ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೆರೆ ದಾಟಿದರೆ ಅನಾಹುತವಾದೀತು, ಪೊಲೀಸರ ವಿನೂತನ ಟ್ವೀಟ್!

By Prasad
|
Google Oneindia Kannada News

ಬೆಂಗಳೂರು, ಜೂನ್ 21 : ಸೋಷಿಯಲ್ ಮೀಡಿಯಾ ಬಳಸುವುದರಲ್ಲಿ ಬಹುಶಃ ಬೆಂಗಳೂರು ನಗರ ಪೊಲೀಸರಿಗಿಂತ ಪರಿಣಾಮಕಾರಿಯಾಗಿ ಯಾವ ರಾಜ್ಯದ ಪೊಲೀಸರೂ ಬಳಸಿಕೊಳ್ಳುತ್ತಿಲ್ಲ ಎನ್ನುವುದಕ್ಕೆ ಟ್ವಿಟ್ಟರ್ ನಲ್ಲಿ ದಿನನಿತ್ಯ ಬರುವ ಪೋಸ್ಟ್ ಗಳೇ ಸಾಕ್ಷಿ.

ಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರ, 'ನಮ್ಮ100' ಸಹಾಯವಾಣಿಗೆ ಚಾಲನೆಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರ, 'ನಮ್ಮ100' ಸಹಾಯವಾಣಿಗೆ ಚಾಲನೆ

ನಿಯಮಗಳ ಬಗ್ಗೆ ನಯಾಪೈಸೆ ಕೇರ್ ಮಾಡದ ಜನರನ್ನು ಹದ್ದುಬಸ್ತಿನಲ್ಲಿಡಲು, ಟ್ರಾಫಿಕ್ ಬಗ್ಗೆ ಜಾಗೃತಿ ಮೂಡಿಸಲು, ಆಗಾಗ ರೇಶ್ಮೆಶಾಲು ಸುತ್ತಿ ಬಾರಿಸಲು, ಕ್ರಿಮಿನಲ್ ಬಗ್ಗೆ ಎಚ್ಚರಿಸಲು ಹಲವಾರು ನವನವೀನ ಪದ್ಧತಿಗಳನ್ನು ಅನುಸರಿಸುತ್ತಿರುತ್ತಾರೆ.

ಅದರಲ್ಲೂ, ಜೀಬ್ರಾ ಕ್ರಾಸಿಂಗ್ ದಾಟಿದರೆ ಎಂಥ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಬಳಸಲಾಗಿರುವ ಇನ್ಫೋಗ್ರಾಫಿಕ್ ಮಾತ್ರ ಉಳಿದೆಲ್ಲ ಪೋಸ್ಟ್ ಗಳಿಗಿಂತ ಸೂಪರ್ ಡೂಪರ್ ಆಗಿದೆ. ಆದರೆ, ಈ ಟ್ವೀಟ್ ಗೆ ಪರವಿರೋಧ ಟ್ವೀಟ್ ಗಳು ಕೂಡ ಹರಿದುಬಂದಿವೆ.

ಲಂಡನ್ ನಲ್ಲಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಜಸ್ಪ್ರಿತ್ ಬುಮ್ರಾ ಹಾಕಿದ 'ನೋಬಾಲ್' ಭಾರತಕ್ಕೆ ಎಷ್ಟು ದುಬಾರಿಯಾಯಿತು ಎಂಬುದನ್ನು ಟ್ರಾಫಿಕ್ ಸಿಗ್ನಲ್ ಗೂ ಬಳಸಿಕೊಂಡು ಜಾಣ್ಮೆ ಮೆರೆದಿದ್ದಾರೆ.

Respect the Stop Line : Crossing some lines can be devastating

ಜಸ್ಪ್ರಿತ್ ಬುಮ್ರಾ ಹಾಕಿದ ನೋಬಾಲ್ ನಿಂದಾಗಿ ಜೀವದಾನ ಪಡೆದ ಪಾಕಿಸ್ತಾನದ ಎಡಗೈ ಬ್ಯಾಟ್ಸ್ ಮನ್ ಫಖರ್ ಅತ್ಯದ್ಭುತ ಸೆಂಚುರಿ ಹೊಡೆದು ಪಾಕಿಸ್ತಾನಕ್ಕೆ ಚಾಂಪಿಯನ್ಸ್ ಟ್ರೋಫಿ ಸಿಗುವಂತೆ ಮಾಡಿದರು.

ಹುತಾತ್ಮ 'ಮೀಸೆ ತಿಮ್ಮಯ್ಯ' ನಮ್ಮ ಟ್ರಾಫಿಕ್ ಪೊಲೀಸರ ಹೆಗ್ಗುರುತುಹುತಾತ್ಮ 'ಮೀಸೆ ತಿಮ್ಮಯ್ಯ' ನಮ್ಮ ಟ್ರಾಫಿಕ್ ಪೊಲೀಸರ ಹೆಗ್ಗುರುತು

ಬುಮ್ರಾ ನೋಬಾಲ್ ಹಾಕದಿದ್ದರೆ ಭಾರತ ಪಾಕಿಸ್ತಾನವನ್ನು ಕಟ್ಟಿಹಾಕುತ್ತಿತ್ತೋ ಏನೋ? ಹಾಗೆಯೆ, ಜೀಬ್ರಾ ಕ್ರಾಸಿಂಗ್ ದಾಟದಿದ್ದರೆ ನೀವು ಕೂಡ ಅನಾಹುತದಿಂದ ಪಾರಾಗುತ್ತೀರಿ, ದಂಡದಿಂದ ಬಚಾವಾಗುತ್ತೀರಿ ಎಂಬ ಸಂದೇಶವನ್ನು ಬೆಂಗಳೂರಿನ ವಾಹನ ಸವಾರರಿಗೆ ರವಾನಿಸಿದ್ದಾರೆ ಬೆಂಗಳೂರು ಪೊಲೀಸರು. ಈ ಗ್ರಾಫಿಕ್ಕನ್ನು ಮೊದಲು ಬಳಸಿದವರು ಜೈಪುರ ಪೊಲೀಸರು.

#RespectTheStopLine ಎಂಬ ಹ್ಯಾಶ್ ಟ್ಯಾಗ್ ಹಾಕಿ, ನಿಲ್ಲಿಸು ಎಂಬ ಗೆರೆಯನ್ನು ದಾಟಬೇಡಿ, ದಾಟಿದರೆ ದಂಡ ಕಟ್ಟಿಟ್ಟ ಬುತ್ತಿ. ಇದನ್ನು ಎಷ್ಟು ಜನರು ಪಾಲಿಸುತ್ತಿದ್ದಾರೆ? ಎಷ್ಟು ವಾಹನ ಚಾಲಕರು ಉಲ್ಲಂಘಿಸಿ ರೊಯ್ಯನೆ ಗಾಡಿ ಓಡಿಸಿಕೊಂಡು ಪರಾರಿಯಾಗುತ್ತಿದ್ದಾರೆ? ಅವರಿಗೆಲ್ಲ ದಂಡ ವಿಧಿಸುತ್ತಿದ್ದಾರಾ ಪೊಲೀಸರು?

ರಾಷ್ಟ್ರಪತಿ ಇದ್ದರೂ ಆಂಬ್ಯುಲೆನ್ಸ್‌ಗೆ ದಾರಿಮಾಡಿಕೊಟ್ಟ ಪಿಎಸ್ಐರಾಷ್ಟ್ರಪತಿ ಇದ್ದರೂ ಆಂಬ್ಯುಲೆನ್ಸ್‌ಗೆ ದಾರಿಮಾಡಿಕೊಟ್ಟ ಪಿಎಸ್ಐ

ಇಂಥ ವಿನೂತನ ಕ್ರಮ ಅನುಸರಿಸಿದ್ದಕ್ಕೆ ಬೆಂಗಳೂರು ನಗರ ಪೊಲೀಸ್ ನ ಸೋಷಿಯಲ್ ಮೀಡಿಯಾ ವಿಭಾಗ ನಿಜಕ್ಕೂ ಅಭಿನಂದನೀಯ. ಹಾಗೆಯೆ, ಎಲ್ಲೆಲ್ಲಿ ಟ್ರಾಫಿಕ್ ಪೊಲೀಸ್ ಇಲ್ಲದೆ ವಿಪರೀತ ವಾಹನದಟ್ಟಣೆಯಾಗುತ್ತಿದೆಯೋ ಅಲ್ಲಿಯೂ ಪೊಲೀಸರನ್ನು ನೇಮಿಸಿ ಪೊಲೀಸರು ಅಭಿನಂದನೆಗೆ ಅರ್ಹರಾಗಲಿ.

English summary
Respect the Stop Line : Crossing some lines can be devastating. This tweet by Traffic DCP Abhishek Goel is innovative and makes the rider to think before crossing the stop line. For this, he has used the illustration of Bumrah crossing line to bowl a noball again Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X