Bengaluru Traffic: ಟ್ರಾಫಿಕ್ ನಿಯಮ ಉಲ್ಲಂಘಿಸಿ ಕಾರಿಗೆ ಜಾಗ ಬಿಡದೆ ದ್ವಿಚಕ್ರ ವಾಹನ ಸವಾರನ ಪುಂಡಾಟ
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದ ಮೇಲೆ, ನಗರದಲ್ಲಿ ಟ್ರಾಫಿಕ್ ಮತ್ತಷ್ಟು ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ. ಒಂದು ಕಡೆ ನಗರದಲ್ಲಿ ಸರಿಯಾದ ರಸ್ತೆಗಳ ಕೊರತೆ, ಹೆಚ್ಚಿನ ವಾಹನ ದಟ್ಟಣೆ ಟ್ರಾಫಿಕ್‌ಗೆ ಕಾರಣವಾದರೆ ಮತ್ತೊಂದು ಕಡೆ ವಾಹನ ಸವಾರರ ಬೇಜವಾಬ್ದಾರಿತನ, ಉದ್ಧಟತನ ಕೂಟ ಟ್ರಾಫಿಕ್ ಸಮಸ್ಯೆಗೆ ಕಾರಣವಾಗುತ್ತದೆ.
ಬೆಂಗಳೂರಿನ ರಸ್ತೆಗಳಲ್ಲಿ ಗಲಾಟೆಗಳು ಸರ್ವೆ ಸಾಮಾನ್ಯವಾಗಿದೆ. ಇದೀಗ ನಗರದ ಮಾಗಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ರಸ್ತೆಯಲ್ಲೇ ಕಾರ್ ಗೆ ಅಡ್ಡ ಬಂದಿದ್ದಲ್ಲದೆ, ಜಾಗ ಬಿಡದೆ ಪುಂಡಾಟ ಮಾಡಿದ್ದಾನೆ. ಈ ದೃಶ್ಯಗಳು ಕಾರ್ ನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಮಾರ್ಚ್ 11ರಂದು ಈ ಘಟನೆ ನಡೆದಿದ್ದು @indiancamblr ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ಟ್ರಾಫಿಕ್ ನಿಯಮ ಮೀರಿ ಬಲಭಾಗದಲ್ಲಿ ಬಂದಿಲ್ಲದೆ, ಕಾರಿಗೆ ಎದುರು ಬಂದಿದ್ದಾನೆ. ಕಾರಿಗೆ ಜಾಗ ಬಿಡದೆ ಅಲ್ಲೇ ನಿಲ್ಲಿಸಿಕೊಂಡಿದ್ದಾನೆ. ನನಗೆ ಸಮಯ ಇದೆ, ಇಲ್ಲೇ ನಿಲ್ಲುತ್ತೇನೆ, ನೀನೇ ಬೇಕಾದರೆ ಸೈಡಿನಲ್ಲಿ ಹೋಗು ಎನ್ನುವಂತೆ ಉದ್ಧಟತನ ತೋರಿದ್ದಾನೆ.
Vehicle No: KA05LT5912
— Indiancamblr (@indiancamblr) March 12, 2025
Wrong side driving - please check the attitude
Rider, Pillion - Not wearing helmet
Location: Magadi Road
Date: 11/03/2025@blrcitytraffic @magadiroadtrfps @3rdEyeDude @anil_lulla
His wordings "I have lot of time, I will not move, you do whatever you want" pic.twitter.com/tzodQ31iv6
ದ್ವಿಚಕ್ರ ವಾಹನದಲ್ಲಿ ಬಲಭಾಗದಲ್ಲಿ ಬಂದಿದ್ದೂ ಅಲ್ಲದೆ ವಾಹನ ಸವಾರ ಮತ್ತು ಹಿಂಬದಿ ಸವಾರ ಕೂಡ ಹೆಲ್ಮೆಟ್ ಹಾಕದೆ ಮತ್ತೊಂದು ನಿಯಮ ಉಲ್ಲಂಘಿಸಿದ್ದಾರೆ. ಹಲವು ನಿಮಿಷಗಳ ಕಾಲ ಕಾರಿನ ಚಾಲಕ ಕೂಡ ದ್ವಿಚಕ್ರ ವಾಹನ ಸವಾರನಿಗೆ ಜಾಗ ಬಿಡದೆ ನಿಂತಿದ್ದಾರೆ. ದ್ವಿಚಕ್ರ ವಾಹನ ಸವಾರ ಕೂಡ ಹಲವು ನಿಮಿಷ ಕಾರಿಗೆ ಅಡ್ಡಲಾಗಿ ನಿಂತಿದ್ದಾನೆ, ಬಳಿಕ ಅಲ್ಲಿಂದ ಹೋಗಿದ್ದಾನೆ.
ಕಠಿಣ ಕ್ರಮದ ಭರವಸೆ
ಬೆಂಗಳೂರು ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿದ್ದು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಇದಕ್ಕೆ ಸಂಚಾರ ಪೊಲೀಸರು ಪ್ರತಿಕ್ರಿಯೆ ನೀಡಿದ್ದು ಮಾಗಡಿ ರಸ್ತೆ ಟ್ರಾಫಿಕ್ ಪೊಲೀಸರಿಗೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದಾರೆ.
ಈ ವಿಡಿಯೋಗೆ ನೂರಾರು ಮಂದಿ ಪ್ರತಿಕ್ರಿಯೆ ನೀಡಿದ್ದು, ದ್ವಿಚಕ್ರ ವಾಹನ ಸವಾರನ ಉದ್ಧಟತನಕ್ಕೆ ಆಕ್ರೋಶ ವ್ಯಕ್ತವಾಗಿದೆ. ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯವೇ ಇಂತಹ ಘಟನೆಗಳಿಗೆ ಕಾರಣ ಎಂದು ಹಲವರು ಆರೋಪಿಸಿದ್ದಾರೆ. ಟ್ರಾಫಿಕ್ ಪೊಲೀಸರು ಇಂತಹ ಪುಂಡರಿಗೆ ದೊಡ್ಡ ಮೊತ್ತದ ದಂಡ ವಿಧಿಸಬೇಕು ಎಂದು ಆಗ್ರಹಿಸಲಾಗಿದೆ.
ಮತ್ತೊಬ್ಬರು ಆತನಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ನಿಲ್ಲಿಸಬೇಕು, ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ಇಂತಹ ಜನರಿಗೆ ಬುದ್ದಿ ಕಲಿಸಲು ಸಾಧ್ಯವಿಲ್ಲ. ಬೆಂಗಳೂರು ಮಾತ್ರವಲ್ಲ ಭಾರತದ ಹಲವು ದೊಡ್ಡ ನಗರಗಳಲ್ಲಿ ಇದೇ ಪರಿಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications