ಬೆಂಗಳೂರು: ಬಿಜೆಪಿ ಮುಖಂಡನ ವಿರುದ್ಧ ಆರ್.ಟಿ.ಐ ಕಾರ್ಯಕರ್ತ ದೂರು
ಬೆಂಗಳೂರು, ಡಿಸೆಂಬರ್ 08 : ಬಿಜೆಪಿಯ ಪ್ರಭಾವಿ ಮುಖಂಡರೊಬ್ಬರು ತಮಗೆ ಪರೋಕ್ಷವಾಗಿ ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಗರದ ಆರ್.ಟಿ.ಐ ಕಾರ್ಯಕರ್ತ ಹನುಮೇಗೌಡ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಿಜೆಪಿ ಮುಖಂಡ ಎಂ.ಎಲ್.ಸಿ ಬಿಜೆ ಪುಟ್ಟಸ್ವಾಮಿ ಅವರು ತಮ್ಮ ಮೇಲೆ ಹಾಕಿರುವ ಕೇಸ್ ಅನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸಿ ತಮ್ಮ ವಕೀಲರಿಂದ ಬೆದರಿಕೆ ಕರೆ ಮಾಡಿಸಿದ್ದಾರೆ ಎಂದು ಹನುಮೇಗೌಡ ಆರೋಪಿಸಿದ್ದಾರೆ.

ಭೂ ಕಬಳಿಕೆ ಬಗ್ಗೆ ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ರೂ ಆಗಿರುವ ಪುಟ್ಟಸ್ವಾಮಿ ಅವರ ವಿರುದ್ಧ ಹನುಮೇಗೌಡ ಅವರು ಕೇಸು ದಾಖಲಿಸಿದ್ದರು, ಆ ಕೇಸನ್ನು ವಾಪಸ್ಸು ಪಡೆಯುವಂತೆ ಪುಟ್ಟಸ್ವಾಮಿ ಅವರ ವಕೀಲರು ಹನುಮೇಗೌಡ ಅವರಿಗೆ ಕರೆ ಮಾಡಿ ಕೇಸು ವಾಪಾಸು ಪಡೆಯಬೇಕೆಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಹನುಮೇಗೌಡ ಅವರು ದೂರು ದಾಖಲಿಸಿದ್ದಾರೆ.












Click it and Unblock the Notifications