Bengaluru Namma Metro: ಸರ್ಜಾಪುರ-ಹೆಬ್ಬಾಳ ಹೊಸ ಯೋಜನೆ, ಮಣ್ಣು ಪರೀಕ್ಷೆ ಯಶಸ್ವಿ, ಮಾರ್ಗ ಆರಂಭ, ಕಾಮಗಾರಿ ಮಾಹಿತಿ
ಬೆಂಗಳೂರು ಮಾರ್ಚ್ 30: ನಗರದ ಕೆ.ಆರ್.ಪುರಂ ನಿಂದ ವೈಟ್‌ಫಿಲ್ಡ್‌ವರೆಗಿನ ಮೆಟ್ರೋ ಉದ್ಘಾಟನೆಯಾದ ಬೆನ್ನಲ್ಲೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ಇತರ ಐಟಿ ಕಾರಿಡಾರ್‌ಗಳಿಗೆ ನಮ್ಮ ಮೆಟ್ರೋ ಅನ್ನು ವಿಸ್ತರಿಸಲು ಸಜ್ಜಾಗಿದೆ.
ಐಟಿ ಕಾರಿಡಾರ್ ಆಗಿರುವ ವೈಟ್‌ಫಿಲ್ಡ್ ಭಾಗದ ಜನರ ಕನಸು ಇತ್ತೀಚಿನ ಮೆಟ್ರೋ ಮಾರ್ಗ ಉದ್ಘಾಟನೆ ಬಳಿಕ ಈಡೇರಿದೆ. ಅದೇ ರಿತಿ ಈಗಾಗಲೇ ಪ್ರಸ್ತಾಪಿಸಲಾಗಿದ್ದ ಹೆಬ್ಬಾಳ- ಸರ್ಜಾಪುರ ಮೆಟ್ರೋ ಮಾರ್ಗ ಆರಂಭಕ್ಕೆ ಸಕಲ ಸಿದ್ಧತೆಗಳು ಆರಂಭವಾಗಿವೆ.

ಮತ್ತೊಂದು ಐಟಿ ಕಾರಿಡಾರ್ ಆಗಿರುವ ಕೋರಮಂಗಲ, ಸರ್ಜಾರಪುರ ಭಾಗಕ್ಕೆ ನಗರದಿಂದ ಮೆಟ್ರೋ ಮಾರ್ಗ ಸಂಪರ್ಕಿಸುವ ಯೋಜನೆ ಇದಾಗಿದೆ. ಆಗರ, ಕೋರಮಂಗಲ, ಡೈರಿ ವೃತ್ತ ಮಾರ್ಗವಾಗಿ ಮೆಟ್ರೋ ಲೈನ್ ಹಾದು ಹೋಗಲಿದೆ.
ಸರ್ಜಾಪುರದಿಂದ ಹೆಬ್ಬಾಳ ಮೆಟ್ರೋ ಯೋಜನೆ 3ಎ ಅಡಿ ಬರಲಿದೆ. ಒಟ್ಟು 35 ಕಿಲೋ ಮೀಟರ್ ಉದ್ದದ ಮಾರ್ಗಕ್ಕೆ ಡಿಪಿಆರ್ (ಸಮಗ್ರ ಯೋಜನಾ ವರದಿ) ಕೆಲವೇ ತಿಂಗಳುಗಳಲ್ಲಿ ಸಿದ್ಧವಾಗಲಿದೆ. ಈ ಸಂಬಂಧ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಒಟ್ಟು ಸುಮಾರು ₹15,000 ಕೋಟಿ ಮೊತ್ತದ ಈ ಯೋಜನೆಯನ್ನು ಕಳೆದ ವರ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಜೆಟ್‌ನಲ್ಲಿ ಘೊಷಣೆ ಮಾಡಿದ್ದರು.
ಯೋಜನೆಯ ಡಿಪಿಆರ್ ಸಿದ್ಧಪಡಿಸುವ ಸಂಬಂಧ ಅಧಿಕಾರಿಗಳು ಈಗಾಗಲೇ ಸರ್ಜಾಪುರ-ಹೆಬ್ಬಾಳ ಮಾರ್ಗದ ಮಣ್ಣು ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ಕೋರಮಂಗಲ, ಆಗರ, ಸರ್ಜಾಪುರ ರಸ್ತೆಯಲ್ಲಿ ಸದಾ ಸಂಚಾರ ದಟ್ಟಣೆ ಕೂಡಿರುತ್ತದೆ. ಕಾರಣ ಬೆಂಗಳೂರು ನಗರದಿಂದ ಹೊಸೂರು, ತಮಿಳುನಾಡಿಗೆ ಇದೇ ಮಾರ್ಗವಾಗಿ ಜನ ತೆರಳುತ್ತಾರೆ. ಹೀಗಾಗಿ ಈ ಭಾಗವು ಸದಾ ಸಂಚಾರ ದಟ್ಟಣೆಯಿಂದ ತುಂಬಿರುತ್ತದೆ.

