ರಾಜಾಜಿನಗರದಿಂದ ಔಟರ್ ರಿಂಗ್ ರೋಡ್‌ವರೆಗೆ ರಸ್ತೆ ಅಗಲೀಕರಣ
ಬೆಂಗಳೂರು, ಫೆಬ್ರವರಿ 11 : ಬಿಬಿಂಪಿಯು ಬೆಂಗಳೂರಿನ ಹಲವೆಡೆ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಂಡಿದೆ. ಅದರ ಭಾಗವಾಗಿ ರಾಜಾಜಿನಗರದಿಂದ ಔಟರ್ ರಿಂಗ್ ರಸ್ತೆವರೆಗೆ ಇದೇ ತಿಂಗಳು ರಸ್ತೆ ಅಗಲೀಕರಣ ಕಾಮಗಾರಿ ನಡೆಯಲಿದೆ.
ಎರಡು ಪ್ರತ್ಯೇಕ ಬುಲೇವಾಡ್‌ಗಳನ್ನು ನಿರ್ಮಿಸಲಾಗುತ್ತಿದೆ. ಈಗಿರುವ 5.5 ಮೀಟರ್ ರಸ್ತೆಯನ್ನು 13 ಮೀಟರ್‌ಗೆ ಅಗಲ ಮಾಡಲಾಗುತ್ತದೆ.
ಸಾಕಷ್ಟು ಪ್ರಯಾಣಿಕರು ಮಾಗಡಿ ರಸ್ತೆ ಹಾಗೂ ಔಟರ್ ರಿಂಗ್ ರಸ್ತೆ ಪ್ರವೇಶಿಸಲು ತುಮಕೂರು ರಸ್ತೆ, ವಿಜಯನಗರ ರಸ್ತೆಯನ್ನು ಬಳಸುತ್ತಾರೆ. ರಸ್ತೆಯನ್ನು ಅಗಲೋಕರಣ ಮಾಡುವುದರಿಂದ ಪ್ರಯಾಣಿಕರು ಸುಲಭವಾಗಿ ಸಂಚರಿಸಬಹುದಾಗಿದೆ.

ರಾಜಾಜಿನಗರ, ಪೈಪ್‌ಲೈನ್ ಮೂಲಕ ಔಟರ್ ಡಿಂಗ್ ರಸ್ತೆಗೆ ಸುಲಭವಾಗಿ ಸಂಚರಿಸಬಹುದಾಗಿದೆ.ಕಳೆದ ವರ್ಷವೇ ಯೋಜನೆಯನ್ನು ತಯಾರಿಸಲಾಗಿದೆ. ಈ ಕುರಿತು ಎಂಜಿನಿಯರ್‌ಗಳ ಜೊತೆ ಚರ್ಚೆಯೂ ನಡೆದಿದೆ. ಈ ವಾರದೊಳಗೆ ಟೆಂಡರ್ ಕರೆಯಲಾಗುತ್ತಿದೆ.
ಪಾದರಾಯನಪುರದಿಂದ ವಿಜಯನಗರದವರೆಗೆ ರಸ್ತೆ ಅಗಲೀಕರಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, 41 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ.












Click it and Unblock the Notifications