ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ನಿರ್ಮಾಣ ವಿವಾದ: ಶಾಸಕ ಮುನಿರತ್ನ ಹೇಳಿದ್ದು ಹೀಗೆ

ಬೆಂಗಳೂರು, ಮಾರ್ಚ್. 22: ರಾಜರಾಜೇಶ್ವರಿ ನಗರದ ಹೊಸಕೆರೆಹಳ್ಳಿ ಕೆರೆಯ ಮೂಲಕ ರಸ್ತೆ ನಿರ್ಮಿಸುತ್ತಿರುವ ಬಗ್ಗೆ ವರದಿಗಳು ಬಂದ ಬೆನ್ನಲ್ಲೇ ತೋಟಗಾರಿಕಾ ಸಚಿವ ಹಾಗೂ ಕ್ಷೇತ್ರದ ಶಾಸಕ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ. ಹೊಸಕೆರೆಹಳ್ಳಿ ಕೆರೆಯ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಸ್ತೆ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದು ಆರೋಪಗಳು ಕೇಳಿ ಬಂದಿದ್ದವು.

ಹೊಸಕೆರೆಹಳ್ಳಿ ಕೆರೆಯೊಳಗೆ ಶಾಶ್ವತ ರಸ್ತೆ ನಿರ್ಮಿಸುತ್ತಿಲ್ಲ ಎಂದಿರುವ ಬಿಜೆಪಿ ಶಾಸಕ ಮುನಿರತ್ನ ಹೂಳು ತೆಗೆಯಲು ಮಾತ್ರ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಕೆರೆಯ ಮಧ್ಯದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದ ಜೆಡಿಎಸ್, ಕ್ಷೇತ್ರದ ಕೆರೆಯನ್ನು ಕಾಪಾಡಬೇಕಾದ ಶಾಸಕ ಮುನಿರತ್ನ ಯಾವುದೊ ಕಾಲ್ಪನಿಕ ವ್ಯಕ್ತಿಗಳ ಹಿಂದೆ ಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿತ್ತು.

Road project on Hosakerehalli Lake: Minister Munirathna Reaction

''ಹೊಸಕೆರೆಹಳ್ಳಿ ಕೆರೆಯು 50 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, ಕಳೆದ 100 ವರ್ಷಗಳಿಂದ ಅಲ್ಲಿ ಹೂಳು ಸಂಗ್ರಹವಾಗಿದೆ. ಮಾನ್ಸೂನ್ ಸುತ್ತಿನಲ್ಲಿ ಮತ್ತುಹೂಳು ತೆಗೆಯುವುದು ಅಗತ್ಯವಿದೆ, ಉತ್ತಮ ರಸ್ತೆ ಅಗತ್ಯವಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಬಿಬಿಎಂಪಿ ಕೆರೆಯಲ್ಲಿ ಕಸ ಮತ್ತು ಹೂಳು ತೆಗೆಯುವ ಕಾಮಗಾರಿ ಕೈಗೆತ್ತಿಕೊಳ್ಳುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ.

ಈ ಕಾಮಗಾರಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ, ಯಾವುದೇ ರಿಯಾಲ್ಟಿ ಸಂಸ್ಥೆಗೆ ಸಹಾಯ ಮಾಡುತ್ತಿಲ್ಲ. ಎಲ್ಲವೂ ನಿಯಮಾನುಸಾರ ನಡೆಯುತ್ತಿದೆ. ಹೂಳು ತೆಗೆಸಿ ಟೆಂಡರ್ ಷರತ್ತುಗಳನ್ನು ಅನುಸರಿಸಲಾಗುತ್ತಿದೆ ಎಂದು ಸಚಿವರು ಪ್ರತಿಪಕ್ಷಗಳ ಆರೋಪವನ್ನು ತಳ್ಳಿ ಹಾಕಿದ್ದಾರೆ.

