ರಾಮದಾಸ್ ಬಗ್ಗೆ ಏರ್ ಪೋರ್ಟ್ ಗಳಲ್ಲಿ ಅಲರ್ಟ್

ಬೆಂಗಳೂರು, ಫೆ.16 : ಆತ್ಮಹತ್ಯೆ ಪ್ರಕರಣದ ನಂತರ ಮಾಜಿ ಸಚಿವ ಎಸ್.ಎ.ರಾಮದಾಸ್ ವಿದೇಶಕ್ಕೆ ಹಾರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಇದನ್ನು ತಡೆಯಲು ಸಜ್ಜಾಗಿರುವ ಮೈಸೂರು ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ರಾಮ್‌ದಾಸ್‌ ಅವರು ವಿದೇಶ ಪ್ರವಾಸಕ್ಕಾಗಿ ಆಗಮಿಸಿದರೆ ಮಾಹಿತಿ ನೀಡುವಂತೆ ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೆ ಪೊಲೀಸರು ಸೂಚನೆ ನೀಡಿದ್ದಾರೆ.

ಮೈಸೂರಿನ ಬಿಜಿಎಸ್ ಅಪೊಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಎಸ್.ಎ.ರಾಮದಾಸ್, ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅಲ್ಲಿಂದ ಅವರು, ಸಿಂಗಾಪುರಕ್ಕೆ ತೆರಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ರಾಮದಾಸ್‌ ವಿರುದ್ಧ ಆತ್ಮಹತ್ಯೆ ಯತ್ನ ಮತ್ತು ಮಹಿಳೆಗೆ ವಂಚನೆ ಮಾಡಿದ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ದಾಲಾದ ವ್ಯಕ್ತಿ ವಿದೇಶದಕ್ಕೆ ತೆರಳುವಂತಿಲ್ಲ. ಆದ್ದರಿಂದ ಪೊಲೀಸರು ರಾಮದಾಸ್ ವಿದೇಶ ಪ್ರವಾಸಕ್ಕೆ ಬ್ರೇಕ್ ಹಾಕಲು ಸಜ್ಜಾಗಿದ್ದಾರೆ. [ರಾಮದಾಸ್ ಆತ್ಮಹತ್ಯೆಗೆ ಯತ್ನ]

SA Ramdas

ಪ್ರೇಮ ಕುಮಾರಿ ಅವರನ್ನು ವಿವಾಹವಾಗುವುದಾಗಿ ವಂಚಿಸಿದ್ದಾರೆಂಬ ಆರೋಪ ಮಾಜಿ ಸಚಿವ ರಾಮದಾಸ್‌ ಅವರ ಮೇಲಿದೆ. ಆದ್ದರಿಂದ ಪೊಲೀಸರು ಅವರ ವಿಚಾರಣೆ ನಡೆಸಲಿದ್ದಾರೆ. ಹಾಗಾಗಿ, ರಾಮ್‌ದಾಸ್‌ ಅವರು ವಿದೇಶ ಪ್ರವಾಸಕ್ಕಾಗಿ ಆಗಮಿಸಿದರೆ ಮಾಹಿತಿ ನೀಡುವಂತೆ ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಗೆ ಪೊಲೀಸರು ಸೂಚನೆ ನೀಡಿದ್ದಾರೆ. [ರಾಮದಾಸ್ ಸಂಕ್ಷಿಪ್ತ ಪರಿಚಯ]

ಎರಡು ಪ್ರಕರಣಗಳಲ್ಲಿ ರಾಮದಾಸ್ ಆರೋಪಿಯಾಗಿದ್ದಾರೆ. ಅವರು ವಿದೇಶಕ್ಕೆ ತೆರಳಲಿದ್ದಾರೆ ಎಂಬ ಬಗ್ಗೆ ಖಚಿತವಾದ ಮಾಹಿತಿ ಇಲ್ಲ. ಆದರೂ ದೇಶದ ಎಲ್ಲ ವಿಮಾನ ನಿಲ್ದಾಣಗಳಿಗೆ ಸೂಚನೆ ಕೊಟ್ಟಿದ್ದು, ಒಂದು ವೇಳೆ ಅವರು ಪ್ರವಾಸಕ್ಕೆ ಮುಂದಾದರೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಮೈಸೂರು ನಗರ ಪೊಲೀಸ್‌ ಆಯುಕ್ತ ಡಾ.ಎಂ.ಎ.ಸಲೀಂ ಹೇಳಿದ್ದಾರೆ.

ಆತ್ಮಹತ್ಯಗೆ ಯತ್ನಿಸಿದ್ದ ರಾಮದಾಸ್‌ ವಿರುದ್ಧ ಕುವೆಂಪು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರೇಮಕುಮಾರಿ ಅವರು ರಾಮದಾಸ್ ವಿರುದ್ಧ ಮಾಡಿರುವ ಆರೋಪಗಳ ಕುರಿತು ಸರಸ್ವತೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಆರೋಪಿ ಎನಿಸಿದ್ದು, ಸೂಕ್ತ ಅನುಮತಿ ಇಲ್ಲದೆ ವಿದೇಶಕ್ಕೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ವಿದೇಶ ಪ್ರವಾಸ ವದಂತಿ ಹಿನ್ನೆಲೆಯಲ್ಲಿ, ವಿಮಾನ ನಿಲ್ದಾಣಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.

ಪ್ರೇಮಕುಮಾರಿ ವಿರುದ್ಧ ದೂರು ದಾಖಲು : ರಾಮದಾಸ್ ವಿರುದ್ಧ ವಂಚನೆ ಆರೋಪ ಹೊರಿಸಿರುವ ಪ್ರೇಮಕುಮಾರಿ ವಿರುದ್ಧ ರಾಮದಾಸ್ ದೂರು ಸಲ್ಲಿಸಿದ್ದಾರೆ. ತಮ್ಮನ್ನು ಬೆದರಿಸಿ ಹಣ ಕೀಳಲು ಪ್ರೇಮಕುಮಾರಿ ಬ್ಲಾಕ್‌ವೆುಲ್ ಮಾಡಿದ್ದಾರೆ. ಇದಕ್ಕೆ ಮಣಿಯದಿದ್ದಾಗ ಆಕೆ ಮತ್ತು ಆಕೆ ಸಂಬಂಧಿಕರು ತಮ್ಮ ಹೆಸರು ದುರ್ಬಳಕೆ ಮಾಡಿಕೊಂಡು ಅಪಪ್ರಚಾರ ನಡೆಸಿದ್ದಾರೆ ರಾಮದಾಸ್ ಕುವೆಂಪು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+