ಆರ್‌ಆರ್ ನಗರ ಚುನಾವಣೆ ರದ್ದಾದರೂ ಕರ್ತವ್ಯಕ್ಕೆ ಬಂದ ಸಿಬ್ಬಂದಿ
ಬೆಂಗಳೂರು, ಮೇ 12: ಅಕ್ರಮ ಚುನಾವಣೆ ಆರೋಪದ ಹಿನ್ನೆಲೆಯಲ್ಲಿ ಮತದಾನ ರದ್ದಾದರೂ ಸರಿಯಾದ ಮಾಹಿತಿ ಇಲ್ಲದೇ ಹಲವಾರು ಭದ್ರತಾ ಸಿಬ್ಬಂದಿ ಕರ್ತವ್ಯ ಕ್ಕೆ ಹಾಜರಾಗಲು ಬಂದ ಘಟನೆ ನಡೆದಿದೆ.
ಅಕ್ರಮ ಚುನಾವಣೆ ಆರೋಪದ ಹಿನ್ನೆಲೆಯಲ್ಲಿ ಮತದಾನ ರದ್ದಾದರೂ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸರಿಯಾದ ಮಾಹಿತಿ ಇಲ್ಲದೇ ಹಲವಾರು ಭದ್ರತಾ ಸಿಬ್ಬಂದಿ ಕರ್ತವ್ಯ ಕ್ಕೆ ಹಾಜರಾಗಲು ಬಂದ ಘಟನೆ ನಡೆದಿದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಶನಿವಾರ ಆರಂಭಗೊಂಡಿದೆ. ನಗರದಲ್ಲಿ ಇರುವ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಜಯನಗರ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗಳು ಕಾರಣಾಂತರಗಳಿಂದ ಮೂಂದೂಡಲಾಗಿದೆ.

ಆದರೆ ಸಾರ್ವಜನಿಕರಿಗೆ ಈ ಕುರಿತು ಮಾಹಿತಿ ಇಲ್ಲದ ಪರಿಣಾಮ ಮತಗಟ್ಟೆಗೆ ಬಂದು ಹಿಂದಿರುಗಿ ಹೋಗಿದ್ದು ಸಾಮಾನ್ಯವಾಗಿತ್ತು. ಆದರೆ ಚುನಾವಣಾ ಸಿಬ್ಬಂದಿಗೇ ಈ ಕುರಿತು ಮಾಹಿತಿ ಇಲ್ಲದಿರುವುದು ಆಶ್ಚರ್ಯವೆನಿಸಿದೆ. ಚುನಾವಣೆಗೆ ನೇಮಕವಾದ ಸಿಬ್ಬಂದಿಗಳಿಗೆ ಮಾಹಿತಿಯೇ ಇರಲಿಲ್ಲ, ಸಿವಿಲ್ ಡಿಫೆನ್ಸ್ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲು ದೌಡಾಯಿಸಿದ್ದರು. ಮಲ್ಲತ್ತಹಳ್ಳಿಯಲ್ಲಿರುವ ಸರೋಜ ಮೆಮೊರಿಯಲ್ ಇಂಗ್ಲಿಷ್ ಶಾಲೆಯ ಬೂತ್‌ಗೆ ಕರ್ತವ್ಯ ನಿರ್ವಹಿಸಲು ಆಗಮಿಸಿದ್ದರು.












Click it and Unblock the Notifications