Bengaluru: ಎಲೆಕ್ಟ್ರಾನಿಕ್ಸ್ ಸಿಟಿಯ ಮಾರಗೊಂಡನಹಳ್ಳಿ ಕೆರೆ ಸಾರ್ವಜನಿಕರಿಗೆ ಮುಕ್ತ- ಇಲ್ಲಿದೆ ಮಾಹಿತಿ
ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಹೊಸದಾಗಿ ಜೀರ್ಣೋದ್ಧಾರಗೊಂಡಿರುವ ಮಾರಗೊಂಡನಹಳ್ಳಿ ಕೆರೆಯನ್ನು ಸೋಮವಾರ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.
ಬೆಂಗಳೂರು, ಫೆಬ್ರವರಿ 28: ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಹೊಸದಾಗಿ ಜೀರ್ಣೋದ್ಧಾರಗೊಂಡಿರುವ ಮಾರಗೊಂಡನಹಳ್ಳಿ ಕೆರೆಯನ್ನು ಸೋಮವಾರ ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು.
ಅಕ್ಟೋಬರ್ 2021 ರಲ್ಲಿ ಆನಂದ್ ಮಲ್ಲಿಗವಾಡ್ ಅವರು ಕೆರೆ ಪುನಶ್ಚೇತನ ಮತ್ತು ಪುನರುಜ್ಜೀವನ ಯೋಜನೆಯನ್ನು ರೂಪಿಸಿದರು. ಯೋಜನಾ ವೆಚ್ಚವನ್ನು ( 1.9 ಕೋಟಿ ರೂಪಾಯಿ ) ಜೆಎಸ್‌ಡಬ್ಲ್ಯೂ ಗ್ರೂಪ್‌ನಿಂದ ಭರಿಸಲಾಯಿತು.

'ಡೆಕ್ಕನ್ ಹೆರಾಲ್ಡ್' ಜೊತೆ ಮಾತನಾಡಿರುವ ಮಲ್ಲಿಗವಾಡ, ಕೆರೆಯ ಆರಂಭಿಕ ಅಧ್ಯಯನದ ಪ್ರಕಾರ ಈಗ 10 ರಿಂದ 12 ಅಡಿಗಳಷ್ಟು ಒಳಚರಂಡಿ ಮತ್ತು 9 ಅಡಿಗಳ ವರೆಗೆ ಕೆಸರು ಸಂಗ್ರಹವಾಗಿತ್ತು ಎಂದು ತೋರಿಸಿದೆ. ಕಳೆಗಳು ಮತ್ತು ಪಾಚಿಗಳ ಪ್ರಸರಣವು ನೀರಿನಲ್ಲಿ ಹೆಚ್ಚಿನ ಮಟ್ಟದ ಮೀಥೇನ್‌ಗೆ ಕಾರಣವಾಯಿತು. ಇವು ಜಲಮೂಲದಲ್ಲಿನ ಜೀವಿಗಳನ್ನು ಕೊಲ್ಲುತ್ತದೆ.
ಕಳೆಗಳನ್ನು ನಾಶಮಾಡಲು ಡೆಸಿಲ್ಟಿಂಗ್ ಮತ್ತು ತ್ಯಾಜ್ಯನೀರಿನ ಸಂಸ್ಕರಣೆಯ ಪರಿಸರ ಸ್ನೇಹಿ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳಲಾಯಿತು. ಇದು ನೈಸರ್ಗಿಕವಾಗಿ ನೀರನ್ನು ಸಂಸ್ಕರಿಸಿ ಶುದ್ಧೀಕರಿಸಿತು.

