Sabarimal Special Bus: ಭಕ್ತಾಧಿಗಳಿಗಾ ನ. 29ರಿಂದ ಬೆಂಗಳೂರು-ಶಬರಿಮಲೆಗೆ ವಿಶೇಷ ಬಸ್ ಸಂಚಾರ
ಬೆಂಗಳೂರು, ನವೆಂಬರ್ 28: ಪ್ರತಿ ವರ್ಷಾಂತ್ಯದ ಹೊತ್ತಿಗೆ ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು, ದರ್ಶನ ಭಾಗ್ಯ ಶುರುವಾಗುತ್ತದೆ. ಪ್ರಮುಖ ಧಾರ್ಮಿಕ ಕೈಂಕರ್ಯಗಳು ಜರುಗುವ ಈ ಧಾರ್ಮಿಕ ಸ್ಥಳಕ್ಕೆ ಬೆಂಗಳೂರಿನಿಂದಲೇ ಸಾವಿರಾರು ಜನರು ತೆರಳುತ್ತಾರೆ. ಕೇವಲ ಮಾಲಾಧಾರಿಗಳು ಮಾತ್ರವಲ್ಲದೇ ಸಾಮಾನ್ಯ ಭಕ್ತರು ಈ ಸಮಯದಲ್ಲಿ ತೆರಳುವುದು ವಾಡಿಕೆ. ಅವರೆಲ್ಲರಿಗೂ ಅನುಕೂಲವಾಗುವಂತೆ ರಾಜ್ಯ ರಾಜಧಾನಿ ಬೆಂಗಳೂರಿನಿಂದ KSRTC ವಿಶೇಷ ಬಸ್ ಸೇವೆ ಆರಂಭವಾಗುತ್ತಿದೆ.
ಹೌದು, ಬೆಂಗಳೂರಿನಿಂದ ಕೇರಳದ ಶಬರಿಮಲೆಗೆ (ಪಂಪಾ) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಇದೇ ನವೆಂಬರ್ 29ರಿಂದ ವಿಶೇಷ ವೋಲ್ವೋ ಮಲ್ಟಿ ಎಕ್ಸೆಲ್ ಬಸ್ ಸೇವೆ ಆರಂಭಿಸಿತ್ತು. ನೀವು ಬೆಂಗಳೂರಿನಲ್ಲಿದ್ದುಕೊಂಡು ಶಬರಿಮಲೆಗೆ ಹೋಗುವುದು ಹೇಗೆ ಎಂಬ ಆಲೋಚನೆ ಹೊಂದಿದ್ದರೆ ನೀವು ಈ ಬಸ್ ಸೇವೆಯನ್ನು ಸದುಪಯೋಗ ಮಾಡಿಕೊಳ್ಳಬಹುದಾಗಿದೆ.

ಶಬರಿಮಲೆ ದೇಗುಲದಲ್ಲಿ ಕಳೆದ ವಾರವೇ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕೇರಳ ರಾಜ್ಯದಿಂದ ಮಾತ್ರವಲ್ಲದೇ, ಕರ್ನಾಟಕದಿಂದಲೂ ಈಗಾಗಲೇ ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ಬೆಂಗಳೂರಿನಿಂದಲೂ ತೆರಳು ಭಕ್ತಾಧಿಗಳಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶದಿಂದ KSRTC ಸೇವೆ ಆರಂಭಿಸಿದೆ. ಹಾಗಾದರೆ, ಪ್ರಯಾಣ ದರ, ಸಮಯ, ನಿಲ್ದಾಣಗಳ ಮಾಹಿತಿ ಇಲ್ಲಿದೆ.
ನವೆಂಬರ್ 29ರಿಂದ ಬಸ್ ಸೇವೆ: ಎಲ್ಲಿಂದ ಸಂಚಾರ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಇತ್ತೀಚೆಗೆ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ನವೆಂಬರ್ 29ರಿಂದ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಪ್ರತಿನಿತ್ಯ ಬಸ್ ಸೇವೆ ಸಿಗಲಿದೆ. ನಿತ್ಯ ಮಧ್ಯಾಹ್ನ 1.50 ಕ್ಕೆ ಬಸ್ ಹೊರಡಲಿವೆ. ಮರು ದಿನ ಬೆಳಗ್ಗೆ 6.45ಕ್ಕೆ ಅಲ್ಲಿಗೆ ತಲುಪಲಿವೆ ಎಂದು ಸಾರಿಗೆ ನಿಮಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಿಂದ ನೇರವಾಗಿ ಪಂಪಾ ಮತ್ತು ನಿಲಕ್ಕಲ್ ಗೆ ಈ ಬಸ್ ತಲುಪಲಿದೆ. ಅದೇ ದಿನ ಸಂಜೆ 6 ಗಂಟೆಗೆ ಶಬರಿಮಲೆನ ನಿಗದಿತ ಸ್ಥಳದಿಂದ ಪ್ರಯಾಣ ಆರಂಭಿಸಿ ಮರುದಿನ ಬೆಳಗ್ಗೆ 10 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ. ಭಕ್ತಾಧಿಗಳು ಈ ಮಾಹಿತಿ ಆಧರಿಸಿ ಪ್ಲಾನ್ ಮಾಡಿಕೊಳ್ಳಬೇಕಿದೆ.
ಇನ್ನೂ ಪ್ರಯಾಣ (ಟಿಕೆಟ್) ದರ ನೋಡುವುದಾರೆ, ಒಂದು ಕಡೆಯ ಸಂಚಾರಕ್ಕೆ 1750 ರೂಪಾಯಿ ನಿಗದಿಪಡಿಸಲಾಗಿದೆ. ನೀವು ಬೇಕಾದರೆ ಎರಡು ಕಡೆಗಿನ ಟಿಕೆಟ್ ಅನ್ನು ಮೊದಲೇ ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಸಹಾಯದಿಂದ ಆನ್‌ಲೈನ್ ಮೂಲಕ ಪ್ರಿ ಬುಕ್ಕಿಂಗ್ ಮಾಡಿಕೊಳ್ಳಲು ಸಹ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ.
ಮೊದಲೇ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಿ
ಬೆಂಗಳೂರಿನಿಂದ ಶಬರಿಮಲೆಗೆ ತೆರಳುವ ಸಾರ್ವಜನಿಕರು ಈ https://ksrtc.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಸನ ಕಾಯ್ದಿರಿಸಬಹುದಾಗಿದೆ. ಒಬ್ಬರೇ, ಇಲ್ಲವೇ ಗುಂಪಿನ ಜೊತೆಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುವವರಿಗೆ ಈ ವಿಶೇಷ ಬಸ್ ಸೇವೆ ಅನುಕೂಲವಾಗಿದೆ.
ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ, ಜ್ಯೋತಿ ದರ್ಶನಕ್ಕೆಂದು ಜನವರಿ ಸಂಕ್ರಾಂತಿವರೆಗೂ ಈ ಬಸ್ ಸೇವೆ ಮುಂದುವರಿಯುವ ನಿರೀಕ್ಷೆ ಇದೆ.












Click it and Unblock the Notifications