ವೋಲ್ವೊ ಬಸ್ ಪ್ರಯಾಣ ದರ ಇಳಿಕೆ: ಫೆ.28ರವರೆಗೆ ವಿಸ್ತರಣೆ
ಬೆಂಗಳೂರು, ಫೆಬ್ರವರಿ 01: ಅತಿ ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಂಚರಿಸುವ ವಜ್ರ ಮತ್ತು ವಾಯುವಜ್ರ ಹವಾ ನಿಯಂತ್ರಿತ ಬಸ್ ಗಳ ಪರಿಷ್ಕೃತ ಪ್ರಯಾಣ ದರವನ್ನು ಫೆಬ್ರವರಿ 28ರವರೆಗೆ ವಿಸ್ತರಿಸಲಾಗಿದೆ.
ವಜ್ರ ಬಸ್ ಗಳ ಪ್ರಯಾಣ ದರದಲ್ಲಿ ಶೇ.25 ರಿಂದ ಶೇ.37 ರವರೆಗೆ ಕಡಿತಗೊಳಿಸಿ ಪರಿಷ್ಕೃತ ಪ್ರಯಾಣ ದರವನ್ನು ಜನವರಿ 1 ರಿಂದ 31 ರವರೆಗೆ ಪ್ರಾಯೋಗಿಕವಾಗಿ ಜಾರಿಗೊಳಸಿಲಾಗಿತ್ತು. ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಲಭಿಸಿದ್ದರಿಂದ ಈ ಸೇವೆಯನ್ನು ಮುಂದುವರಿಸಲಾಗಿದೆ.

ಮೇಖ್ರಿ ವೃತ್ತ, ಹೆಬ್ಬಾಳ, ಎಸ್ಟೀಮ್ ಮಾಲ್, ಕೋಗಿಲು ಕ್ರಾಸ್ ನಿಂದ ಕೆಐಎಗೆ ಸಂಚರಿಸುವ ವಾಯುವಜ್ರ ಬಸ್ ಗಳಲ್ಲಿ ಜಿಎಸ್ ಟಿ (ಶೇ.5 ) ಮತ್ತು ಟೋಲ್ ದರ ಪ್ರತಿ ಪ್ರಯಾಣಿಕರಿಗೆ 12 ರೂ ಹೊರತುಪಡಿಸಿ, ಪ್ರಯಾಣ ದರ ಪರಿಷ್ಕರಿಸಲಾಗಿದೆ. ಹುಣಸಮಾರನಹಳ್ಳಿಯಿಂದ ಕೆಐಎ ಗೆ ಹೊಸದಾಗಿ ದರ 100 ರೂ ನಿಗದಿಪಡಿಸಲಾಗಿದೆ.












Click it and Unblock the Notifications