ಕಾರಣ ತಮಿಳುನಾಡು & ಕರ್ನಾಟಕದ ಸ್ಥಿತಿ ಸೂಕ್ಷ್ಮವಾಗಿದೆ. ಅದರಲ್ಲೂ ಕನ್ನಡಿಗರು ಈ ಅನ್ಯಾಯದ ವಿರುದ್ಧ ಆಕ್ರೋಶ ಹೊರಹಾಕಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ಕಾರಣಕ್ಕೆ ವಿವಿಧ ಸಂಘಟನೆಗಳು ಮಂಗಳವಾರ (ಸೆಪ್ಟೆಂಬರ್ 26) ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಆದರೆ ಶಾಲಾ & ಕಾಲೇಜುಗಳಿಗೆ ರಜೆ ಕೊಡ್ತಾರಾ? ಇಲ್ವಾ? ಅಂತಾ ರಾಜ್ಯದ ಜನ ಟೆನ್ಷನ್ ಆಗಿದ್ದರು. ಇದೀಗ ಜಿಲ್ಲಾಧಿಕಾರಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.
ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ ಕ್ರಮ ವಿರೋಧಿಸಿ ವಿವಿಧ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, 150 ಕ್ಕೂ ಹೆಚ್ಚು ಸಂಘಟನೆಗಳು ಈ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಆಮ್ ಆದ್ಮಿ ಪಕ್ಷ, ಜನತಾದಳ ಕೂಡ ಬಂದ್‌ಗೆ ಬೆಂಬಲ ನೀಡಿದ್ದು, ಕಾವೇರಿ ಹೋರಾಟಕ್ಕೆ ಧುಮುಕಿವೆ. ಮತ್ತೊಂದು ಕಡೆ ಬಸ್ ಓಡಾಟ ಕೂಡ ವಿರಳವಾಗುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳ ಪೋಷಕರಲ್ಲಿ ಶಾಲೆಗಳ ಬಗ್ಗೆ ಟೆನ್ಷನ್ ಶುರುವಾಗಿತ್ತು. ಈ ಮಧ್ಯೆ ಕಾಲೇಜು ವಿದ್ಯಾರ್ಥಿಗಳೂ ಟೆನ್ಷನ್ ಆಗಿದ್ದರು. ಆದರೆ ಇದೀಗ ಅವರಿಗೆ ರಿಲ್ಯಾಕ್ಸ್ ಕೊಡುವ ಸುದ್ದಿ ಸಿಕ್ಕಿದೆ.

ಶಾಲಾ-ಕಾಲೇಜಿಗೆ ರಜೆ ಇದೆಯಾ? ಇಲ್ವಾ?
ಬೆಂಗಳೂರು ಬಂದ್ ಹಿನ್ನೆಲೆ ಶಾಲೆ & ಕಾಲೇಜುಗಳಿಗೆ ರಜೆ ಘೋಷಿಸಿರುವ ಕುರಿತು ಅಧಿಕೃತ ಮಾಹಿತಿ ಸಿಕ್ಕಿದೆ. ಬೆಂಗಳೂರು ಬಂದ್ ಘೋಷಿಸಿದ ಕಾರಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಗಳೂರು ನಗರದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದ್ದಾರೆ. ಈ ಮೂಲಕ ನಾಳೆ ರಾಜಧಾನಿಯ ಶಾಲಾ-ಕಾಲೇಜುಗಳಿಗೆ ಬೀಗ ಬೀಳಲಿದೆ. ರಜೆ ಘೋಷಣೆ ಹಿನ್ನೆಲೆಯಲ್ಲಿ ಟೆನ್ಷನ್ ಆಗಿರುವ ವಿದ್ಯಾರ್ಥಿಗಳಿಗೂ ಇದರಿಂದ ರಿಲ್ಯಾಕ್ಸ್ ಆಗಿದೆ.
2016ರಲ್ಲಿ ನಡೆದ ಕಹಿ ಘಟನೆಗಳು...
ಇನ್ನು ಮತ್ತೊಂದು ಕಡೆ ಬೆಂಗಳೂರಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದ್ದು ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಕ್ರಮ ವಹಿಸಲಾಗಿದೆ. ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಸೆ. 25ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 26ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಇರಲಿದೆ ಎಂದು ಈಗಾಗ್ಲೇ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದು ಕಡೆ 2016ರಲ್ಲಿ ನಡೆದ ಕಹಿಘಟನೆ ಮರುಕಳಿಸದಂತೆ ತಡೆಯಲು, ಬಿಗಿ ಬಂದೋಬಸ್ತ್ ಮಧ್ಯೆ ಎಲ್ಲಾ ಕಡೆಯು ಹದ್ದಿನ ಕಣ್ಣಿಡಲಾಗಿದೆ. ಯಾವುದೆ ರೀತಿ ಕಾನೂನು ಬಾಹಿರ ಚಟುವಟಿಕೆಗೆ ಅವಕಾಶ ಇಲ್ಲ ಎಂದು ಪೊಲೀಸ್ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಷ್ಟೆಲ್ಲದರ ಮಧ್ಯೆ ತಮಿಳುನಾಡಿನ ಬಸ್‌ಗಳಿಗೆ ಭದ್ರತೆ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ ಎನ್ನಲಾಗಿದೆ. ತಮಿಳುನಾಡು ಬಸ್‌ಗಳು ಭದ್ರತೆ ಬೇಕು ಎಂದು ಮನವಿ ಮಾಡಿದರೆ ಬಸ್‌ಗಳಿಗೆ ಭದ್ರತೆ ಒದಗಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಬೆಂಗಳೂರು ನಗರದಲ್ಲಿ ಭದ್ರತೆಗೆ 60 ಕೆಎಸ್ಆರ್‌ಪಿ ಮತ್ತು 40 ಸಿಎಆರ್ ತುಕಡಿಗಳನ್ನ ನಿಯೋಜಿಸಲು ಸಿದ್ಧತೆ ನಡೆದಿದೆ. ಈ ಮೂಲಕ ಬೆಂಗಳೂರು ಫುಲ್ ಅಲರ್ಟ್ ಆಗಿದೆ.












Click it and Unblock the Notifications