ಬೆಂಗಳೂರು : ನಿವೃತ್ತ ವಾಯುಪಡೆ ಅಧಿಕಾರಿ ಕೊಲೆ
ಬೆಂಗಳೂರು, ನ. 24 : ವಾಯುಪಡೆಯ ನಿವೃತ್ತ ಕಮಾಂಡೆಂಟ್ ಅವರನ್ನು ಕೊಲೆ ಮಾಡಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಸ್ಕೂರಿನಲ್ಲಿ ನಡೆದಿದೆ. ತಮ್ಮ ಪತ್ನಿಯೊಂದಿಗೆ ಹುಸ್ಕೂರಿನ ಸಮೀಪದ ಗ್ರೀನ್ ವ್ಯಾಲಿ ವಿಲ್ಲಾದಲ್ಲಿ ಇವರು ಎರಡು ತಿಂಗಳಿನಿಂದ ನೆಲೆಸಿದ್ದರು.
ಕೊಲೆಯಾದವರನ್ನು ಪರ್ವೀಜ್ ಖೋಕರ್ (70) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಒಂದು ಗಂಟೆಯ ಸುಮಾರಿನಲ್ಲಿ ಮನೆಯ ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಕೈ ಕಾಲು ಕಟ್ಟಿ ಹಾಕಿ, ಖೋಕರ್ ಅವರ ಕುತ್ತಿಗೆಗೆ ಟವೆಲ್ ಬಿಗಿದು ಕೊಲೆ ಮಾಡಿದ್ದಾರೆ. ಪಂಜಾಬ್ ಮೂಲದ ಖೋಕರ್, ವಾಯುಪಡೆಯ ಮುಖ್ಯ ಕಮಾಂಡೆಂಟ್ ಆಗಿ ನಿವೃತ್ತರಾದ ನಂತರ ಎಚ್‌ಎಎಲ್‌ನಲ್ಲಿ ಕನ್ಸಲ್ಟೆಂಟ್ ಆಗಿದ್ದರು.

ಹುಸ್ಕೂರು ರಸ್ತೆಯ ಎಸ್ಟೇಟ್ ಕ್ಲಬ್‌ಗೆ ಹೊಂದಿಕೊಂಡಿರುವ ಗ್ರೀನ್ ವಿಲ್ಲಾದಲ್ಲಿ ಖೋಕರ್, ತಮ್ಮ ಪತ್ನಿ ಪ್ರಮೀಳಾ ಜೊತೆ ವಾಸವಾಗಿದ್ದು. ಖೋಕರ್ ಅವರ ರೂಂನಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಯಾವುದೇ ಬೆಲೆಬಾಳುವ ವಸ್ತುಗಳನ್ನು ಕೊಲೆ ಮಾಡಿದವರು ದೋಚಿಲ್ಲ.
ಕೊಲೆ ನಡೆದ ದಿನ ಖೋಕರ್ ಅವರ ಪತ್ನಿ ಪ್ರಮೀಳಾ ಪಕ್ಕದ ಕೋಣೆಯಲ್ಲೇ ಮಲಗಿದ್ದರು. ದುಷ್ಕರ್ಮಿಗಳು ರೂಂ ಅನ್ನು ಹೊರಗಿನಿಂದ ಲಾಕ್ ಮಾಡಿದ್ದರಿಂದ ಪತಿಯನ್ನು ರಕ್ಷಿಸಲು ಅವರಿಗೆ ಸಾಧ್ಯವಾಗಿಲ್ಲ.
ಅಗತ್ಯ ಭದ್ರತೆ ಇದೆ : ವಿಲ್ಲಾದಲ್ಲಿ ಉತ್ತಮ ಭದ್ರತಾ ವ್ಯವಸ್ಥೆ ಇದೆ. ಹೊರಗಿನಿಂದ ಯಾರೂ ಆಗಮಿಸಿದರೂ ಭದ್ರತಾ ಸಿಬ್ಬಂದಿಗಳ ಬಳಿ ವಿವರಗಳು ದಾಖಲಾಗಿರುತ್ತವೆ. ಆವರಣದಲ್ಲಿ ಎಲ್ಲಾ ಕಡೆ ಸಿಸಿಟಿವಿ ಆಳವಡಿಸಲಾಗಿದೆ. ಆದರೂ ದುಷ್ಕರ್ಮಿಗಳು ಹೇಗೆ ಒಳಗೆ ಬಂದರು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications