ಬೆಂಗಳೂರಲ್ಲೊಂದು ಬೀರಬಲ್ ರಸ್ತೆ; ಎಲ್ಲಿದೆ ಗೊತ್ತೆ?
ಬೆಂಗಳೂರು, ಆಗಸ್ಟ್ 03: ಕೆಲವು ದಿನಗಳ ತನಕ ಹೆಸರೇ ಇಲ್ಲದ ಬೆಂಗಳೂರು ನಗರದ ರಸ್ತೆಯೊಂದಕ್ಕೆ ಬೀರಬಲ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ರಸ್ತೆಗೆ ಹೆಸರಿಲ್ಲದೇ ಮನೆಯ ವಿಳಾಸ ಕೊಡಲು ಪರದಾಡುತ್ತಿದ್ದ ಜನರಿಗೆ ಇದು ಸಹಾಯಕವಾಗಿದೆ.
Recommended Video
ದೊಮ್ಮಲೂರು ವಾರ್ಡ್‌ನ ರಸ್ತೆಯೊಂದಕ್ಕೆ 'ಬೀರಬಲ್ ರಸ್ತೆ' ಎಂದು ನಾಮಕರಣ ಮಾಡಲಾಗಿದೆ. ಬಿಬಿಎಂಪಿ ಸದಸ್ಯರಾದ ಸಿ. ಆರ್. ಲಕ್ಷ್ಮೀ ನಾರಾಯಣ ಜುಲೈ 28ರಂದು ರಸ್ತೆಗೆ ನಾಮಕರಣ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ದೊರೆ ಅಕ್ಬರ್‌ಗೆ ಬೀರಬಲ್ ನಂಬಿಕೆಯ ಸಲಹೆಗಾರನಾಗಿದ್ದ. ಅವರು ಉತ್ತಮ ತಂತ್ರಗಾರಿಕೆಯನ್ನು ರೂಪಿಸುತ್ತಿದ್ದರು. ಜಾತಿ, ಧರ್ಮಗಳನ್ನು ಮೀರಿ ಜನರ ಹೃದಯದಲ್ಲಿ ಅವರು ಸ್ಥಾನ ಪಡೆದಿದ್ದಾರೆ" ಎಂದು ಹೇಳಿದ್ದಾರೆ.

"ರಸ್ತೆಗಳಿಗೆ ಇತಿಹಾಸ ಸೃಷ್ಟಿಸಿದ ಜನರ ಹೆಸರನ್ನು ಇಟ್ಟರೆ ಜನರಿಗೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುತ್ತದೆ. ಮುಂದಿನ ಪೀಳಿಗೆಗೂ ಸಹ ಅವರ ಪರಿಚಯ ಮಾಡಿಕೊಟ್ಟಂತೆ ಆಗುತ್ತದೆ" ಎಂದು ಸಿ. ಆರ್. ಲಕ್ಷ್ಮೀ ನಾರಾಯಣ ತಿಳಿಸಿದ್ದಾರೆ.
ಈ ಹಿಂದೆ ತಮ್ಮ ವಾರ್ಡ್‌ನಲ್ಲಿನ ರಸ್ತೆಗಳಿಗೆ ಮಹಾಭಾರತದ ಪಾತ್ರಗಳಾದ ಅರ್ಜುನ, ನಕುಲ ಹೆಸರಿಟ್ಟಿದ್ದರು ಸಿ. ಆರ್. ಲಕ್ಷ್ಮೀ ನಾರಾಯಣ. ರಸ್ತೆಯ ಜನರು ಬೀರಬಲ್ ಹೆಸರು ಇಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ವಾರ್ಡ್‌ನ ಹಲವು ರಸ್ತೆಗಳಿಗೆ ಯಾವುದೇ ಹೆಸರು ಇಲ್ಲ. ಇದರಿಂದಾಗಿ ಮನೆಯ ವಿಳಾಸ ಕೊಡಲು, ಅಂಚೆ ಮತ್ತು ಕೋರಿಯರ್ ಕಳಿಸಲು ಜನರು ಪರದಾಡುತ್ತಿದ್ದಾರೆ.












Click it and Unblock the Notifications