ರಕ್ಷಣಾ ಇಲಾಖೆ ಜಮೀನಿನಲ್ಲಿ ರಸ್ತೆಕಾಮಗಾರಿ ಮತ್ತೆ ವಿಳಂಬ

ಬೆಂಗಳೂರು, ಆಗಸ್ಟ್ 25: ದಶಕಗಳಿಂದ ನೆನಗುದಿಗೆ ಬಿದ್ದಿದ್ದ ರಕ್ಷಣಾ ಇಲಾಖೆ ಜಮೀನು ಹಸ್ತಾಂತರ ಪ್ರಕ್ರಿಯೆ ಇತ್ತೀಚೆಗಷ್ಟೇ ಆರಂಭವಾಗಿದ್ದರೂ ಈಗಾಗಲೇ ಹಸ್ತಾಂತರಗೊಂಡಿರುವ ಜಾಗದಲ್ಲಿ ರಸ್ತೆ ನಿರ್ಮಿಸಬೇಕಿದ್ದ ಬಿಬಿಎಂಪಿ ಹಠಾತ್ ಕಾಮಗಾರಿಯನ್ನು ಮುಂದೂಡಿದೆ.

ಮೊದಲನೆಯದಾಗಿ ಕಾವಲ್ ಭೈರಸಂದ್ರದಿಂದ ಮೋದಿ ಗಾಡ್೯ನ್ ( ಸದ್ಯ ಮಿಲಿಟರಿ ಮಡ್ ರಸ್ತೆ ಎಂದು ಹೆಸರಿಸಲಾಗಿದೆ) ರಸ್ತೆಯನ್ನು ಸುಮಾರು 16 ಕೋಟಿ ವೆಚ್ಚದ್ದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು ರಸ್ತೆಯ ಎರಡು ಬದಿಯ ಚರಂಡಿ, ಆರ್ ಸಿ ಸಿ ವಾಲ್ ಇತರೇ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ದೊರೆಯಬೇಕಿತ್ತು.

ವಾಡ್೯ 47ರ ದೇವರ ಜೀವನ ಹಳ್ಳಿಯ ಮೋದಿ ಗಾಡ್೯ನ್, ಕಾವಲ್ ಬೈರಸಂದ್ರ ಬಳಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮ ವನ್ನು ಅನಿವಾರ್ಯ ಕಾರಣದಿಂದಾಗಿ ರದ್ದು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Road construction delays again in defense land

ಕಾಮಗಾರಿಗೆ ಚಾಲನೆ ನೀಡುವ ಕೆಲವೇ ತಾಸುಗಳ ಹಿಂದೆ ನಿರ್ಮಾಣ ಕಾಮಗಾರಿ ಕಾರ್ಯಕ್ರಮವನ್ನು ಹಠಾತ್ ಮುಂದೂಡಿದೆ. ಇತ್ತೀಚೆಗೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನಡುವೆ ದಿನವಿಡೀ ರಕ್ಷಣಾ ಇಲಾಖೆಯ ಜಮೀನು ಹಸ್ತಾಂತರ ಕುರಿತಂತೆ ಚರ್ಚೆ ಡೆದಿತ್ತು. ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ರಕ್ಷಣಾ ಇಲಾಖೆ ಜಮೀನನ್ನು ಬಿಬಿಎಂಪಿಗೆ ನೀಡಿದರೆ ಅದಕ್ಕೆ ಪರ್ಯಾಯವಾಗಿ ಬೆಂಗಳೂರು ನಗರದ ಹೊರವಲಯದಲ್ಲಿ ಸುಮಾರು 43ಎಕರೆ ಜಮೀನನ್ನು ರಕ್ಷಣಾ ಇಲಾಖೆಗೆ ನೀಡಬೇಕಿದೆ.

ಆದರೆ ಬೆಂಗಳೂರು ಹೊರ ವಲಯದ ಗ್ರಾಮಸ್ಥರ ರಕ್ಷಣಾ ಇಲಾಖೆಗೆ ಬಿಬಿಎಂಪಿ ಜಾಗ ವಿರೋಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆ ತನ್ನ ಜಾಗವನ್ನು ಹಸ್ತಾಂತರಿಸಲು ಮೀನಾಮೇಷ ಎಣಿಸುತ್ತಿದೆ ಎಂದು ಹೇಳಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+