ಕೆರೆ ಉಳಿವಿಗೆ ಗಿಡ ನೆಟ್ಟ ಶಾಸಕರು, ಜಾಗೃತಿ ಸಾರಿದ ರಂಗೋಲಿಗಳು
ಬೆಂಗಳೂರು,ಜುಲೈ, 16: ಸಾಮಾಜಿಕ ಚಿಂತನೆಯಲ್ಲಿ ಸದಾ ಮುಂದಿರುವ ಯುನೈಟೆಡ್ ವೇ ಬೆಂಗಳೂರು ಮತ್ತು ಕೆಆರ್ ಪುರಂ ಕೆರೆ ಸಂರಕ್ಷಣಾ ಟ್ರಸ್ಟ್ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 'ನಮ್ಮ ನಡಿಗೆ ಕೌದೇನಹಳ್ಳಿಕ ಕೆರೆ ಕಡೆಗೆ' ಕಾರ್ಯಕ್ರಮಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ.
ಯುನೈಟೆಡ್ ವೇ ಬೆಂಗಳೂರು ಕಾರ್ಯಕಾರಿ ನಿರ್ದೇಶಕ ಮನೀಶ್, ಕೆ ಆರ್ ಪುರಂ ಶಾಸಕ ಬಿ ಎ ಬಸವರಾಜ್ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷ.[ಪರಿಸರ ಸಂರಕ್ಷಣೆಗೆ ಮುಂದಾದ ಯುನೈಟೆಡ್ ವೇ ಬೆಂಗಳೂರು]

ಬೆಳಗ್ಗೆ ಎಂಟು ಗಂಟೆಗೆ ಆರಂಭವಾದ ಕಾರ್ಯಕ್ರಮ ಆರಂಭವಾಗಲಿದ್ದು ಮಧ್ಯಾಹ್ನ 12 ಗಂಟೆವರೆಗೆ ನಡೆಯಿತು. ಕೆರೆ ಸಂರಕ್ಷಣೆ ಸಂಬಂಧ ಜಾಗೃತಿ ಸಾರುವ ಭಿತ್ತಿ ಪತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಲಾಯಿತು. [ಪರಿಸರ ಜಾಗೃತಿ ಸಾರಿದ ನಂದಿ ಹಿಲ್ಲಥಾನ್]

ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಕೆರೆಗೆ ಗಂಗಾ ಪೂಜೆಯನ್ನು ಸುಹ ಇದೇ ಸಂದರ್ಭದಲ್ಲಿ ಮಾಡಲಾಯಿತು.













Click it and Unblock the Notifications