ಬೆಂಗಳೂರು ಪೊಲೀಸ್ ಆಯುಕ್ತರಿಗೆ ದರ್ಶನ್ ಭೇಟಿ ಮಾಡುವಾಸೆ!
ಬೆಂಗಳೂರು, ಸೆಪ್ಟೆಂಬರ್ 09 : ಬೆಂಗಳೂರು ಪೊಲೀಸ್ ಆಯುಕ್ತರಿಗೆ ಖಾಕಿ ತೊಡಲು ಸ್ಫೂರ್ತಿಯಾಗಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಒಮ್ಮೆ ದರ್ಶನ್ ಭೇಟಿ ಮಾಡಬೇಕು ಎಂಬುದು ಅವರ ಆಸೆ.
ಈತ 8 ವರ್ಷದ ರುತನ್ ಕುಮಾರ್. ಖಾಕಿ ತೊಡಬೇಕು ಎಂಬುದು ಈತನ ಆಸೆ. ಬೆಂಗಳೂರು ಪೊಲೀಸ್ ಆಯುಕ್ತರಾದ ಸೋಮವಾರ ಕೆಲಕಾಲ ಕಾರ್ಯ ನಿರ್ವಹಿಸಿದ್ದಾನೆ. ಆದರೆ, ಇತನ ಇನ್ನೊಂದು ಆಸೆ ಇನ್ನೂ ಈಡೇರಿಲ್ಲ.
ಹಾಸನ ಮೂಲದ ರುತನ್ ಕುಮಾರ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಒಂದು ಕಿಡ್ನಿ ವಿಫಲವಾಗಿದೆ. ಇನ್ನೊಂದು ಕಿಡ್ನಿ ಶೇ 30ರಷ್ಟು ಮಾತ್ರ ಕೆಲಸ ಮಾಡುತ್ತಿದೆ. ವೈದ್ಯರು ರುತನ್ ಕುಮಾರ್ ಬದುಕಿನ ಬಗ್ಗೆ ಯಾವುದೇ ಭರವಸೆ ಕೊಟ್ಟಿಲ್ಲ.

ಸಿನಿಮಾದಲ್ಲಿ ತೋರಿಸುವಂತೆ ತಾನು ಸಹ ಪೊಲೀಸ್ ಅಧಿಕಾರಿಯಾಗಿ ಉತ್ತಮ ಸಮಾಜ ರೂಪಿಸುವ ಕನಸು ರುತನ್ ಕಣ್ಣಲ್ಲಿತ್ತು. ಆದರೆ, ವಿಧಿಲಿಖಿತ ಬೇರೆಯಾಗಿತ್ತು.
Recommended Video

ರುತನ್ ಖಾಕಿ ತೊಡಬೇಕು ಎಂಬ ಆಸೆಯನ್ನು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರರಾವ್ ನನಸಾಗಿಸಿದ್ದಾರೆ. ಸೋಮವಾರ ಆಯುಕ್ತರ ಕಚೇರಿಯಲ್ಲಿ ಸಕಲ ಗೌರವದೊಂದಿಗೆ ರುತನ್ ಕಾರ್ಯ ನಿರ್ವಹಿಸಿದ್ದಾನೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ರುತನ್‌ಗೆ ಪಂಚಪ್ರಾಣ. ತಾನು ಪೊಲೀಸ್ ಆಗಬೇಕು ಎಂದು ಆತ ಸ್ಫೂರ್ತಿ ಪಡೆದಿದ್ದೇ ದರ್ಶನ್‌ರಿಂದ. ಖಾಕಿ ತೊಟ್ಟಾಗಿದೆ ಇನ್ನು ನೆಚ್ಚಿನ ನಟನನ್ನು ಭೇಟಿಯಾಗಿ ಕೈ ಕುಲುಕುವ ಆಸೆ ಇನ್ನೂ ಜೀವಂತವಾಗಿದೆ.












Click it and Unblock the Notifications