ಬ್ಯಾಂಕ್‌ನಲ್ಲಿ ರೌಡಿ ಬಬ್ಲಿ ಹತ್ಯೆ ಮಾಡಿದ್ದ ಹಂತಕರ ಕಾಲಿಗೆ ಗುಂಡೇಟು
ಬೆಂಗಳೂರು, ಜು. 21: ಬ್ಯಾಂಕ್‌ನೊಳಗೆ ನುಗ್ಗಿ ರೌಡಿ ಶೀಟರ್ ಬಬ್ಲಿಯನ್ನು ಕೊಲೆ ಮಾಡಿದ್ದ ಹಂತಕ ಆರೋಪಿಗಳ ಕಾಲಿಗೆ ಕೋರಮಂಗಲ ಪೊಲೀಸರು ಬುಲೆಟ್ ಇಳಿಸಿದ್ದಾರೆ. ಬೇಗೂರು ಕೆರೆ ಸಮೀಪ ಇಬ್ಬರು ಆರೋಪಿಗಳು ಇರುವ ಖಚಿತ ಮಾಹಿತಿ ಆಧರಿಸಿ ತೆರಳಿದ್ದ ಪೊಲೀಸರ ಮೇಲೆ ಹಂತಕ ಆರೋಪಿಗಳು ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪಿಎಸ್ಐ ಗೆ ಸಣ್ಣ ಗಾಯವಾಗಿದೆ. ಆತ್ಮರಕ್ಷಣೆಗಾಗಿ ಶೂಟ್ ಮಾಡಿದ್ದು, ಇಬ್ಬರ ಕಾಲುಗಳಿಗೆ ಪೆಟ್ಟಾಗಿ ಕುಸಿದು ಬಿದ್ದಿದ್ದಾರೆ.
ರವಿ ಹಾಗೂ ಪ್ರದೀಪ್ ಅಲಿಯಾಸ್ ಚೊಟ್ಟೆ ಗುಂಡೇಟು ತಿಂದು ಆಸ್ಪತ್ರಗೆ ದಾಖಲಾಗಿರುವ ಆರೋಪಿಗಳು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಆಡುಗೋಡಿ ರೌಡಿ ಶೀಟರ್ ಬಬ್ಲಿಯನ್ನು ಕೋರಮಂಗಲದ ಎಂಟನೇ ಬ್ಲಾಕ್ ನಲ್ಲಿರುವ ಬ್ಯಾಂಕ್‌ನೊಳಗೆ ನುಗ್ಗಿ ಹತ್ಯೆ ಮಾಡಿದ್ದರು. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಕೃತ್ಯ ನೋಡಿ ಬ್ಯಾಂಕ್ ಸಿಬ್ಬಂದಿ ಬೆಚ್ಚಿಬಿದ್ದಿದ್ದರು. ಬ್ಯಾಂಕ್‌ನಲ್ಲಿ ನಡೆದ ಹತ್ಯೆ ಬೆಂಗಳೂರು ಪೊಲೀಸರ ನಿದ್ದೆ ಗೆಡಿಸಿತ್ತು. ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ಆರೋಪಿಗಳ ಶೋಧ ಕಾರ್ಯ ಮಾಡಲಾಗುತ್ತಿತ್ತು.

Recommended Video
ಬೇಗೂರು ಲೇಕ್ ಸಮೀಪ ಬಬ್ಲಿ ಕೊಲೆ ಆರೋಪಿಗಳು ಇರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಕೋರಮಂಗಲ ಠಾಣೆ ಪಿಎಸ್ಐ ಸಿದ್ದಪ್ಪ ಹಾಗೂ ಸಿಬ್ಬಂದಿ ತೆರಳಿದ್ದರು. ಪ್ರದೀಪ್ ಮತ್ತು ರವಿ ಅವರನ್ನು ವಶಕ್ಕೆ ಪಡೆಯಲು ಯತ್ನಿಸಿದ ವೇಳೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ರವಿ ಮತ್ತು ಪ್ರದೀಪ್ ಕಾಲಿಗೆ ಗುಂಡು ಬಿದ್ದು ಕುಸಿದು ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ಪಿಎಸ್ಐ ಹಾಗೂ ಎಎಸ್ಐ ಸಹ ಚಿಕಿತ್ಸೆ ಪಡೆದಿದ್ದಾರೆ. ತಲೆ ಮರೆಸಿಕೊಂಡಿರುವ ಇತರೆ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.












Click it and Unblock the Notifications