ನಮ್ಮ ಮೆಟ್ರೋ ಕಾರ್ಯಾಚರಣೆ ಮೊದಲೇ 230 ಕೋಟಿ ರೂ. ಆದಾಯ ಸಂಗ್ರಹ
ಬೆಂಗಳೂರು, ಡಿಸೆಂಬರ್ 13: ಬೆಂಗಳೂರು ನಾಗರಿಕರಿಗೆ ಉತ್ತಮ ಸಾರಿಗೆ ನೀಡುತ್ತಿರುವ ನಮ್ಮ ಮೆಟ್ರೋ ಹೊಸ ಹೊಸ ಮಾರ್ಗಗಳನ್ನು ನಿರ್ಮಿಸುತ್ತಿದೆ. ಹಾಲಿ ಮಾರ್ಗ ವಿಸ್ತರಣೆ ಮಾಡುತ್ತಿದೆ. ಹೀಗೆ ಹೊಸ ಮಾರ್ಗ ನಿರ್ಮಿಸಿರುವ BMRCL ಅದರಲ್ಲಿ ರೈಲು ಕಾರ್ಯಾಚರಣೆ ಆರಂಭಿಸುವ ಮುನ್ನವೇ ಅತ್ಯಧಿಕ ಆದಾಯ ಸಂಗ್ರಹ ಮಾಡಿದೆ. ರೈಲು ಓಡುವ ಮೊದಲೇ ಮೆಟ್ರೋ ಆದಾಯ ಹೆಚ್ಚಾಗಿದೆ.
ಹೌದು, ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆ ಇನ್ನಷ್ಟು ಶುರುವಾಗಬೇಕಿದೆ. ಆರ್.ವಿ.ರಸ್ತೆ-ಬೊಮ್ಮಸಂದ್ರ ವರೆಗಿನ 19.5.ಕಿಲೋ ಮೀಟರ್ ಉದ್ದದ ಹಳದಿ ಮಾರ್ಗದಲ್ಲಿ ಕೆಲಸವೆಲ್ಲ ಪೂರ್ಣಗೊಂಡಿದ್ದು, ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ (CMRS) ವಾಣಿಜ್ಯ ಕಾಯಾಚರಣೆಗೆ ಅನುಮತಿ ಸಹ ಪಡೆದಿದೆ. ಆದರೆ ಯಾವಾಗ ಶುರುವಾಗಲಿದೆ ಎಂದು ಐಟಿ ಉದ್ಯೋಗಿಗಳು ಸೇರಿದಂತೆ ಲಕ್ಷಾಂತರ ಪ್ರಯಾಣಿಕರು ಕಾಯುತ್ತಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಪ್ರಮುಖ ಮೆಟ್ರೋ ಹಳದಿ ಮಾರ್ಗದಿಂದ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಬರೋಬ್ಬರಿ 230 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ವಿವಿಧ ಮೆಟ್ರೋ ನಿಲ್ದಾಣಗಳಿಗೆ ಐಟಿ ಸೇರಿದಂತೆ ಇನ್ನಿತರ ಕಂಪನಿಗಳ ಹೆಸರುಗಳನ್ನು ಇಡಲು ಮಾಡಿಕೊಂಡ ಒಪ್ಪಂದದಿಂದಾಗಿ ಇಷ್ಟು ಪ್ರಮಾಣದಲ್ಲಿ ಆದಾಯವು ನಿಗಮಕ್ಕೆ ಹರಿದು ಬಂದಿದೆ.
ಕೋಟಿ ಕೋಟಿ ರೂಪಾಯಿಯ ಒಪ್ಪಂದ
ಈ ಮಾರ್ಗದ ಮೂರು ಮೆಟ್ರೋ ನಿಲ್ದಾಣಗಳಾದ ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ, ಹೆಬ್ಬಗೋಡಿ ಮೆಟ್ರೋ ನಿಲ್ದಾಣ ಮತ್ತು ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಿಗೆ ಐಟಿ ಬಿಟಿ ಹೆಸರಿಡಲು ಕೋಟಿ ಕೋಟಿ ಹಣದ ಒಪ್ಪಂದ ವಾಗಿದೆ.
