ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, 1 ವರ್ಷ ಬಂದ್, ಇಲ್ಲಿದೆ ಕಾರಣ

|
Google Oneindia Kannada News

ಬೆಂಗಳೂರು, ಜೂನ್ 23: ಒಂದು ವರ್ಷಗಳ ಕಾಲ ರಾಷ್ಟ್ರೀಯ ವಿದ್ಯಾಲಯ ರಸ್ತೆ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗುತ್ತಿದೆ.

ಆರ್‌ವಿ ರಸ್ತೆ ನಿಲ್ದಾಣದಲ್ಲಿ ಹಳದಿ ಮಾರ್ಗದ ಮೆಟ್ರೋ ಯೋಜನೆ ಕಾರ್ಯ ಆರಂಭವಾಗಿರುವ ಹಿನ್ನೆಲೆಯಲ್ಲಿ ನಾಗಸಂದ್ರ-ಯಲಚೇನಹಳ್ಳಿ ಹಸಿರು ಮಾರ್ಗದಲ್ಲಿ ಬರುವ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗುತ್ತಿದೆ.

ಮೆಟ್ರೋ ಹತ್ಬೇಕಾ ಹಾಗಾದರೆ ನಿಮ್ಮ ಸ್ಮಾರ್ಟ್‌ಕಾರ್ಡ್‌ನಲ್ಲಿ 50ರೂ ಇರ್ಲೇಬೇಕು ಮೆಟ್ರೋ ಹತ್ಬೇಕಾ ಹಾಗಾದರೆ ನಿಮ್ಮ ಸ್ಮಾರ್ಟ್‌ಕಾರ್ಡ್‌ನಲ್ಲಿ 50ರೂ ಇರ್ಲೇಬೇಕು

ಆರ್‌ವಿ ರಸ್ತೆ ನಿಲ್ದಾಣದಲ್ಲಿ ಇಂಟರ್‌ಚೇಂಜ್ ನಿಲ್ದಾಣದ ಕಾಮಗಾರಿ ನಡೆಯುವ ಕಾರಣ ಈಗಿರುವ ಮೆಟ್ರೋ ನಿಲ್ದಾಣವನ್ನು ಅರ್ಧ ಕೆಡವಿ ಹೊಸದಾಗಿ ನಿಲ್ದಾಣ ನಿರ್ಮಿಸಬೇಕಿದೆ.

RV Road metro station may shut for nearly one year

ಪ್ರತಿನಿತ್ಯವೂ 5 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಈ ಮೆಟ್ರೋ ನಿಲ್ದಾಣದ ಮೂಲಕ ಸಂಚರಿಸುತ್ತಿದ್ದರು. ಹಸಿರು ಮಾರ್ಗ 2017ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ ಬಂದ್ ಆಗುವುದರಿಂದ ಪ್ರಯಾಣಿಕರು ಜಯನಗರ ಅಥವಾ ಬನಶಂಕರಿ ಮೆಟ್ರೋ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮೆಟ್ರೋ ಹತ್ತಬೇಕಿದೆ.

ಬಿಎಂಆರ್‌ಸಿಎಲ್ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ತೆರಳುವ ನಿಲ್ದಾಣದಲ್ಲಿ ಈಗಿರುವ ನಿಲ್ದಾಣವನ್ನೇ ವಿಸ್ತರಿಸಲು ಮುಂದಾಗಿದೆ. ಅದರೊಂದಿಗೆ ವೆಚ್ಚ ಕೂಡ ಕಡಿಮೆಯಾಗಲಿದೆ. ಕಾಮಗಾರಿಯೂ ಬೇಗ ಮುಗಿಯಲಿದೆ.ಆರ್‌ವಿ ರಸ್ತೆಯಿಂದ ಸಿಲ್ಕ್‌ ಬೋರ್ಡ್‌ ಹಳದಿ ಮಾರ್ಗ 2021ಕ್ಕೆ ಮುಕ್ತಾಯಗೊಳ್ಳಲಿದೆ.

English summary
RV Road metro station may shut for nearly one year, BMRCL is mulling shutting down the existing RV Road Metro station for a year to begin work on interchange station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X