Road project on Hosakerehalli Lake: Minister Munirathna Reaction

"ಕೆರೆಯನ್ನು ಅಭಿವೃದ್ಧಿಪಡಿಸಲಾಗುವುದು. ಇದರಲ್ಲಿ ಉದ್ಯಾನವನವನ್ನು ಸಹ ನಿರ್ಮಿಸಲಾಗುತ್ತದೆ. ಇದು ಆರ್‌ಆರ್‌ನಗರದಲ್ಲಿ ಮಾದರಿ ಕೆರೆಯಾಗಲಿದೆ' ಎಂದು ಒತ್ತಿ ಹೇಳಿದ ಮುನಿರತ್ನ, ಕೆಲವರು ದುರುದ್ದೇಶದಿಂದ ಗೊಂದಲ ಸೃಷ್ಟಿಸಿರುವ ಹಿನ್ನೆಲೆಯಲ್ಲಿ ವದಂತಿಗಳು ಮತ್ತು ನೆಗಟಿವ್ ಪ್ರಚಾರ ತಪ್ಪಿಸಲು ಬಿಬಿಎಂಪಿ ಕಾಮಗಾರಿಗೆ ಸಂಬಂಧಿಸಿದ ಬ್ಯಾನರ್‌ ಹಾಕಿದೆ" ಎಂದು ಹೇಳಿದ್ದಾರೆ.

ಸಚಿವರ ಮಾತಿಗೆ ಒಪ್ಪಿಗೆ ಸೂಚಿಸಿರುವ ಬಿಬಿಎಂಪಿ, ಕೆರೆಯ ಹೂಳು ತೆಗೆಯಲು ವಾಹನಗಳ ಓಡಾಟಕ್ಕೆ ಉಪಯೋಗವಾಗಲಿ ಎಂದು ತಾತ್ಕಾಲಿಕ ಮಣ್ಣಿನ ದಿಬ್ಬಗಳನ್ನು ರಚಿಸಲಾಗಿದೆ. ಹೂಳು ತೆಗೆದ ಬಳಿಕ ಆವರಣದಲ್ಲಿರುವ ತಾತ್ಕಾಲಿಕ ಮಣ್ಣಿನ ಗುಡ್ಡವನ್ನು ತೆಗೆಯಲಾಗುವುದು ಎಂದು ತಿಳಿಸಿದೆ. ಕೆರೆ ಸುಧಾರಣೆಯ ಭಾಗವಾಗಿ ಬಿಬಿಎಂಪಿ ಕೆರೆ ಕಟ್ಟದ ಬಳಿ ತಡೆಗೋಡೆ ನಿರ್ಮಿಸುತ್ತಿದೆ. ರಸ್ತೆ ನಿರ್ಮಾಣವಾಗಿರುವ ಬಗ್ಗೆ ಮಾಹಿತಿ ಇಲ್ಲ. ಎಸ್‌ಡಬ್ಲ್ಯೂಡಿ ಇಲಾಖೆಯಿಂದ ತಡೆಗೋಡೆ ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Road project on Hosakerehalli Lake: Minister Munirathna Reaction

ಕೆರೆಯ ಮಧ್ಯದಲ್ಲಿ ರಸ್ತೆ ನಿರ್ಮಾಣ ವಿಷಯಕ್ಕೆ ಜೆಡಿಎಸ್‌ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. "ಬೆಂಗಳೂರಿನ ಹಳೆಯ ಕೆರೆಗಳಲ್ಲೊಂದಾದ ಹೊಸಕೆರೆಹಳ್ಳಿಯ ಕೆರೆಯ ಮಧ್ಯೆ ಬಿಬಿಎಂಪಿ ಅಕ್ರಮ ರಸ್ತೆನಿರ್ಮಿಸುತ್ತಿದೆ. ಇದು ಅಕ್ಷಮ್ಯ. ಅಪಾರ್ಟ್ಮೆಂಟೊಂದರ ಮೌಲ್ಯ ಹೆಚ್ಚಿಸಲು ಈ ಕೃತ್ಯ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕ್ಷೇತ್ರದ ಕೆರೆಯನ್ನು ಕಾಪಾಡಬೇಕಾದ ಶಾಸಕ ಮುನಿರತ್ನ ಯಾವುದೊ ಕಾಲ್ಪನಿಕ ವ್ಯಕ್ತಿಗಳ ಹಿಂದೆ ಬಿದ್ದಿದ್ದಾರೆ" ಎಂದು ಕಿಡಿಕಾರಿತ್ತು.

"ಕೆರೆಗಳು ನಗರದ ಜೀವಸೆಳೆ, ಅದನ್ನು ರಕ್ಷಿಸಬೇಕೆ ವಿನಃ ಹಾಳುಗೆಡವುದಲ್ಲ. ಕೆರೆಯ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಖರ್ಚು ಮಾಡಲಾಗಿದೆ, ಆದರೆ ಕೆರೆಯಿನ್ನೂ ದುರ್ನಾತ ಬೀರುತ್ತಿದೆ. ಕೆರೆಗೆ ಈಗಾಗಲೆ ಖರ್ಚು ಮಾಡಲಾದ ಹಣವನ್ನು ಏನು ಮಾಡಲಾಗಿದೆ ಎಂದು ಶಾಸಕ ಮುನಿರತ್ನ ಹೇಳಬೇಕಾಗಿದೆ" ಎಂದು ಸರಣಿ ಟ್ವೀಟ್‌ಗಳ ಮೂಲಕ ಆಗ್ರಹಿಸಿತ್ತು.