'ನಾವು 6 ರಿಂದ 12 ತಿಂಗಳಿಗೊಮ್ಮೆ ಗಿಡಗಳನ್ನು ಕತ್ತರಿಸಿ ಅರಣ್ಯೀಕರಣಕ್ಕೆ ಸಹಾಯ ಮಾಡುತ್ತೇವೆ' ಎಂದು ಅವರು ಹೇಳಿದರು.
ಮಲ್ಲಿಗವಾಡ ಅವರು ಕೆರೆಯನ್ನು ಎರಡು ಪ್ರದೇಶಗಳಾಗಿ ವಿಂಗಡಿಸಿದ್ದಾರೆ. ಅದರಲ್ಲಿ 85 ಪ್ರತಿಶತದಷ್ಟು ಮಳೆನೀರು ಮೀಸಲು ಮತ್ತು 15 ಪ್ರತಿಶತ ನೈಸರ್ಗಿಕ ಒಳಚರಂಡಿ ಸಂಸ್ಕರಣಾ ಪ್ರದೇಶವಾಗಿದೆ. ಕೆರೆಯಿಂದ ಸಂಗ್ರಹಿಸಲಾದ ಹೂಳನ್ನು ಬಳಸಿ ಮಣ್ಣಿನ ಕಟ್ಟುಗಳನ್ನು ನಿರ್ಮಿಸುವ ಮೂಲಕ ಇದನ್ನು ಸಾಧಿಸಿದ್ದಾರೆ.
ಈಗ ಕೆರೆಯಲ್ಲಿ 1 ಲಕ್ಷ ಕ್ಯೂಬಿಕ್ ಮೀಟರ್‌ಗಿಂತ ಹೆಚ್ಚಿನ ನೀರಿನ ಸಂಗ್ರಹ ಸಾಮರ್ಥ್ಯವನ್ನು ಸೃಷ್ಟಿಸಲಾಗಿದೆ. ಕೆರೆಯ ಪರಿಸರ ಸಮತೋಲನವನ್ನು ಪುನಃಸ್ಥಾಪಿಸಲು ಮತ್ತು ಚಿಟ್ಟೆಗಳು, ಜೇನುನೊಣಗಳು ಮತ್ತು ಪಕ್ಷಿಗಳನ್ನು ಆಕರ್ಷಿಸಲು ಯೋಗ್ಯವಾಗಿದೆ. ಕೆರೆಯ ಸುತ್ತಲೂ ಒಟ್ಟು 16,000 ಕ್ಕೂ ಹೆಚ್ಚು ಮರಗಳಿವೆ. 4,500 ಕ್ಕೂ ಹೆಚ್ಚು ಸಸಿಗಳನ್ನು ನೆಡಲು ಅಲ್ಲಿನ ನಿವಾಸಿಗಳು ಸಹಕರಿಸಿದರು. ಈ ಗಿಡಗಳಿಗೆ ಹನಿ ನೀರಾವರಿ ಮೂಲಕ ನೀರು ನೀಡಲಾಗುವುದು.
ತಳದಿಂದ ಅಗೆದ ಮಣ್ಣನ್ನು ಕೆರೆಯ ಸುತ್ತಲೂ ಕಾಲುದಾರಿಗಳನ್ನು ನಿರ್ಮಿಸಲು ಬಳಸಲಾಗಿದೆ. ಇದು ವಾರಾಂತ್ಯದಲ್ಲಿ 20,000 ಕ್ಕೂ ಹೆಚ್ಚು ಸಾರ್ವಜನಿಕರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಈ ಕೆರೆಯು ಸುತ್ತಮುತ್ತಲಿನ ಬೋರ್‌ವೆಲ್‌ಗಳಿಗೆ ಸಹಾಯ ಮಾಡುವ ಮೂಲವಾಗಿಯೂ ಕಾರ್ಯನಿರ್ವಹಿಸುತ್ತದೆ.
ಜೆಎಸ್‌ಡಬ್ಲ್ಯು ಫೌಂಡೇಶನ್ ಮುಂದಿನ ಎರಡು ವರ್ಷಗಳ ಕಾಲ ಕೆರೆಯ ಸಂರಕ್ಷಣೆಗೆ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.












Click it and Unblock the Notifications