Government Jobs: ಕಂದಾಯ ಇಲಾಖೆಯ 1,000 ಹುದ್ದೆ ನೇಮಕಾತಿ; ವಿದ್ಯಾರ್ಹತೆ, ಪರೀಕ್ಷೆ ವಿವರ
ಬೆಂಗಳೂರು, ಫೆಬ್ರವರಿ.18: ರಾಜ್ಯದಲ್ಲಿ ಖಾಲಿಯಿರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಹುದ್ದೆಗಳ ಮಾಹಿತಿ, ಪರೀಕ್ಷಾ ವಿವರಗಳು ಇಲ್ಲಿವೆ.
ರಾಜ್ಯದ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಖಾಲಿ ಇರುವ 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಯನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ತಿಳಿಸಲಾಗಿದೆ. ಹುದ್ದೆಗಳ ಅಧಿಸೂಚನೆ, ವಯೋಮಿತಿ ಮತ್ತು ಪಠ್ಯಕ್ರಮದ ಬಗ್ಗೆ, ವಿವರಗಳು ಮತ್ತು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗುವುದು.

ಗ್ರಾಮ ಆಡಳಿತ ಹುದ್ದೆಗಳ ನೇಮಕಾತಿಗಾಗಿ ಸರ್ಕಾರವು ವಯೋಮಿತಿಯನ್ನು ಈ ಕೆಳಗಿನಂತೆ ನಿಗಧಿ ಪಡಿಸಿದೆ.
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ ಒಂದಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷಗಳು ಎಂದು ವಯೋಮಿತಿ ನಿಗದಿಪಡಿಸಲಾಗಿದೆ.
* 2ಎ, 2ಬಿ, 3ಎ, 3ಬಿ ವರ್ಗಗಳಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 38 ವರ್ಷಗಳು ಎಂದು ವಯೋಮಿತಿ ನಿಗದಿಪಡಿಸಲಾಗಿದೆ.
* ಸಾಮಾನ್ಯ ವರ್ಗಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷಗಳು ಎಂದು ವಯೋಮಿತಿ ನಿಗದಿಪಡಿಸಲಾಗಿದೆ.
ಪರೀಕ್ಷೆ ಮತ್ತು ಪಠ್ಯ ಕ್ರಮ
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಯನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ತಿಳಿಸಲಾಗಿದೆ. ಪಠ್ಯ ಕ್ರಮವನ್ನು ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ರಲ್ಲಿ ನಿಗದಿಪಡಿಸಿರುವಂತೆ ಅಳವಡಿಸಲಾಗುವುದು.
ಆಡಳಿತ ಹುದ್ದೆಗಳನ್ನು ನೇಮಕಮಾಡಿಕೊಳ್ಳಲು ಯಾವ ಪರೀಕ್ಷಾ ಆಯೋಗ/ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಈಗಾಗಲೇ ಸಾಕಷ್ಟು ವಿವಿಧ ಹುದ್ದೆಗಳ ನೇಮಕಾತಿಯ ಅಂತಿಮ ಫಲಿತಾಂಶ ಬಿಡುಗಡೆಯಾಗದೇ ಹಲವಾರು ವರ್ಷಗಳ ಕಾಲ ವಿಳಂಬವಾಗುತ್ತಿರುವ ಕಾರಣ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಯಾವುದಾದರು ಸಾಂವಿಧಾನಿಕ ಪರೀಕ್ಷಾ ಸಂಸ್ಥೆಗೆ ಈ ನೇಮಕಾತಿಯ ಜವಾಬ್ದಾರಿಯನ್ನು ನೀಡಲು ಸರ್ಕಾರ ಕ್ರಮಕೈಗೊಳ್ಳುವುದೇ ಅಥವಾ ಈ ಕುರಿತು ಸ್ಪಷ್ಟನೆ ನೀಡಲಿದೇಯೇ ಎಂಬುದನ್ನು ಕಂದಾಯ ಇಲಾಖೆ ಪ್ರಶ್ನಿಸಿದೆ.












Click it and Unblock the Notifications