Get Updates
Get notified of breaking news, exclusive insights, and must-see stories!

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿ ದೇವಿಯ ಕೃಪೆಗೆ ಪಾತ್ರರಾಗುತ್ತಾರಾ ಕಾಂಗ್ರೆಸ್‌ನ ಕುಸುಮಾ?

ಬೆಂಗಳೂರು, ಮೇ. 01: ಬೆಂಗಳೂರಿನ ಅತಿದೊಡ್ಡ ಕ್ಷೇತ್ರಗಳಲ್ಲಿ ಒಂದಾಗಿರುವ ಆರ್‌ಆರ್‌ ನಗರ ಎಂದೂ ಕರೆಯಲ್ಪಡುವ ರಾಜರಾಜೇಶ್ವರಿ ನಗರ ಕ್ಷೇತ್ರವು ಈ ಬಾರಿ ಹಾಲಿ ಮತ್ತು ಮಾಜಿ ಕಾಂಗ್ರೆಸ್ ನಾಯಕರ ನಡುವಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಲಿದೆ. ಸುಮಾರು 400,000 ಮತದಾರರು ಮತ್ತು 14 ವಾರ್ಡ್‌ಗಳನ್ನು ಹೊಂದಿರುವ ಈ ಕ್ಷೇತ್ರ ರಾಜಧಾನಿಯ ಪ್ರಮುಖ ಕ್ಷೇತ್ರಗಳಲ್ಲಿ ಒಂದು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇದು ಪ್ರಮುಖ ಕ್ಷೇತ್ರವಾಗಿದ್ದು, ಕ್ಷೇತ್ರದಿಂದ ಮೂರು ಬಾರಿ ಗೆದ್ದಿರುವ ಪ್ರಸ್ತುತ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿ ಮುನಿರತ್ನ ಮತ್ತೆ ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕಲೆದ ಬಾರಿ ಮುನಿರತ್ನ ಎದುರು ಸೋಲು ಕಂಡಿರುವ ಕಾಂಗ್ರೆಸ್‌ನ ಕುಸುಮಾ ಹೆಚ್‌ ಈ ಬಾರಿ ಕೂಡ ಅವರಿಗೆ ಎದುರಾಳಿಯಾಗಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ.

RR Nagar constituency to see tough fight between Congress’s Kusuma H and BJPs Munirathna

ಆರ್‌ಆರ್‌ ನಗರದಲ್ಲಿ ಜೆಡಿಎಸ್ ನಾರಾಯಣಸ್ವಾಮಿ ಅವರನ್ನು ಕಣಕ್ಕಿಳಿಸಿದ್ದು, ಆಪ್‌ನಿಂದ ಅನಂತ ಸುಭಾಷ್‌ಚಂದ್ರ ಸ್ಪರ್ಧಿಸಿದ್ದಾರೆ. ಬೇರೆ ಅಭ್ಯರ್ಥಿಗಳು ಇದ್ದರೂ ಕೂಡ ಇಲ್ಲಿ ಪೈಪೋಟಿಯಿರುವುದು ಮಾತ್ರ ಮುನಿರತ್ನ ಮತ್ತು ಕುಸುಮಾ ನಡುವೆ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮುನಿರತ್ನ ಅವರು ತೋಟಗಾರಿಕಾ ಸಚಿವರಾಗಿದ್ದು, ಚಲನಚಿತ್ರ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ.

2013 ರಲ್ಲಿ ಮತ್ತು 2018 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಇವರು 2019 ರಲ್ಲಿ ಬಿಜೆಪಿ ತೆಕ್ಕೆಗೆ ಜಾರಿದ್ದಾರೆ. 018 ರಲ್ಲಿ, ಮುನಿರತ್ನ ಅವರು ಮತದಾರರ ಗುರುತಿನ ಚೀಟಿ ಅಕ್ರಮಗಳ ಆರೋಪ ಹೊರಿಸಿದ್ದರು. ಚುನಾವಣಾ ಆಯೋಗವು ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿ ಕ್ಷೇತ್ರದ ಜನರ 9,000 ಮತದಾರರ ಗುರುತಿನ ಚೀಟಿಗಳನ್ನು ವಶಪಡಿಸಿಕೊಂಡಿದೆ. ಆಗ ಮುನಿರತ್ನ ಅವರು ಕಾಂಗ್ರೆಸ್‌ನಲ್ಲಿದ್ದರು ಮತ್ತು ಅವರು ಚುನಾವಣಾ ಅಕ್ರಮದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

RR Nagar constituency to see tough fight between Congress’s Kusuma H and BJPs Munirathna

ಆದರೆ, 2019 ರಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಹಾಯ ಮಾಡಲು ನಡೆಸಿದ ಆಪರೇಷನ್ ಕಮಲಕ್ಕೆ ಬಲಿಯಾದ ಜೆಡಿಎಸ್ ಮತ್ತು ಕಾಂಗ್ರೆಸ್‌ನ 17 ಶಾಸಕರಲ್ಲಿ ಮುನಿರತ್ನ ಕೂಡ ಒಬ್ಬರು. ಇಷ್ಟು ದಿನ ಅವರ ಮೇಲೆ ಚುನಾವಣಾ ಆಕ್ರಮದ ಆರೋಪ ಮಾಡಿದ್ದ ಬಿಜೆಪಿ ಆ ನಂತರ ಸುಮ್ಮನಾಯಿತು. 2020 ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ 58,000 ಮತಗಳ ದೊಡ್ಡ ಅಂತರದಲ್ಲಿ ಕುಸುಮಾ ವಿರುದ್ಧ ಮುನಿರತ್ನ ಗೆಲುವು ದಾಖಲಿಸಿದ್ದರು. 2018 ರ ವಿಧಾನಸಭಾ ಚುನಾವಣೆಯಲ್ಲಿ 28,000 ಮತಗಳ ಅಂತರದಿಂದ ಗೆದ್ದ ಅವರ ಹಿಂದಿನ ದಾಖಲೆಯನ್ನು ಅವರೇ ಮುರಿದಿದ್ದರು.

*ಮುನಿರತ್ನ ವಿರುದ್ಧ ಸಾಲು ಸಾಳು ಆರೋಪಗಳು*

ಆದರೆ, ಈ ಬಾರಿ ಮುನಿರ್ನ ವಿರುದ್ಧ ಕ್ಷೇತ್ರದಲ್ಲಿ ಸಾಲು ಸಾಲು ಆರೋಪಗಳು ಕೇಳಿಬರುತ್ತಿವೆ. ಗುತ್ತಿಗೆದಾರರಿಂದ ಲಂಚಕ್ಕೆ ಬೇಡಿಕೆ ಇಟ್ಟಿರುವುದು, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಮತದಾರರಿಗೆ ಸೀರೆ ಹಂಚಿರುವ ಆರೋಪ ಸೇರಿದಂತೆ ಹಲವು ವಿವಾದವನ್ನೂ ಎದುರಿಸಿದ್ದಾರೆ. ಈ ವರ್ಷದ ಏಪ್ರಿಲ್‌ನಲ್ಲಿ ಕ್ರಿಶ್ಚಿಯನ್ನರ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ಮುನಿರತ್ನ ಮೇಲೆ ಪ್ರಕರಣ ದಾಖಲಾಗಿತ್ತು.

RR Nagar constituency to see tough fight between Congress’s Kusuma H and BJPs Munirathna

*2020ರಿಂದ ಗೆಲುವಿಗೆ ಪಣ ತೊಟ್ಟಿರುವ ಕುಸುಮಾ*

ಮುನಿರತ್ನ ವಿರುದ್ಧ ಕಳೆದ ಉಪಚುನಾವಣೆಯಲ್ಲಿ ಉಂಟಾದ ಸೋಲಿಗೆ ಬದಲಾಗಿ ಈ ಬಾರಿ ಗೆಲುವು ದಾಖಳಿಸುವ ಹುಮ್ಮಸ್ಸಿನಲ್ಲಿರುವ ಕುಸುಮಾ ಹನುಮಂತರಾಯಪ್ಪ ಮತ್ತೆ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. 2020 ರಲ್ಲಿ ಮುನಿರತ್ನ ವಿರುದ್ಧ ಉಪಚುನಾವಣೆಯಲ್ಲಿ ಸೋತ ನಂತರ ಅಂದಿನಿಂದಲೇ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.

ಬೋಸ್ಟನ್‌ನ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಕುಸುಮಾ, ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ದಿವಂಗತ ಐಎಎಸ್ ಅಧಿಕಾರಿ ಡಿ ಕೆ ರವಿ ಅವರ ಪತ್ನಿ ಕುಸುಮಾ ಮತ್ತು ಆಕೆಯ ತಂದೆ ಹನುಮಂತರಾಯಪ್ಪ ಅವರು 2020 ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಮೊದಲು ಜೆಡಿ (ಎಸ್) ನಲ್ಲಿದ್ದರು.

RR Nagar constituency to see tough fight between Congress’s Kusuma H and BJPs Munirathna

ಆರ್‌ಆರ್ ನಗರ ಬೆಂಗಳೂರಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶಗಳಲ್ಲಿ ಒಂದಾಗಿದ್ದರೂ, ಕಿರಿದಾದ ರಸ್ತೆಗಳು ಮತ್ತು ದಟ್ಟಣೆಯ ಜಂಕ್ಷನ್‌ಗಳು ನಿವಾಸಿಗಳ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ. ಈ ಪ್ರದೇಶದ ಮೂಲಕ ಹಾದುಹೋಗುವ ಹೊರ ವರ್ತುಲ ರಸ್ತೆಯನ್ನು ಸಾವಿರಾರು ಪ್ರಯಾಣಿಕರು ಬಳಸುತ್ತಾರೆ. ಕಳೆದ ವರ್ಷ ಅತಿವೃಷ್ಟಿಯಿಂದ ಬೆಂಗಳೂರು ಸ್ತಬ್ಧಗೊಂಡಿದ್ದು, ಕ್ಷೇತ್ರದಲ್ಲಿ ಪ್ರವಾಹ ಉಂಟಾಗಿತ್ತು. ತಮ್ಮ ಕರೆಗಳಿಗೆ ಬಿಬಿಎಂಪಿ ಅಧಿಕಾರಿಗಳು ತುಂಬ ತಡವಾಗಿ ಸ್ಪಂದಿಸುತ್ತಿದ್ದಾರೆ ಎಂದು ನಿವಾಸಿಗಳು ದೂರಿದ್ದರ, ಜೊತೆಗೆ ಈ ಪ್ರದೇಶದಲ್ಲಿ ಸಣ್ಣ ಭೂಕುಸಿತವನ್ನೂ ಉಂಟುಮಾಡಿತ್ತು.

ಈ ವರ್ಷದ ಮಾರ್ಚ್‌ನಲ್ಲಿ, ರಾಜರಾಜೇಶ್ವರಿನಗರದ ಹೊಸಕೆರೆಹಳ್ಳಿ ಕೆರೆಯ ಮೂಲಕ ರಸ್ತೆ ನಿರ್ಮಿಸಿ ರಿಯಲ್ ಎಸ್ಟೇಟ್ ಯೋಜನೆಗೆ ಸರ್ಕಾರ ಸಹಾಯ ಮಾಡುತ್ತಿದೆ ಎಂಬ ವರದಿಗಳ ನಂತರ ಸ್ಥಳೀಯ ನಿವಾಸಿಗಳು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆದರೆ, ಬಿಬಿಎಂಪಿ ಅಧಿಕಾರಿಗಳು ಮತ್ತು ಮುನಿರತ್ನ ಅವರು ಕೆರೆಯೊಳಗೆ ಶಾಶ್ವತ ರಸ್ತೆ ನಿರ್ಮಿಸುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.

ಸದ್ಯ ಕ್ಷೇತ್ರದಲ್ಲಿ ಮೂರು ವರ್ಷಗಳಿಂದ ಕುಸುಮಾ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಹಲವು ಆರೋಪಗಳನ್ನು ಹೊತ್ತಿರುವ ಮುನುರತ್ನಗೆ ಇದು ಮಾರಕವಾಗಬಹುದು ಎನ್ನಲಾಗುತ್ತಿದೆ. 14 ವಾರ್ಡ್‌ಗಳನ್ನು ಹೊಂದಿರುವ ಆರ್‌ಆರ್ ನಗರವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುನಿರತ್ನ ಮತ್ತು ಕುಸುಮಾ ನಡುವಿನ ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಕೊನೆಗೆ ರಾಜರಾಜೇಶ್ವರಿಗೆ ಯಾರಿಗೆ ಒಲಿಯುತ್ತಾಳೋ ಕಾದು ನೊಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+