ಬೆಂಗಳೂರು : ವಿಜಯನಗರದಲ್ಲಿ ದರೋಡೆ ಯತ್ನ

ಬೆಂಗಳೂರು, ಜೂ. 16 : ಹಾಡುಹಗಲೇ ಬೆಂಗಳೂರಿನ ವಿಜಯನಗರದಲ್ಲಿ ಫೈನಾನ್ಸ್ ದರೋಡೆಗೆ ಯತ್ನ ನಡೆದಿದೆ. ಸಾರ್ವಜನಿಕರು ಜೋರಾಗಿ ಕೂಗಿಕೊಂಡಿದ್ದರಿಂದ ದರೋಡೆಕೋರರು ಪರಾರಿಯಾಗಿದ್ದಾರೆ.

ಮಂಗಳವಾರ ಮಧ್ಯಾಹ್ನ 3.15ರ ಸುಮಾರಿಗೆ ಆರ್‌ಪಿಸಿ ಲೇಔಟ್‌ನಲ್ಲಿರುವ ಐಐಎಫ್‌ಎಲ್ ಫೈನಾನ್ಸ್‌ಗೆ ನುಗ್ಗಿದ ನಾಲ್ವರು ಗುಂಪು ಭದ್ರತಾ ಸಿಬ್ಬಂದಿಗೆ ಗನ್ ತೋರಿಸಿ ದರೋಡೆ ಮಾಡಲು ಯತ್ನಿಸಿದ್ದಾರೆ. [ಜೆಪಿ ನಗರದಲ್ಲಿ ಹಾಡುಹಗಲೇ 5 ಲಕ್ಷ ದರೋಡೆ]

Finance

ಈ ಸಮಯದಲ್ಲಿ ಫೈನಾನ್ಸ್‌ನಲ್ಲಿದ್ದ ಜನರು ಜೋರಾಗಿ ಕೂಗಿಕೊಂಡಿದ್ದರಿಂದ ನಾಲ್ವರು ಅಲ್ಲಿಂದ ಪರಾರಿಯಾಗಿದ್ದಾರೆ. ವಿಜಯನಗರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ಫೈನಾನ್ಸ್‌ ಇರುವ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಗಾರ್ಮೆಂಟ್ಸ್‌ನಲ್ಲಿ ಕಳ್ಳತನ ಉದ್ಯೋಗಿಗಳ ಬಂಧನ : ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್‌ನಲ್ಲಿಯೇ ಜೀನ್ಸ್ ಪ್ಯಾಂಟ್‌ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರು ಉದ್ಯೋಗಿಗಳು ಮತ್ತು ಇತರ ಇಬ್ಬರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದು, 16 ಲಕ್ಷ ರೂ. ಮೌಲ್ಯದ ಪ್ಯಾಂಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ರಂಗೇಗೌಡ, ಮಹಾಲಿಂಗ, ಪ್ರಕಾಶ, ಗಜಾನನ ಎಂದು ಗುರುತಿಸಲಾಗಿದೆ. ಎಲೆಕ್ಟ್ರಾನಿಕ್‌ ಸಿಟಿ ವ್ಯಾಪ್ತಿಯ ಶಾಯಿ ಗಾರ್ಮೆಂಟ್ಸ್ ನಲ್ಲಿ ರಂಗೇಗೌಡ ಮತ್ತು ಮಹಾಲಿಂಗ ಕಳ್ಳತನ ಮಾಡುತ್ತಿದ್ದರು. ಪ್ರಕಾಶ ಮತ್ತು ಗಜಾನನ ಅದನ್ನು ಮಾರಾಟ ಮಾಡಲು ಸಹಾಯ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+