ಬೆಳ್ಳಂದೂರು, ಸರ್ಜಾಪುರ ಸುತ್ತಮುತ್ತ ಐ.ಟಿ ಕಂಪನಿಗಳ ನೌಕರರು ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗಲು ಹೆಬ್ಬಾಳ- ಸರ್ಜಾರಪುರ ಮೆಟ್ರೋ ಮಾರ್ಗದ ಪ್ರಸ್ತಾವನೆ ಈ ಹಿಂದೆ ಪ್ರಸ್ತಾಪಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅದರ ಅನುಷ್ಠಾನಗೊಂಡಿರಲಿಲ್ಲ. ಈ ಮಾರ್ಗದಲ್ಲಿ ಮೆಟ್ರೋ ಸಂಪರ್ಕಸಾಧಿಸಿದ್ದೇ ಆದರೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಮೆಟ್ರೊ ಜಾಲ ಇನ್ನಷ್ಟು ಬಲಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಪ್ರಗತಿಯಲ್ಲಿರುವ ಸರ್ವೇ ಕಾರ್ಯ
ಯೋಜನೆಯ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕೆಲಸವನ್ನು ಮುಂಬೈ ಮೂಲದ ಕಂಪನಿಗೆ ನೀಡಲಾಗಿದೆ. ಆ ಕಂಪನಿ ಸದಸ್ಯರು ಈಗಾಗಲೇ ಸ್ಥಳ ಪರಿಶೀಲನೆ ಮಾಡಿದ್ದಾರೆ. ಡಿಪಿಆರ್ ತಯಾರಾಗಲು ಇನ್ನೂ ಎರಡು ತಿಂಗಳು ಬೇಕಾಗಬಹುದು ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಬಿಎಂಆರ್‌ಸಿಎಲ್ ಅಧಿಕಾರಿಗಳು ಮಣ್ಣು ಮಣ್ಣು ಪರೀಕ್ಷೆ ಕಾರ್ಯ ಮುಗಿಸಿದ್ದಾರೆ. ಸರ್ಜಾಪುರದಿಂದ ಹೆಬ್ಬಾಳ ವರೆಗೆ 70 ಕಡೆ ಮಣ್ಣು ಪರೀಕ್ಷೆ ನಡೆಸಲಾಗಿದೆ. ಸದ್ಯ ಈ ನೂತನ ಮೆಟ್ರೋ ಮಾರ್ಗ ಯೋಜನೆ ಆರಂಭಿಸಲು ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ.
ಹೆಬ್ಬಾಳದಿಂದ ಕೋರಮಂಗಲ ವರೆಗೆ ಸುರಂಗ ಮಾರ್ಗದಲ್ಲೇ ರೈಲು ಓಡಾಲಿವೆ ಎನ್ನಲಾಗಿದೆ. ಕೋರಮಂಗಲದಿಂದ ಎತ್ತರಿಸಿದ ಮಾರ್ಗದಲ್ಲಿ ಸರ್ಜಾಪುರ ವರೆಗೆ ಮೆಟ್ರೋ ಸಂಚಾರ ಸೇವೆ ನೀಡಲಿದೆ. ಈ ಬಗ್ಗೆ ಉಲ್ಲೇಖಿಸಲಾಗಿದೆ. ಡಿಪಿಆರ್ ಸಿದ್ಧವಾಗಿ ಅದು ಕೈ ಸಿಕ್ಕ ಮೇಲೆ ಅದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಪ್ಪಿ ಅನುಮೋದಿಸಬೇಕು. ಅದಾದ ಬಳಿಕವೇ ಕಾಮಗಾರಿ ಆರಂಭವಾಗಲಿದೆ.
ಎಲೆಕ್ಟ್ರಾನಿಕ್ ಸಿಟಿಗೆ ಹೊಸ ಮೆಟ್ರೋ ಮಾರ್ಗ ಯೋಜನೆ
ಬೆಂಗಳೂರು 'ನಮ್ಮ ಮೆಟ್ರೊ' ಎರಡನೇ ಹಂತದಲ್ಲಿ ಆರ್.ವಿ.ರಸ್ತೆ- ಬೊಮ್ಮಸಂದ್ರದವರೆಗೆ ಸಿವಿಲ್ ಕಾಮಗಾರಿ ಮೂರು ಹಂತಗಳಲ್ಲಿ ಪ್ರಗತಿಯಲ್ಲಿದೆ. ಕಾಮಗಾರಿ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಇದೇ ವರ್ಷ ಆಗಸ್ಟ್ ಹೊತ್ತಿಗೆ ಈ ಮಾರ್ಗದಲ್ಲಿ ರೈಲು ಓಡಾಟ ನಡೆಸಲು ಸರ್ಕಾರ ಚಿಂತನೆ ನಡೆಸಿದೆ.
ವೈಟ್‌ಫೀಲ್ಡ್ ಮಾರ್ಗದಲ್ಲಿ ರೈಲು ಸಂಚಾರ ಮೊನ್ನೆಯಷ್ಟೇ ಆರಂಭವಾಗಿದೆ. ಸದ್ಯ ಮತ್ತೊಂದು ಐಟಿ ಕಾರಿಡಾರ್ ಆಗಿರುವ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ ಗಮನ ಹರಿಸಿದೆ. ಅಂದುಕೊಂಡಂತೆ ಎಲ್ಲವೂ ಆದರೆ ಈ ಭಾಗದ ಜನರಿಗೂ ಮೆಟ್ರೋ ಸಂಚಾರ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
-
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Namma Metro: ಏರ್ಪೋರ್ಟ್ ಮೆಟ್ರೋ ನೀಲಿ ಮಾರ್ಗಕ್ಕೆ ಬರಲಿವೆ 2 ಡ್ರವರ್ಲೆಸ್ ರೈಲು -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ











Click it and Unblock the Notifications