ಒಪ್ಪಂದಗಳ ಪ್ರಕಾರ, ಇನ್ಪೋಸಿಸ್ ಕೋನಪ್ಪನ ಅಗ್ರಹಾರ ಮೆಟ್ರೋ, ಬಯೋಕಾನ್ ಹೆಬ್ಬಗೋಡಿ ಮೆಟ್ರೋ ನಿಲ್ದಾಣ ಹಾಗೂ ಡೆಲ್ಟ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣವೆಂದು ಹೆಸರಿಡಲು ಈಗಾಗಲೇ ಈ ಕಂಪನಿಗಳು BMRCL ಜೊತೆಗೆ ಮುಂದಿನ 20-30 ವರ್ಷಗಳ ಕಾಲ ಧೀರ್ಘಾವಧಿಯ ಒಪ್ಪಂದ ಮಾಡಿಕೊಂಡಿವೆ.
ಒಪ್ಪಂದಂತೆ BMRCLಗೆ ಇನ್ಫೋಸಿಸ್ 65 ಕೋಟಿ ರೂಪಾಯಿ, ಥೈವಾನ್ ಮೂಲದ ಡೆಲ್ಟಾ ಎಲೆಕ್ಟ್ರಾನಿಕ್ ಕಂಪನಿಯಿಂದ 65 ಕೋಟಿ ರೂಪಾಯಿ, ಬಯೋಕಾನ್‌ನಿಂದ 65 ಕೋಟಿ ರೂ. ಒಪ್ಪಂದ ವಾಗಿದೆ. ಕೆಲವು ಕಂಪನಿ ಪೂರ್ಣ ಹಣ ನೀಡಿದರೆ, ಕೆಲವರು ಮುಂಗಡ ನೀಡಿದ್ದಾರೆ.
ಸ್ಕೈವಾಕ್‌ಗಾಗಿ 25.ಕೋಟಿ ರೂ. ಒಪ್ಪಂದ
ಇನ್ನೂ ಇನ್ಫೋಸಿಸ್ ಕಂಪನಿಯಿಂದ ಮೆಟ್ರೋ ಮಾರ್ಗಕ್ಕೆ ತೆರಳಲು ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಸ್ಕೈವಾಕ್ ನಿರ್ಮಿಸಲು 25.ಕೋಟಿ ರೂ ಹಾಗೂ ಜಾಹೀರಾತಿಗಾಗಿ 10 ಕೋಟಿ ರೂ.ನ ಒಪ್ಪಂದ ಮಾಡಿಕೊಂಡಿದೆ ಎಂದು BMRCL ಅಧಿಕೃತ ಮಾಹಿತಿ ನೀಡಿದೆ.
ಜನವರಿ ಅಂತ್ಯಕ್ಕೆ ಮಾರ್ಗ ಓಪನ್ ಡೌಟು!
ಈ ಮೇಲಿನ ಎಲ್ಲ ಒಪ್ಪಂದಗಳಿಂದ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ವಾಣಿಜ್ಯ ಕಾರ್ಯಾಚರಣೆ ಆರಂಭಕ್ಕೂ ಮೊದಲೇ ಕೋಟಿ ಕೋಟಿ ಆದಾಯ ಗಳಿಕೆ ಮಾಡಿದೆ. ಇದೇ ಡಿಸೆಂಬರ್‌ಗೆ ಸಾರ್ವಜನಿಕರಿಗೆ ಮುಕ್ತಗೊಳ್ಳಬೇಕಿದ್ದ ಈ ಮಾರ್ಗವು ಜನವರಿ ಅಂತ್ಯಕ್ಕೆ ಮುಂದೂಡಲಾಗಿದೆ. ಅಗತ್ಯ ರೈಲು ಸೆಟ್‌ಗಳು ಬೆಂಗಳೂರಿಗೆ ಬರುವುದು ವಿಳಂಬವಾದರೆ ಈ ಮಾರ್ಗದ ಕಾರ್ಯಾಚರಣೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.












Click it and Unblock the Notifications