Road project on Hosakerehalli Lake: Minister Munirathna Reaction

"ಕೆರೆ ಮಧ್ಯೆ ರಸ್ತೆ ನಿರ್ಮಿಸಲು ಬಿಬಿಎಂಪಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಕೆಟಿಸಿಡಿಎ) ಅನುಮೋದನೆ ಕೂಡಾ ಪಡೆದಿಲ್ಲ ಎಂಬ ವರದಿಯಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಮಿಷನ್ ದಂಧೆ ಬಿಟ್ಟು ಇತ್ತ ಕಡೆ ತಲೆ ಹಾಕಿ. ಕಾನೂನು ಮುರಿದು ಕರೆ ಮಧ್ಯೆ ರಸ್ತೆ ನಿರ್ಮಿಸಿದ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಿ" ಎಂದು ಒತ್ತಾಯಿಸಿತ್ತು.

ಇತ್ತ, ಕೆರೆ ಸಂರಕ್ಷಣೆ ಕಾರ್ಯಕರ್ತರು ಮತ್ತು ಸ್ಥಳೀಯರು ಬಿಬಿಎಂಪಿ ಕೆಲಸಕ್ಕೆ ಸಂಬಂಧಿಸಿದಂತೆ ಹೇಳುವುದೇ ಬೇರೆ. ಇಲ್ಲಿನ ಅಧಿಕಾರಿಗಳು ಕಾಮಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡುತ್ತಿಲ್ಲ, ನೂರಾರು ಟ್ರಕ್‌ಗಳಷ್ಟು ಕಟ್ಟಡ ಅವಶೇಷಗಳನ್ನು ಕೆರೆಯೊಳಗೆ ತರಲಾಗುತ್ತಿದೆ. "ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವು ಯಾವುದೇ ಅನುಮೋದನೆ ನೀಡಿಲ್ಲ ಮತ್ತು ಬಿಬಿಎಂಪಿ ಅಧಿಕಾರಿಗಳು ಯಾವುದೇ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ" ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳೀಯ ಪ್ರೀಮಿಯಂ ಅಪಾರ್ಟ್‌ಮೆಂಟ್ ಸಂಕೀರ್ಣದ ನಿವಾಸಿಗಳಿಗೆ ಸಹಾಯ ಮಾಡಲು ಬಿಬಿಎಂಪಿಯು ಕೆರೆಯ ಮೂಲಕ 25 ಅಡಿ ಅಗಲದ ರಸ್ತೆಯನ್ನು ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಿಬಿಎಂಪಿ ಕೆರೆಯ ಬಳಿ ಹಾಕಿರುವ ಪೋಸ್ಟರ್ ಅವರನ್ನು ಗೊಂದಲಕ್ಕೀಡು ಮಾಡುವ ಉದ್ದೇಶವನ್ನು ಹೊಂದಿದೆ. ಪೋಸ್ಟರ್ ಸತ್ಯವನ್ನು "ಮರೆಮಾಡುವ" ಪ್ರಯತ್ನವಾಗಿದೆ. ಕೆರೆಯ ಹೂಳು ತೆಗೆಯಲು ಅದರೊಳಗೆ ಚಲಿಸುವ ಟ್ರಕ್‌ಗಳಿಗೆ ರಸ್ತೆಯಂತಹ ತಾತ್ಕಾಲಿಕ ಬಂಡ್ ಅಗತ್ಯವಿಲ್ಲ. ಹೊಸಕೆರೆಹಳ್ಳಿ ಕೆರೆಯ ಮಧ್ಯದಲ್ಲಿ ರಸ್ತೆ ನಿರ್ಮಿಸುತ್ತಿಲ್ಲ ಎಂದು ಬಿಬಿಎಂಪಿ ಪತ್ರಿಕಾ ಹೇಳಿಕೆ ನೀಡಿ ಜನರಿಗೆ ಭರವಸೆ ನೀಡಿದರೆ ಎಲ್ಲರೂ ನೆಮ್ಮದಿಯಿಂದ ಇರುತ್ತಾರೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+